Shivamogga Passengers Missing in Hiriyur Bus Accident ಶಿವಮೊಗ್ಗ : ಚಿತ್ರದುರ್ಗ ಜಿಲ್ಲೆ, ಹಿರಿಯೂರಿನಲ್ಲಿ ಸಂಭವಿಸಿದ ಅವಗಢದಲ್ಲಿ ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಬಗ್ಗೆ ಇನ್ನೂ ಸಹ ಮಾಹಿತಿಯು ಲಭ್ಯವಾಗುತ್ತಿಲ್ಲ. ಬೆಂಗಳೂರು ಯಶವಂತಪುರದಿಂದ ಇಬ್ಬರು ಸಿಬರ್ಡ್ ಬಸ್ನಲ್ಲಿ ಪ್ರಯಾಣಿಸಿದ್ದರು. ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಲಭ್ಯ ಮಾಹಿತಿ ಪ್ರಕಾರ, ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸಂಭವಿಸಿದ್ದ ಅಪಘಾತದಲ್ಲಿ ಸಿಬರ್ಡ್ ಬಸ್ ಸಂಫೂರ್ಣವಾಗಿ ಹೊತ್ತಿ ಉರಿದಿತ್ತು.
ಈ ಬಸ್ ದುರಂತದಲ್ಲಿ ಐವರು ಮೃತಪಟ್ಟಿದ್ದಾಗಿ ಅಧಿಕೃತವಾಗಿ ವರದಿಯಾಗಿದೆ. ಆದಾಗ್ಯು ಇದೇ ಬಸ್ನಲ್ಲಿ ಪ್ರಯಾಣಿಸಿದ್ದ ಕೆಲವರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತದೇಹಗಳ ಡಿಎನ್ಎ ಪರಿಶೀಲನೆ ಬಳಿಕವಷ್ಟೆ ಗುರುತು ಪತ್ತೆ ಹಚ್ಚಲು ಸಾಧ್ಯ. ಈ ಮಧ್ಯೆ ಐವರು ಪ್ರಯಾಣಿಕರ ಸಾವು ಅಧಿಕೃತಗೊಂಡಿದ್ದು, ಮಾಹಿತಿ ಲಭ್ಯವಾಗದ ಪ್ರಯಾಣಿಕರ ಬಗ್ಗೆ ಸುಳಿವು ಸಿಗಬೇಕಿದೆ. ಇನ್ನೂ ಹೀಗೆ ಮಾಹಿತಿ ಸಿಗದ ಪ್ರಯಾಣಿಕರ ಪೈಕಿ ಶಿವಮೊಗ್ಗದ ಇಬ್ಬರು ಪ್ರಯಾಣಿಕರು ಇದ್ದಾರೆ ಎಂದು ಹೇಳಲಾಗುತ್ತಿದೆ.
Shivamogga Passengers Missing in Hiriyur Bus Accident
ಬೆಂಗಳೂರಿನಿಂದ ಸಾಗರ ಹಾಗೂ ಹೊನ್ನಾವರ ಮಾರ್ಗವಾಗಿ ಸಂಚರಿಸುವ ಸೀಬರ್ಡ್ ಟೂರಿಸ್ಟ್ ಸಂಸ್ಥೆಗೆ ಸೇರಿದ ಕೆಎ 01, ಎಇ-5217 ನೋಂದಣಿ ಸಂಖ್ಯೆಯ ಬಸ್ಸಿನಲ್ಲಿ ಶಿವಮೊಗ್ಗ ನಗರದ ನಿವಾಸಿಗಳಾದ ಮಸ್ರತುನ್ನಿಸಾ .ಎಸ್ ಮತ್ತು ಸೈಯದ್ ಜಮೀರ್ ಗೌಸ್ ಎಂಬುವವರು ಬೆಂಗಳೂರಿನ ಯಶವಂತಪುರದಿಂದ ಪ್ರಯಾಣಿಸಿದ್ದರು ಎಂಬ ಬಸ್ ಟಿಕೆಟ್ನ ವಿವರ ಲಭ್ಯವಾಗಿದೆ. ಅಪಘಾತದ ನಂತರ ಇವರಿಬ್ಬರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗುತ್ತಿಲ್ಲ ಹಾಗೂ ಅವರ ಮೊಬೈಲ್ ಸಂಖ್ಯೆ 9663277553 ಕೂಡ ಸ್ವಿಚ್ ಆಫ್ ಆಗಿದೆ. ಸದ್ಯ ಇವರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿರುವುದರ ಜೊತೆಗೆ ಇಬ್ಬರು ಸಹ ಸುರಕ್ಷಿತವಾಗಿರಲಿ ಎಂಬ ಪ್ರಾರ್ಥನೆಯಿದೆ.

ಭದ್ರಾ ಆನೆಯ ಶಿವಮೊಗ್ಗ ರೌಂಡ್ಸ್! ಶಿಕಾರಿಪುರದದಲ್ಲಿ ಕಾಣಿಸಿದ ಕಾಡಾನೆ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
ಹಿರಿಯೂರು ಬಸ್ ಅಪಘಾತ ಶಿವಮೊಗ್ಗದ ಇಬ್ಬರು ಪ್ರಯಾಣಿಕರ ಮಾಹಿತಿ ಇನ್ನೂ ನಿಗೂಢ | Shivamogga Passengers Missing in Hiriyur Bus Accident
