ಸೂಳೆಬೈಲ್‌ನ ಮನೆಯೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ 

prathapa thirthahalli
Prathapa thirthahalli - content producer

ಶಿವಮೊಗ್ಗ: ನಗರದ ಸೂಳೆಬೈಲ್‌ನ ಈದ್ಗಾ ನಗರದ 5ನೇ ಅಡ್ಡರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಯಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Shivamogga Fire Breaks Out at House in Solebail
Shivamogga Fire Breaks Out at House in Solebail

ಶಿವಮೊಗ್ಗ ಸೇರಿ 10 ಕಡೆಗಳಲ್ಲಿ ಲೋಕಾಯುಕ್ತ ರೇಡ್​ನಲ್ಲಿ ಸಿಕ್ಕಿದ್ದು ಲಕ್ಷ ಲಕ್ಷ ಅಲ್ಲ! ಕೋಟಿ…! ಕೋಟಿ!

ಸೂಳೆಬೈಲ್‌ ಈದ್ಗಾ ನಗರದ ನಿವಾಸಿ ಅಮ್ರೀನ್ ತಾಜ್ ಎಂಬುವವರ ಮನೆಯಲ್ಲಿ ಮಂಗಳವಾರ ಸಂಜೆ ದಟ್ಟ ಹೊಗೆ ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಹೊಗೆಯು ಬೆಂಕಿಯಾಗಿ ಮಾರ್ಪಟ್ಟು ಉರಿಯಲಾರಂಭಿಸಿತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

Shivamogga Fire Breaks Out at House in Solebail

Shivamogga Fire Breaks Out at House in Solebail

Share This Article