SHIVAMOGGA NEWS TODAY

BREAKING NEWS | ಶಿವಮೊಗ್ಗ ಈದ್ಗಾ ಮೈದಾನದ ವಿವಾದ ಸುಖಾಂತ್ಯ | ಹಿಂದಿನಂತೆ ಬಳಕೆ ಅವಕಾಶ! ನಡೆದಿದ್ದಿಷ್ಟು!

13 ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 9, 2025 ‌‌ 

ಶಿವಮೊಗ್ಗದ ಮಟ್ಟಿಗೆ ದೊಡ್ಡದೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗ ನಗರದ ಡಿಸಿ ಆಪೀಸ್ ಎದುರಿನ ಖಾಲಿ ಜಾಗದ ವಿವಾದ ಸುಖಾಂತ್ಯ ಕಂಡಿದೆ. ಜಾಗದಲ್ಲಿ ಈ ಹಿಂದಿನಂತೆ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಕರಣ ಸುಖಾಂತ್ಯ ಕಂಡಿರುವುದಾಗಿ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮ ಸಂದೇಶ ರವಾನೆ ಮಾಡಿದ್ದಾರೆ. 

ಕಳೆದ ಕೆಲವು ದಿನಗಳಿಂದ ಈದ್ಗಾ ಮೈದಾನ ಎಂದು ಕರೆದುಕೊಳ್ಳುವ ಜಾಗದ ವಿಚಾರವಾಗಿ ಸಾಕಷ್ಟು ವಿವಾದ ಏರ್ಪಟ್ಟಿದ್ದವು. ಈ ಸಂಬಂಧ ದಿಢೀರ್ ಎಂಬಂತೆ ಜಾಗಕ್ಕೆ ಬೇಲಿ ಬಿದ್ದಿದ್ದು ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ ಈ ಸಂಬಂಧ ಹಿಂದೂ ಪರ ಸಂಘಟನೆಗಳು ರಾಷ್ಟ್ರಭಕ್ತ ಬಳಗ, ಬಿಜೆಪಿ ಮುಖಂಡರು ಹಾಗೂ ಶಾಸಕರು ಜಿಲ್ಲಾಡಳಿತಕ್ಕೆ ವಿವಾದ ಬಗೆಹರಿಸುವ ಡೆಡ್​ಲೈನ್ ನೀಡಿದ್ದರು. ಇನ್ನೊಂದಡೆ ಜಾಗದ ಮಾಲಿಕತ್ವಕ್ಕಾಗಿ ಮುಸ್ಲಿಮ್​ ಸಂಘಟನೆಯ ಮುಖಂಡರು ಪ್ರತಿಭಟಿಸಿದ್ದರು. 

ಈ ನಡುವೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲಾ ಮುಖಂಡರನ್ನು ಕರೆದು ಮಾತನಾಡಿ ಪ್ರಕರಣವನ್ನು ಮಾತುಕತೆಯಲ್ಲಿ ಇತ್ಯರ್ಥ ಪಡಿಸಿದೆ. ಎಲ್ಲಾ ಪಕ್ಷದ ಹಾಗೂ ಧರ್ಮದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಅಧಿಕಾರಿಗಳು ವಿಚಾರವನ್ನು ಸೌಹಾರ್ಧಯುತವಾಗಿ ಬಗೆ ಹರಿಸಿದ್ದಾರೆ. ಅಲ್ಲದೆ ನಾಳೆಯಿಂದಲೇ ಈದ್ಗಾ ಮೈದಾನದಲ್ಲಿ ಈ ಹಿಂದಿನಂತೆ ವಾಹನಗಳ ಪಾರ್ಕಿಂಗ್​ಗೆ ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್​ ಮಾಹಿತಿ ನೀಡಿದ್ದಾರೆ. 

ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು? 

ಎಲ್ಲರಿಗೂ ಶುಭೋದಯ.. ಡಿಸಿ ಕಚೇರಿ ಮುಂಭಾಗದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ. ಈ ಸಂಬಂಧಪ ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಲಾಗಿದ್ದು, ವಿಚಾರ ಇತ್ಯರ್ಥಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ.

ಸಿಸಿ ಕ್ಯಾಮೆರಾಗಳು, ದೀಪಗಳು ಮತ್ತು ಸ್ವಚ್ಛತೆಗಾಗಿ ಬೇಡಿಕೆ ವ್ಯಕ್ತವಾಗಿದ್ದು, ಇದನ್ನು ಆಡಳಿತ ವ್ಯವಸ್ಥೆಯಿಂದ ಕೈಗೊಳ್ಳಲು ಸಮ್ಮತಿಸಲಾಗಿದೆ. ನಾಳೆ ಬೆಳಿಗ್ಗೆ 10 ಗಂಟೆಯಿಂದ ಈ ಹಿಂದೆ ಬಳಸಲಾಗುತ್ತಿದ್ದಂತೆ, ಜಾಗವನ್ನು ಪಾರ್ಕಿಂಗ್‌ಗಾಗಿ ಬಳಕೆ ಮಾಡಿಕೊಳ್ಳಲು ಅನುಮತಿಸಲಾಗಿದೆ. ಈ ನಿಟ್ಟಿನಲ್ಲಿ ಸಹಕರಿಸಿದ ಮತ್ತು ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಸಹಾಯ ಮಾಡಿದ ಸಾರ್ವಜನಿಕರು, ಸಮುದಾಯದ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

 

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
13