ಶಿವಮೊಗ್ಗ:ಆನ್‌ಲೈನ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯಲು ಹೋಗಿ ತೀರ್ಥಹಳ್ಳಿ ತಾಲೂಕಿನ ಹಂಚದಕಟ್ಟೆ ನಿವಾಸಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ ₹82,520 ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಜ್ಜವಳ್ಳಿ: ಬೇಕರಿಯಲ್ಲಿ ಹಣ ಕೇಳಿದಾತನ ಮೇಲೆ ಕೊಡಲಿಯಿಂದ ಹಲ್ಲೆ, ಏನಿದು ಪ್ರಕರಣ
ಹುಂಚದ ಕಟ್ಟೆಯ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳಿಗಾಗಿ ಹುಡುಕಾಡುತ್ತಿದ್ದಾಗ, ಅವರಿಗೆ ‘PLANETSPARK’ ಎಂಬ ಕಂಪನಿಯ ಜಾಹೀರಾತು ಸಿಕ್ಕಿದೆ. ಆ ಜಾಹೀರಾತಿನ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಕಂಪನಿಯ ಹೋಂ ಪೇಜ್ ಓಪನ್ ಆಗಿದ್ದು, ಅವರು ತಮ್ಮ ವೈಯಕ್ತಿಕ ಮಾಹಿತಿ ಹಾಗೂ OTP ನೀಡಿ ರಿಜಿಸ್ಟರ್ ಆಗಿ ಲಾಗಿನ್ ಮಾಡಿದ್ದಾರೆ.ನವೆಂಬರ್ 30, 2025 ರಂದು ಮಧ್ಯಾಹ್ನ 12:30 ಕ್ಕೆ ಡೆಮೊ ತರಗತಿ ತೆಗೆದುಕೊಳ್ಳಲು ಪ್ರೊಸೆಸಿಂಗ್ ಫೀಜ್ ಪಾವತಿಸಬೇಕು ಎಂದು ವಂಚಕರು ತಿಳಿಸಿದ್ದು, ಅದಕ್ಕಾಗಿ ನೀಡಿದ QR ಕೋಡ್‌ಗೆ ದೂರುದಾರರು 5,000 ಹಣವನ್ನು ಹಾಕಿರುತ್ತಾರೆ. ತದನಂತರ, ಅಪರಿಚಿತ ಮೊಬೈಲ್ ನಂಬರ್‌ನಿಂದ ಅವರ ಪತ್ನಿಯ ಮೊಬೈಲ್‌ಗೆ ಕರೆ ಮಾಡಿ ತರಗತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.
Cyber Fraud ಆದರೆ, ತರಗತಿಗಳು ಇಷ್ಟವಾಗದ ಕಾರಣ ದೂರುದಾರರು ಕಂಪನಿಯ ಕಸ್ಟಮರ್ ಜಿ-ಮೇಲ್ ಹಾಗೂ ಮೊಬೈಲ್ ನಂಬರ್‌ಗೆ ಕರೆ ಮಾಡಿ ಹಣವನ್ನು ವಾಪಸ್ಸು ನೀಡಬೇಕೆಂದು ಕೇಳಿದ್ದಾರೆ. ಆದರೆ ಅವರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ನಂತರ, ಅವರ ಪತ್ನಿಯ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದ್ದು, ತರಗತಿಗಳನ್ನು ನಿಲ್ಲಿಸಲಾಗುವುದಿಲ್ಲ ಮತ್ತು ಹಣವನ್ನು ವಾಪಸ್ಸು ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.ಡಿಸೆಂಬರ್ 12, 2025 ರಂದು ದೂರುದಾರರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ, ಅಸಲಿ ವಿಷಯ ಬಯಲಾಗಿದೆ. ನವೆಂಬರ್ 30, 2025 ರಂದು ಲಾಗಿನ್‌ಗೆ OTP ನೀಡಿದಾಗಲೇ, ದೂರುದಾರರಿಗೆ ತಿಳಿಯದಂತೆ ಅವರ ಮೊಬೈಲ್ ನಂಬರ್ ಬಳಸಿ ಬೇರೊಂದು HDFC ಬ್ಯಾಂಕ್‌ನಲ್ಲಿ ಲೋನ್ ಖಾತೆಯನ್ನು ತೆರೆದು, ಬರೋಬ್ಬರಿ ₹77,520 ರೂಪಾಯಿಗಳ ಲೋನ್ ಪಡೆದು ವಂಚಿಸಲಾಗಿದೆ.
ಒಟ್ಟಾರೆಯಾಗಿ, PLANETSPARK ಕಂಪನಿಯವರಂತೆ ನಟಿಸಿದ ಸೈಬರ್ ವಂಚಕರು OTP ಪಡೆದುಕೊಂಡು, ಫಿರ್ಯಾದಿಯ ಮೊಬೈಲ್ ನಂಬರ್ ಬಳಸಿ ಲೋನ್ ಖಾತೆ ತೆರೆದು, ಡೆಮೊ ಫೀಸ್ ₹5,000 ಹಾಗೂ ಲೋನ್ ಹಣ ₹77,520 ಸೇರಿ ಒಟ್ಟು ₹82,520 ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಕೊಂಡು ವಂಚಿಸಿರುವುದು ದೂರಿನಲ್ಲಿ ತಿಳಿದು ಬಂದಿದೆ.
Cyber Fraud Man Loses in 82 Thousand
