Financial Gains Property Luck for These Zodiac Signs | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು, ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯ ಈ ದಿನ ಏಕಾದಶಿಯು ಮಧ್ಯಾಹ್ನ 12.11 ರವರೆಗೆ ಇದ್ದು, ತದನಂತರ ದ್ವಾದಶಿ ಆರಂಭವಾಗಲಿದೆ. ಮೃಗಶಿರಾ ನಕ್ಷತ್ರ ನಾಳೆ ಬೆಳಗಿನ ಜಾವ ಅಂದರೆ 4.29 ರವರೆಗೆ ಇರಲಿದ್ದು, ಆ ನಂತರ ಆರಿದ್ರಾ ನಕ್ಷತ್ರ ಬರುತ್ತದೆ. ಅಮೃತ ಘಳಿಗೆ ರಾತ್ರಿ 8.20 ರಿಂದ 9.48 ರವರೆಗೆ ಲಭ್ಯವಿವೆ. ರಾಹುಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಮತ್ತು ಯಮಗಂಡ ಕಾಲವು ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರುತ್ತದೆ. ಇಂದು ಭೀಷ್ಮ ಏಕಾದಶಿ ಎಂಬುದು ವಿಶೇಷ.


Daily Horoscope 29 January 2026 Financial Gains and Property Luck for These Zodiac Signs
ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗಲಿರುವ ಹೈ-ಸೆಕ್ಯೂರಿಟಿ ಜೈಲಿನ ಸ್ಥಳಕ್ಕೆ ಡಿಸಿ ಮತ್ತು ಎಸ್ಪಿ ಭೇಟಿ
ಇವತ್ತಿನ ರಾಶಿಪಲ
ಮೇಷ | ಕೆಲವು ಕೆಲಸ ಮುಂದೂಡಲ್ಪಡುವ ಸಾಧ್ಯತೆಗಳಿವೆ ಮತ್ತು ದೂರ ಪ್ರಯಾಣ. ಮನೆಯಲ್ಲಿ ಸಣ್ಣಪುಟ್ಟ ಕಿರಿಕಿರಿ ಹಾಗೂ ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಹಾಗೂ ವ್ಯಾಪಾರಗಳಲ್ಲಿ ನಿರೀಕ್ಷಿತ ಫಲಿತಾಂಶ.
ವೃಷಭ | ಉದ್ಯೋಗದ ಪ್ರಯತ್ನ ಸಫಲವಾಗಲಿವೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ, ಬಾಕಿ ಹಣ ವಸೂಲಾಗಲಿದೆ. ಆರ್ಥಿಕ ಚೇತರಿಕೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಆಶಾದಾಯಕವಾಗಿರುತ್ತದೆ.
ಮಿಥುನ | ಎಷ್ಟೇ ಶ್ರಮ ಪಟ್ಟರೂ ಅದಕ್ಕೆ ತಕ್ಕ ಪ್ರತಿಫಲ ದೊರೆಯುವುದು ಕಷ್ಟವಾಗಬಹುದು. ಆಸ್ತಿ ವಿವಾದ, ಮನಸ್ಸಿಗೆ ಬೇಸರ. ವ್ಯಾಪಾರ ವ್ಯವಹಾರ ಮಂದಗತಿಯಲ್ಲಿ ಸಾಗಲಿದ್ದು, ಉದ್ಯೋಗಿಗಳಿಗೆ ಸ್ಥಳ ಬದಲಾವಣೆ ಸೂಚನೆಯಿದೆ.
ಕರ್ಕಾಟಕ | ಸಂತೋಷವಾಗಿ ಕಾಲ ಕಳೆಯುವ ಅವಕಾಶ ಸಿಗಲಿದೆ.ಸೇವೆಗೆ ತಕ್ಕ ಮನ್ನಣೆ ಹಾಗೂ ಗೌರವ ದೊರೆಯಲಿದೆ, ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ ಹುಡುಕಿಕೊಂಡು ಬರಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಹುಮ್ಮಸ್ಸು ಕಂಡುಬರುತ್ತದೆ.

Daily Horoscope 29 January 2026 Financial Gains Property Luck for These Zodiac Signs
ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ
ಸಿಂಹ | ನಿರುದ್ಯೋಗಿಗಳಿಗೆ ಉದ್ಯೋಗದ ಕುರಿತಾದ ಒಂದು ಪ್ರಕಟಣೆ ಆಕರ್ಷಿಸಲಿದೆ. ಬೆಲೆಬಾಳುವ ವಸ್ತು ಮತ್ತು ವಸ್ತ್ರ ಖರೀದಿ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರ ವೃದ್ಧಿ ಹಾಗೂ ಉದ್ಯೋಗಿಗಳಿಗೆ ಒತ್ತಡ ಕಡಿಮೆಯಾಗಲಿದೆ.
ಕನ್ಯಾ | ಮನಸ್ತಾಪ ಉಂಟಾಗಬಹುದು. ದೂರ ಪ್ರಯಾಣ, ಕುಟುಂಬದಲ್ಲಿ ಒತ್ತಡದ ವಾತಾವರಣ. ಉದ್ಯೋಗದ ಪ್ರಯತ್ನಕ್ಕೆ ಅಡೆತಡೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ.
ತುಲಾ | ಕೈಗೊಂಡ ಕೆಲಸಗಳಲ್ಲಿ ಅಲ್ಪಮಟ್ಟದ ಅಡೆತಡೆ. ಸಂಬಂಧಿಕರೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ವ್ಯತ್ಯಾಸ. ಶ್ರಮದ ದಿನ ಅನಿರೀಕ್ಷಿತ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹ ಕಡಿಮೆಯಾಗಲಿದೆ
ವೃಶ್ಚಿಕ | ಅನ್ಯರ ಸಹಕಾರ ದೊರೆಯಲಿದೆ. ವ್ಯವಹಾರ ಸುಗಮವಾಗಿ ನಡೆಯಲಿದ್ದು, ಆಸ್ತಿಗೆ ಸಂಬಂಧಿಸಿದ ಹಳೆಯ ವಿವಾದ ಇತ್ಯರ್ಥವಾಗಲಿವೆ. ವ್ಯಾಪಾರ ಮತ್ತು ಉದ್ಯೋಗ ಸ್ಥಳದಲ್ಲಿ ಅನುಕೂಲಕರವಾದ ವಾತಾವರಣ ಇರಲಿದೆ.
ಬ್ಯಾಂಕ್ ನೌಕರರ ಬೃಹತ್ ಪ್ರತಿಭಟನೆ, ಶಿವಮೊಗ್ಗದಲ್ಲಿ ಬ್ಯಾಂಕಿಂಗ್ ಸೇವೆ ವ್ಯತ್ಯಯ, ಕಾರಣವೇನು
ಧನುಸ್ಸು | ಪ್ರಮುಖ ಮಾಹಿತಿಯೊಂದು ತಲುಪಲಿದೆ. ಔತಣಕೂಟದಲ್ಲಿ ಭಾಗಿಯಾಗುವಿರಿ ಗೌರವ ಹೆಚ್ಚಲಿದೆ. ವ್ಯಾಪಾರದಲ್ಲಿ ಗಳಿಕೆ ಹೆಚ್ಚಲಿದೆ ಹಾಗೂ ಉದ್ಯೋಗಿಗಳಿಗೆ ಹೊಸ ಸದ್ದಿ ಸಿಗಲಿದೆ.
ಮಕರ | ಕೆಲಸ ಕಾರ್ಯಗಳಲ್ಲಿ ವಿಳಂಬ. ಆರ್ಥಿಕ ವ್ಯವಹಾರ ಅಷ್ಟೊಂದು ಲಾಭದಾಯಕವಾಗಿರುವುದಿಲ್ಲ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ, ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಒತ್ತಡದ ದಿನ
ಕುಂಭ | ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ದೂರ ಪ್ರಯಾಣ , ಕುಟುಂಬದಲ್ಲಿ ನೆಮ್ಮದಿ ಕೆಡುವಂತಹ ಸನ್ನಿವೇಶ ಎದುರಾಗಲಿವೆ. ಅನಾರೋಗ್ಯ ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ ಹಾಗೂ ಉದ್ಯೋಗಿಗಳಿಗೆ ಕೆಲಸದ ಹೊರೆ.
ಮೀನ | ಉದ್ಯೋಗದ ಹೊಸ ಅವಕಾಶ ತೆರೆಯಲಿದೆ. ಅಂದುಕೊಂಡ ಕೆಲಸ ಅಪ್ರಯತ್ನವಾಗಿ ನೆರವೇರಲಿವೆ ಮತ್ತು ಸಮಾಜದಲ್ಲಿ ವರ್ಚಸ್ಸು ಹೆಚ್ಚಲಿದೆ.ಆರ್ಥಿಕ ವ್ಯವಹಾರ ಲಾಭದಾಯಕವಾಗಿರುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ.

Daily Horoscope 29 January 2026 Financial Gains Property Luck for These Zodiac Signs
ಇಂದಿನ ರಾಶಿ ಭವಿಷ್ಯ | ಇಂದು ಭೀಷ್ಮ ಏಕಾದಶಿ | ಆಸ್ತಿ ಲಾಭ, ಧನಲಾಭ, ವ್ಯಾಪಾರದಲ್ಲಿ ಭರ್ಜರಿ ಗಳಿಕೆ!ಯಾರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ?
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ದಿನ ಭವಿಷ್ಯ 29 ಜನವರಿ 2026: ಈ ರಾಶಿಯವರಿಗೆ ಆಸ್ತಿ ಮತ್ತು ಧನ ಲಾಭ – ಇಂದಿನ ಪಂಚಾಂಗ
Daily Horoscope 29 January 2026 Financial Gains Property Luck for These Zodiac Signs

