ಶಿವಮೊಗ್ಗ : ಮೆಸೇಜ್​ ಬಂತೆಂದು ಮೊಬೈಲ್​ ನೋಡಿದ ಡ್ರೈವರ್​​ಗೆ ಕಾದಿತ್ತು ಶಾಕ್​ : 4 ಲಕ್ಷಕ್ಕೂ ಹೆಚ್ಚು ರೂ. ವಂಚನೆ

ಹಂಚಿಕೊಳ್ಳಿ
WhatsApp Facebook X Telegram
Shivamogga Cyber Fraud Shivamogga Cyber ScamThirthahalli Shivamogga Cyber Crime
Shivamogga Cyber Fraud Shivamogga Cyber ScamThirthahalli Shivamogga Cyber Crime

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದಲ್ಲಿ ಡ್ರೈವರ್​ ಒಬ್ಬರ ವೈಯಕ್ತಿಕ ಮಾಹಿತಿ ಪಡೆದು ಸೈಬರ್​ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಿಇಎನ್‌ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ದೂರುದಾರರು ಹೀಗೆ ಕುಳಿತಿದ್ದಾಗ ಮೊಬೈಲ್​​ಗೆ ಮೆಸೇಜ್​ ಒಂದು ಬಂದಿದೆ. ಏನಿದು ಎಂದು ತೆರೆದು ನೋಡಿದಾಗ ದೂರುದಾರರಿಗೆ ಶಾಕ್​ ಎದುರಾಗಿದೆ. ಅದೇನೆಂದರೆ, ಮೊಬೈಲ್‌ನಲ್ಲಿ ಹಂತ-ಹಂತವಾಗಿ ಬರೋಬ್ಬರಿ 4,04,125 ರೂಪಾಯಿ ಹಣ ವಿತ್​​ಡ್ರಾ ಆಗಿರುವ ಮೆಸೇಜ್ ಬಂದಿದೆ.

ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ಯಾರೋ ಅಪರಿಚಿತ ವ್ಯಕ್ತಿಗಳು ದೂರುದಾರರ ವೈಯಕ್ತಿಕ ಮಾಹಿತಿ ಪಡೆದು, ದೂರುದಾರರಂತೆ ನಟಿಸಿ ಬ್ಯಾಂಕ್ ಖಾತೆಯಿಂದ ಒಟ್ಟು 4,04,125/- ರೂ. ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಂಚಕರನ್ನು ಪತ್ತೆಹಚ್ಚಿ ಹಣವನ್ನು ಹಿಂತಿರುಗಿಸಿಕೊಡಬೇಕೆಂದು ಶಿವಮೊಗ್ಗದ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor