ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ತಾಲ್ಲೂಕಿನ ಐಕಾನಿಕ್ ಎನಿಸಿರುವ 156 ವರ್ಷದ ಭದ್ರಾ ಸೇತುವೆಯಲ್ಲಿ ಹೊಸದೊಂದು ಕಾಮಗಾರಿ ಆರಂಭವಾಗಿದೆ. ಪ್ಯಾರಫಿಟ್ ವಾಲ್ ನವೀಕರಣ ಕಾಮಗಾರಿ ಶುರುವಾಗಿದ್ದು, ಸದ್ಯ ಕಾಮಗಾರಿ ಕಾರಣಕ್ಕೆ ವಾಹನಸವಾರರಿಗೆ ಶ್ರೀ ವಿಶ್ವಕರ್ಮ ಶಿಲ್ಪಿ ಅಮರಶಿಲ್ಪಿ ಜಕಣಚಾರಿ ಸೇತುವೆ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭದ್ರಾ ಬ್ರಿಡ್ಜ್ಗೆ ಪ್ಯಾರಲಲ್ ಆಗಿ ವಿಶ್ವಕರ್ಮ ಶಿಲ್ಪಿ ಅಮರಶಿಲ್ಪಿ ಜಕಣಚಾರಿ ಸೇತುವೆ ನಿರ್ಮಿಸಲಾಗಿತ್ತು. ಆನಂತರದಲ್ಲಿ ವಾಹನಗಳ ದಟ್ಟಣೆ ಹಿನ್ನೆಲೆ ಭದ್ರಾ ಸೇತುವೆಯ ಮೇಲೂ ಏಕಮುಖ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ಭದ್ರಾ ಸೇತುವೆಯ ಎರಡೂ ಬದಿಯ ಪ್ಯಾರಫಿಟ್ ವಾಲ್ಗಳನ್ನು ನವೀಕರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆಯಿಂದ 1870ರಲ್ಲಿ ಸುಮಾರು ₹74,997 ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭದ್ರಾ ಸೇತುವೆಯನ್ನು ಹಂತ ಹಂತವಾಗಿ ನವೀಕರಿಸಿಕೊಂಡಲ್ಲಿ ಇನ್ನೂ ಹೆಚ್ಚಿನ ವರ್ಷಗಳ ಕಾಲ ಬಳಕೆಗೆ ಅನುಕೂಲವಾಗಲಿದೆ.
