KARNATAKA NEWS/ ONLINE / Malenadu today/ May 5, 2023 GOOGLE NEWS
ಯಡೂರು ಶಿವಮೊಗ್ಗ/ ಇಲ್ಲಿನ ಮಾಣಿ ಡ್ಯಾಂ ಬಳಿಯಲ್ಲಿ ಮತ್ತೆ ವನ್ಯಮೃಗವೊಂದು ನಾಯಿಯನ್ನ ಬೇಟೆಯಾಡಿದೆ. ಈ ಹಿಂದೆ ಹೊಸಂಗಡಿಯ ವಾರಾಹಿ ಪವರ್ ಹೌಸ್ ಭದ್ರತಾ ಕೊಠಡಿಯ ಆವರಣದಲ್ಲಿ ಚಿರತೆಯೊಂದು ನಾಯಿಯನ್ನ ಬೇಟೆಯಾಡಲು ,ಗೇಟಿನ ಬಳಿ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿಯ ಕಾವಲುಗಾರ, ಚಿರತೆಯನ್ನ ಓಡಿಸಿ ನಾಯಿಯನ್ನ ರಕ್ಷಿಸಿದ್ದರು.
ಇದೀಗ ಅಂತುಹುದ್ದೆ ಘಟನೆಯೊಂದು ಮಾಣಿ ಡ್ಯಾಂ ಲೆಫ್ಟ್ bank ಸೆಕ್ಯೂರಿಟಿ ಚೆಕ್ ಪೋಸ್ಟ್ ಬಳಿ ಸಂಭವಿಸಿದೆ. ಚೆಕ್ಪೋಸ್ಟ್ ಬಳಿ ಮಲಗಿದ್ದ ನಾಯಿಯನ್ನು ಕರಿಚಿರತೆಯೊಂದು ಹೊಂಚು ಹಾಕಿ ಬೇಟೆಯಾಡಿದೆ. ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಘಟನೆಯು ದಿನಾಂಕ 03/05/23ರಂದು ಬೆಳಗಿನ ಜಾವ 02:23 ರ ಸುಮಾರಿಗೆ ನಡೆದಿದೆ.
ದಿನಾಂಕ 03/05/23ರಂದು ಬೆಳಗಿನ ಜಾವ 02:23 ವರಾಹಿ ಯೋಜನೆಯ ಮಾಣಿ ಡ್ಯಾಮ್ ಲೆಫ್ಟ್ bank ಸೆಕ್ಯೂರಿಟಿ ಚೆಕ್ ಪೋಸ್ಟ್ ಬಳಿ ಮಲಗಿದ್ದ ನಾಯಿಯನ್ನು ಬೇಟೆಯಾಡಿದ ಕರಿ ಚಿರತೆ On 03/05/23 at 02:23 am, a black panther hunted down a dog that was sleeping near Mani Dam Left Bank security check post of Varahi project pic.twitter.com/0epmrYfyBe
— malenadutoday.com (@CMalenadutoday) May 5, 2023
ಕಬ್ಬಿಣ ಕತ್ತರಿಸುವಾಗ ಹಾರಿದ ಕಿಡಿ ಅಂಗಡಿಯನ್ನೆ ಸುಟ್ಟಿತು!
ಆನವಟ್ಟಿ/ ಸೊರಬ/ ಕಟ್ಟಡ ಸಾಮಗ್ರಿಗಳನ್ನು ಮಾರುವ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಬರೋಬ್ಬರಿ 20 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾದ ಘಟನೆ ಆನವಟ್ಟಿಯಲ್ಲಿ ಸಂಭವಿಸಿದೆ.
ಇಲ್ಲಿನ ಶಿವಶಕ್ತಿ ಟೇಡರ್ ಅಂಗಡಿ, ಅಗ್ನಿ ಆಕಸ್ಮಿಕದಲ್ಲಿ ಸುಟ್ಟು ಹೋಗಿದೆ. 20 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಟೈರ್, ಪೇಂಟ್, ಆಯಿಲ್, ಕಬ್ಬಿಣ ಮಾರಾಟ ಮಾಡುವ ಅ೦ಗಡಿ ಇದಾಗಿದೆ.
ಕಬ್ಬಿಣವನ್ನು ಕತ್ತರಿಸುವ ವೇಳೆ ಹಾರಿದ ಬೆಂಕಿ ಕಿಡಿ, ಕೆಮಿಕಲ್ ಹಾಗಾ ಆಯಿಲ್ಗೆ ತಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗುತ್ತಿದೆ. ಇನ್ನೂ ಘಟನೆ ಬೆನ್ನಲ್ಲೆ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಲಾಯ್ತಾದರೂ, ಸ್ಥಳೀಯವಾಗಿ ಒಂದು ಬೆಂಕಿ ನಂದಿಸುವ ವಾಹನವಿಲ್ಲ. ಸೊರಬದಿಂದ ವಾಹನ ಬಂದು ಬೆಂಕಿ ನಂದಿಸುವ ಹೊತ್ತಿಗೆ, ಎಲ್ಲವೂ ಸುಟ್ಟುಹೋಗಿದ್ದವು. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಸ್ಥಳೀಯವಾಗಿಯೇ ಒಂದು ಅಗ್ನಿಶಾಮಕ ದಳದ ವಾಹನದ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಮೊಗ್ಗಕ್ಕೆ ಬಾಡಿಗೆಗೆ ಬಂದಿದ್ದ ಕಾರು ಕದ್ದೊಯ್ದ ಪ್ರಯಾಣಿಕ!
ಭದ್ರಾವತಿ/ ಚಾಲಕ ಕಾರು ನಿಲ್ಲಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಕಾರಿನಲ್ಲಿ ಕೂತಿದ್ದ ವ್ಯಕ್ತಿ ವಾಹನವನ್ನು ಕದ್ದುಕೊಂಡು ಹೋದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು ಎಫ್ಐಆರ್ ಕೂಡ ಆಗಿದೆ.
ನಡೆದಿದ್ದೇನು?
ಬೀರೂರಿನ ಬಳ್ಳಾರಿ ಕ್ಯಾಂಪ್‌ನಿಂದ 27 ವರ್ಷ ವಯಸ್ಸಿನ ಚಾಲಕ ಎ. ರಜನಿಕಾಂತ್, ಕಳೆದ ಏಪ್ರಿಲ್ 28 ರಂದು ಶಿವಮೊಗ್ಗಕ್ಕೆ ಬಾಡಿಗೆಗೆ ಅಂತಾ ಬರುತ್ತಿದ್ರು. ಈ ವೇಳೇ ಭದ್ರಾವತಿ ಹೊರವಲಯದಲ್ಲಿ ಬರುವ ಜೆಡಿಕಟ್ಟೆ ಹತ್ತಿರ ತಮ್ಮ ಕಾರನ್ನ ನಿಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 206 ನ ಬಳಿಯಲ್ಲಿಯೇ ಕಾರು ನಿಲ್ಲಿಸಿದ್ದ ಚಾಲಕ, ಪಕ್ಕದಲ್ಲಿದ್ದ ಅಂಗಡಿಗೆ ಹೋಗಿದ್ದಾರೆ. ಕಾರಿನ ಕೀಯನ್ನ ಕಾರಲ್ಲೆ ಬಿಟ್ಟಿದ್ದ. ಈತ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಕಾರನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಓಡಿಸಿಕೊಂಡು ಹೋಗಿದ್ದಾನೆ.
ಸದ್ಯ ಈ ಘಟನೆ ಸಂಬಂಧ ಕಾರು ಕಳವು ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
bajrangadal / ಕಾಂಗ್ರೆಸ್ ಪ್ರಣಾಳಿಕೆ ಹೊತ್ತಿಸಿದ ಆಕ್ರೋಶ! ಗೋಪಿ ಸರ್ಕಲ್ನಲ್ಲಿ ಹನುಮಾನ್ ಚಾಲೀಸಾ ಪಠಣ
ಶಿವಮೊಗ್ಗ/ Bajarangdal/ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು (Bajrang Dal) ನಿಷೇಧಿಸುವ ವಿಚಾರ ಸಂಬಂಧ ಬಜರಂಗ ದಳ ನಿನ್ನೆ ಸಂಜೆ ಹನುಮಾನ್ ಚಾಲೀಸಾ ಪಠಣದ ಕರೆ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಏಳು ಗಂಟೆ ರಾಜ್ಯದ ವಿವಿದೆಡೆ ಹನುಮಾನ್ ಚಾಲೀಸಾವನ್ನು ಪಠಣ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಬಜರಂಗ ದಳ ಸಂಘಟನೆಯ ಸದಸ್ಯರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಶಿವಮೊಗ್ಗ ನಗರದ ಗೋಪಿ ಸರ್ಕಲ್ ನಲ್ಲಿ ಸಂಘಟನೆಯ ಸದಸ್ಯರೆಲ್ಲಾ ಸೇರಿ ಹನುಮಾನ್ ಭಾವಚಿತ್ರದ ಎದರು ಹನುಮಾನ್ ಚಾಲೀಸಾ ಪಠಿಸಿದರು. ಹನುಮಾನ್ ಚಾಲೀಸಾ ಪ್ರತಿಯನ್ನು ಎಲ್ಲರಿಗೂ ನೀಡಲಾಗಿತ್ತು. ಇನ್ನೂ ಈ ವೇಳೆ ಕಾಂಗ್ರೆಸ್ನ ವಿರುದ್ಧ ಆಕ್ರೋಶವೂ ವ್ಯಕ್ತವಾಯ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ಪಟೇಲ್ ಕಾಂಗ್ರೆಸ್ ನಾಯಕರು ಚುನಾವಣೆ ಸಮಯದಲ್ಲಿಯೂ ಬುದ್ದಿ ಕಲಿಯಲಿಲ್ಲ. ಮಲ್ಲಿಕಾರ್ಜುನ್ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯನ್ನ ವಿಷ ಸರ್ಪ ಎಂದು ಕರೆದರು, ಪ್ರಿಯಾಂಕಾ ಗಾಂಧಿಯವರು ಪಾರ್ಕ್ ನಲ್ಲಿ ಯೋಗ ಮಾಡೋದು ನಿಲ್ಲಿಸುತ್ತೇವೆ ಎಂದರು. ಇಂತಹ ಮಾತುಗಳಿಂದಲೇ ಕಾಂಗ್ರೆಸ್ ಅಧಪತನವಾಗುತ್ತಿದೆ ಎಂದರು.
Thirthahalli / ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗೆ ವೇದಿಕೆಯಲ್ಲಿಯೇ ಬೆದರಿಕೆ
ತೀರ್ಥಹಳ್ಳಿ/ ಶಿವಮೊಗ್ಗ ಅಪಚರಿತ ವ್ಯಕ್ತಿಯೊಬ್ಬರು ವೇದಿಕೆ ಮೇಲೆಯೇ ಬಂದು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಅಂತಾ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಲೂರು ಶಿವಕುಮಾರ್ ಗೌಡ ಆರೋಪಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಮಾಳೂರು ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಕೂಡ ಕೊಟ್ಟಿದ್ದು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ
ನಡೆದಿದ್ದೇನು?
ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ತೀರ್ಥಹಳ್ಳಿಯಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಮಂಡಗದ್ದೆ ಬಳಿ ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಓರ್ವ ಅಪರಿಚಿತ ವ್ಯಕ್ತಿ ವೇದಿಕೆಯ ಮೇಲೆ ಬಂದು ಕೊಲೆ ಬೆದರಿಕೆ ಹಾಕಿದ್ದ. ಆ ಸಂದರ್ಭದಲ್ಲಿ, ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ ಇದುವರೆಗೂ ಆರೋಪಿಯನ್ನು ಪತ್ತೆಹಚ್ಚಿಲ್ಲ ಎಂದಿದ್ದಾರೆ.
ನಾನು ಸುಪ್ರೀಂ ಕೋರ್ಟ್ ವಕೀಲನಾಗಿದ್ಧೇನೆ. ನನ್ನ ಗತಿಯೇ ಹೀಗಾದರೆ ಜನಸಾಮಾನ್ಯರ ಪಾಡು ಏನು? ಎಂಧು ಪ್ರಶ್ನಿಸಿರುವ ಅವರು ಘಟನೆ ಕುರಿತು ಇಲ್ಲಿಯವರೆಗೆ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ಮಾತಾಡಿಲ್ಲ
ಶತ್ರುವಿನ ಮದುವೆ ಫೋಟೋ ಸ್ಟೇಟಸ್ನಲ್ಲಿ ಹಾಕಿದ್ದಕ್ಕೆ ಸ್ನೇಹಿತನ ಮೇಲೆ ಹಲ್ಲೆ
ಭದ್ರಾವತಿ/ಶಿವಮೊಗ್ಗ/ ಶತ್ರುವಿನ ಮದುವೆ ಫೋಟೋ ಸ್ಟೇಟಸ್ನಲ್ಲಿ ಹಾಕ್ತೀಯಾ ಅಂತಾ ಸ್ನೇಹಿತನ ಮೆಲೆ ಹಲ್ಲೆ ಮಾಡಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಕೆಲದಿನಗಳ ಹಿಂದೆ ನಡೆದ ಘಟನೆ ಸಂಬಂಧ ಭದ್ರಾವತಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇಲ್ಲಿನ ನಿವಾಸಿಯೊಬ್ಬರು ಪೇಪರ್ ಟೌನ್ನಿಂದ ತಮ್ಮಗೆ ಮನೆಗೆ ಹೋಗುತ್ತಿದ್ದಾಗ, ಸ್ನೇಹಿತನೊಬ್ಬ ಎದುರಾಗಿದ್ದಾನೆ. ಆತ ಇವರನ್ನ ನೋಡುತ್ತಲ್ಲೇ ಬೈಕ್ ಅಡ್ಡ ಗಟ್ಟಿ ನನ್ನ ಶತ್ರುವಿನ ಮದುವೆ ಫೋಟೋ ಸ್ಟೇಟಸ್ನಲ್ಲಿ ಹಾಕ್ಕೊಂಡಿದ್ದೀಯಾ ಎಂದು ಹಲ್ಲೆ ಮಾಡಿದ್ದಾನೆ. ಅಲ್ಲದೆ ಇದೇ ವಿಚಾರವಾಗಿ ಜೀವ ಬೆದರಿಕೆಯನ್ನ ಸಹ ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಸಂತ್ರಸ್ತರು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.
ಕೈಗೆ ಸಿಕ್ಕ 30 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ನ್ನ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್ ರವಿ!
ಶಿವಮೊಗ್ಗ/ ಇತ್ತಿಚೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ನಗದು ಹಾಗೂ ಬೆಲೆಬಾಳುವ ವಸ್ತು ಇದ್ದ ಬ್ಯಾಗ್ನ್ನ ಅದರ ಮಾಲೀಕರಿಗೆ ಹಿಂದುರಿಗಿಸಿದ್ದ ಆಟೋಚಾಲಕನನ್ನ ಸನ್ಮಾನಿಸಿತ್ತು. ಈ ಘಟನೆ ಬೆನ್ನಲ್ಲೆ ಮತ್ತೊಬ್ಬ ಆಟೋಚಾಲಕ ರವಿ ಎಂಬಾತ ತನಗೆ ಸಿಕ್ಕ ಮೊಬೈಲ್ ಫೋನ್ನ್ನ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸಾಮಾನ್ಯವಾಗಿ ಮೊಬೈಲ್ ಕಳುವಾದರೆ ಮತ್ತೆ ಸಿಗೋದು ಡೌಟೇ. ಅಂತದ್ರಲ್ಲಿ ಮರೆವಿನಲ್ಲಿ ಬಿಟ್ಟುಹೋದ ಮೊಬೈಲ್ನ್ನ ರವಿ, ಪೊಲೀಸ್ ಸ್ಟೇಷನ್ಗೆ ಹೋಗಿ ನೀಡಿದ್ಧಾರೆ.
ಕಳೆದ ಮೇ 2 ರಂದು ರಾತ್ರಿ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯ ಧ್ವಜದ ಕಟ್ಟೆಯ ಬಳಿ ರವಿಗೆ ಮೊಬೈಲ್ವೊಂದನ್ನ ಯಾರೋ ಬಿಟ್ಟುಹೋಗಿರುವುದು ಕಾಣಿಸಿದೆ. ತಕ್ಷಣ ಅದನ್ನ ಹೋಗಿ ತೆಗೆದಿಟ್ಟುಕೊಂಡಿದ್ಧಾರೆ. ಬಳಿಕ ಅದನ್ನ ತೆಗೆದುಕೊಂಡು ಹೋಗಿ ವಿನೋಬನಗರ ಪೊಲೀಸ್ ಸ್ಟೆಷನ್ ಪೊಲೀಸರಿಗೆ ಕೊಟ್ಟಿದ್ದಾರೆ.
ಸುಮಾರು 30 ಸಾವಿರ ಮೌಲ್ಯದ ಮೊಬೈಲ್ ಸೋಮಿನಕೊಪ್ಪದ ನಿವಾಸಿ ಇಂಜಿನಿಯರ್ ಒಬ್ಬರಿಗೆ ಸೇರಿದ್ದು ಎನ್ನಲಾಗಿದ್ದು, ರವಿಯ ಪ್ರಾಮಾಣಿಕತೆಗೆ ಪೊಲೀಸ್ ಸಿಬ್ಬಂದಿ ಶ್ಲಾಘಿಸಿದ್ದಾರೆ.
Malenadutoday.com Social media
