ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ ಜಾತ್ರೆ ಮೈದಾನ ಗ್ರಾಮದಲ್ಲಿ ರಾತ್ರಿಯ ವೇಳೆ ಅಡಕೆ ಕಣದಲ್ಲಿ ಮಲಗಿದ್ದ ಸಾಕು ನಾಯಿಯನ್ನು ಚಿರತೆಯೊಂದು ಬೇಟೆಯಾಡಿದೆ. ಗ್ರಾಮದ ನಿವಾಸಿ ಬಸವರಾಜ್ ಎಂಬುವವರು ತಮ್ಮ ಮನೆಯ ಅಂಗಳದಲ್ಲಿ ಅಡಕೆಯನ್ನು ಒಣಗಿಸಲು ಹಾಕಿದ್ದರು.
ಶಿವಮೊಗ್ಗ: ನಾಳೆ ಆರ್.ಎಂ.ಎಲ್. ನಗರದ ಹಲವೆಡೆ ವಿದ್ಯುತ್ ವ್ಯತ್ಯಯ
ಅಡಕೆ ಕಳ್ಳತನ ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಡಕೆಗೆ ಕಾವಲಿಗೆ ಮನೆಯಲ್ಲಿ ಸಾಕಿದ್ದ ಜರ್ಮನ್ ಶೆಫರ್ಡ್ ತಳಿಯ (Shepherd dog) ನಾಯಿಯನ್ನು ಅಂಗಳದಲ್ಲಿ ಕಟ್ಟಿಹಾಕಿದ್ದರು. ಆದರೆ ಮಧ್ಯರಾತ್ರಿ ಅಂಗಳಕ್ಕೆ ಬಂದ ಚಿರತೆ ನಾಯಿಯ ಮೇಲೆ ಏಕಾಏಕಿ ಎರಗಿದೆ. ನಾಯಿಯ ಕುತ್ತಿಗೆಯನ್ನು ಬಲವಾಗಿ ಕಚ್ಚಿ ಹಿಡಿದ ಚಿರತೆಯು ಅಲ್ಲಿಂದ ಎಳೆದೊಯ್ದಿದೆ.

ಹೊಸನಗರ: ಮನೆಯಂಗಳಕ್ಕೆ ನುಗ್ಗಿ ನಾಯಿಯ ಮೇಲೆ ಚಿರತೆ ದಾಳಿ; ಸಿಸಿಟಿವಿಯಲ್ಲಿ ದೃಷ್ಯ ಸೆರೆ
ಚಿರತೆಯು ನಾಯಿಯನ್ನು ಬೇಟೆಯಾಡುವ ಪ್ರತಿಯೊಂದು ದೃಶ್ಯವೂ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ತರೀಕೆರೆ: ಅಡಕೆ ಕಣದಲ್ಲಿ ಮಲಗಿದ್ದ ಜರ್ಮನ್ ಶೆಫರ್ಡ್ ನಾಯಿಯನ್ನು ಹೊತ್ತೊಯ್ದ ಚಿರತೆ , Tarikere Leopard hunts German Shepherd dog from arecanut yard
