ಜಲಜೀವನ್ ಮಿಷನ್ ಹೊಂಡದಲ್ಲಿ ಬಿದ್ದು ಸಿಕ್ಕಿಬಿದ್ದ ಕಳ್ಳ | ಏನಿದು ಘಟನೆ.

ಹಂಚಿಕೊಳ್ಳಿ
WhatsApp Facebook X Telegram
Shivamogga Arecanut Auction
Shivamogga Arecanut Auction

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 9, 2025

ಬೀಗ ಒಡೆದು ಮನೆ ಕಳ್ಳತನಕ್ಕೆಂದು ಬಂದ ಕಳ್ಳನೊಬ್ಬ ಜಲಜೀವನ್ ಮಿಷನ್​​ ಯೋಜನೆಯ ಹೊಂಡಕ್ಕೆ ಬಿದ್ದಿದ್ದು, ಆತನನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ

ದೆಮ್ಲಾಪುರ ಗ್ರಾಮದ ಚಂದ್ರಶೇಖರ್​ ತಮ್ಮ ತೋಟಕ್ಕೆ ಔಷದಿ ಸಿಂಪಡಿಸಲು ತೆರಳಿದ್ದರು. ಅವರ ಹೆಂಡತಿ ಮಕ್ಕಳು ಸಹ ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದು ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಚಂದ್ರಶೇಖರ್​ ಔಷದಿ ಸಿಂಪಡಸಿ ಮನೆಗೆ ಬರುವಾಗ ಯಾರೋ ಕಳ್ಳ ಬಾಗಿಲು ಒಡೆಯುವ ಶಬ್ದ ಅವರಿಗೆ ಕೇಳಿಸಿದೆ. ಇದನ್ನು ಗಮನಿಸಿದ ಮನೆಮಾಲಿಕರು ಜೋರಾಗಿ ಕೂಗಿದ್ದಾರೆ. ಆಗ ಮನೆಯ ಸುತ್ತಮುತ್ತಲಿನವರೆಲ್ಲಾ ಸ್ಥಳಕ್ಕೆ ಬಂದಿದ್ದಾರೆ. ಇದರಿಂದ ಆತಂಕಗೊಂಡ  ಕಳ್ಳ ಸ್ಥಳದಿಂದ ಓಡಲು ಆರಂಭಿಸಿದ್ದಾನೆ. ಓಡುವ ಭರದಲ್ಲಿ ಜಲಜೀವನ ಪೈಪ್ ಅಳವಡಿಸಲು ತೆಗೆದಿದ್ದ ಚರಂಡಿಗೆ ಬಿದ್ದ್ದು ಗಾಯಗೊಂಡಿದ್ದಾನೆ. ನಂತರ ಆತನನ್ನು ಅಕ್ಕಪಕ್ಕದ ಮನೆಯವರು ಮೇಲಕ್ಕೆ ಎತ್ತಿ ಉಪಚರಿಸಿ ನಂತರ ಅವನಿಗೆ ಪೆಟ್ಟಾಗಿರಬಹುದೆಂದು ತಿಳಿದು ಚಿಕಿತ್ಸೆ ಕೊಡಿಸುವ ಸಲುವಾಗಿ  ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಕಳ್ಳತನಕ್ಕೆ ಯತ್ನಿಸಿದಾತನ ಹೆಸರನ್ನು ಹನೀಫ್​ ಎಂದು ತಿಳಿದು ಆತನ ಮೇಲೆ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಂದ್ರುಶೇಕರ್​ ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

SUMMARY | A thief, who had come to steal a house after breaking the lock, fell into a pit under the Jal Jeevan Mission scheme and was rescued by the villagers and rushed to a hospital at Demlapura village in Thirthahalli taluk.

KEYWORDS | Thirthahall, thief,  Jal Jeevan Mission scheme, 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor