ಹೊಸನಗರ: ತಾಲೂಕಿನ ಯಡೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿದೆ.

ಮನೆ ಮಾಲೀಕರು ಶಿವಮೊಗ್ಗದಲ್ಲಿದ್ದಾಗ ಆನವಟ್ಟಿಯಲ್ಲಿ ನಡೀತು ಈ ಘಟನೆ
ಸುಮಾರು 5 ವರ್ಷ ಪ್ರಾಯದ ಈ ಚಿರತೆಯು ಅನಾರೋಗ್ಯ ಅಥವಾ ವಯೋಸಹಜ ಕಾರಣಗಳಿಂದ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ (Natural Death). ಘಟನಾ ಸ್ಥಳಕ್ಕೆ ದೌಡಾಯಿಸಿದ ಆರ್‌ಎಫ್‌ಒ ಸಂತೋಷ್ ಮಲ್ಲನಗೌಡ್ರ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪಶು ವೈದ್ಯಾಧಿಕಾರಿಗಳು ನಡೆಸಿದ ಮರಣೋತ್ತರ ಪರೀಕ್ಷೆಯ (Post-mortem) ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ (Forensic Investigation).
ಅರಣ್ಯ ಇಲಾಖೆಯ ನಿಯಮಗಳ ಪ್ರಕಾರ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತದೇಹ ಪತ್ತೆಯಾದ ಜಾಗದಲ್ಲೇ ಚಿರತೆಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
Leopard Found Dead in Hosanagara’s Yaduru Village
