KARNATAKA NEWS/ ONLINE / Malenadu today/ May 6, 2023 GOOGLE NEWS
ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 / ಹಿನ್ನೆಲೆಯಲ್ಲಿ ಮತದಾರರನ್ನ ಮತಗಟ್ಟೆಗೆ ಸೆಳೆಯುವ ಪ್ರಯತ್ನವನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಜಾಗೃತಿ ಮೂಲಕ ಮತದಾರರಿಗೆ ಚುನಾವಣೆಯ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಮತಗಟ್ಟೆಗಳಿಗೆ ತೆರಳಿ ಮರೆಯದೇ ಮತದಾನ ಮಾಡುವಂತೆ ಮನವಿ ಮಾಡಲಾಗ್ತಿದೆ.
ಈ ನಿಟ್ಟಿನಲ್ಲಿ ಸ್ವೀಪ್ ಸಮಿತಿ ಸದಸ್ಯರು, ಈ ಹಿಂದಿನ ಚುನಾವಣೆಯಲ್ಲಿ ಎಲ್ಲೆಲ್ಲಿ ಕಡಿಮೆ ಮತದಾನವಾಗಿತ್ತೋ ಆ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.
ಪೂರಕವೆಂಬಂತೆ ನಿನ್ನೆ ಅಂದರೆ, ದಿನಾಂಕ 05/05/2023 ರಂದು, ಈ ಹಿಂದೆ ಕಡಿಮೆ ಮತದಾನವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಗೆಹಟ್ಟಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಬಿ ಸ್ಟ್ರೀಟ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಸೆಫ್ ನಗರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಾಪೂಜಿನಗರದಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು
Bhadravati/ ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್
ಭದ್ರಾವತಿ/ ಶಿವಮೊಗ್ಗ/ ಇಲ್ಲಿನ ಹೊಸಳ್ಳಿ ತೋಟದ ಮನೆಯ ಸಮೀಪ ಸಂಜೆ ಹೊತ್ತಿನಲ್ಲಿಯೇ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಲಾಗಿದೆ. ಕಳೆದ ಮೂರನೇ ತಾರೀಖು ನಡೆದ ಘಟನೆ ಇದಾಗಿದ್ದು, ನಾಲ್ಕರಂದು ಈ ಸಂಬಂಧ ಕೇಸ್ ದಾಖಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಆತಂಕ ಮೂಡಿಸುತ್ತಿದೆ.
ನಡೆದಿದ್ದೇನು?
ಮೂರನೇ ತಾರೀಖು ಎಳುವರೆ ಸುಮಾರಿಗೆ, ತಾಯಿ ಮಗಳು ಮೊಮ್ಮಗು ಇದ್ದ ಮನೆಯೊಂದರ ಬಾಗಿಲನ್ನ ಅಪರಿಚಿತರು ಬಡಿದಿದ್ದಾರೆ. ಯಾರು ಬಾಗಿಲು ತಟ್ಟಿದ್ದಾರೆ ಎಂದು ತೆರೆದು ನೋಡಿದಾಗ, ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ಕೈಗೆ ಗ್ಲೌಸ್ ಹಾಕಿಕೊಂಡು ಮುಖಕ್ಕೆ ಮುಸುಕು ಕಟ್ಟಿಕೊಂಡಿದ್ದ ಆರೋಪಿಗಳು, ತಾಯಿ ಹಾಗೂ ಮಗಳ ಕೈ ಕಟ್ಟಿ ಹಾಕಿ, ಬೀರುವಿನಲ್ಲಿದ್ದ ಹಣ, ಒಡವೆಯನ್ನ ದೋಚಿದ್ಧಾರೆ. ಆನಂತರ ಮಗುವಿನ ಕುತ್ತಿಗೆಗೆ ಚಾಕು ಹಿಡಿದು, ತಾಯಿ ಮಗಳ ಮೈಮೇಲಿದ್ದ ಒಡವೆಗಳನ್ನ ನೀಡುವಂತೆ ಕೇಳಿದ್ದಾರೆ. ಅಲ್ಲದೆ ಕಿರುಚಿದರೇ ಸಾಯಿಸುತ್ತೇವೆ ಎಂದು ಹೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಸದ್ಯ ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಭದ್ರಾವತಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
Malenadutoday.com Social media
