KARNATAKA NEWS/ ONLINE / Malenadu today/ Apr 24, 2023 GOOGLE NEWS
ಶಿವಮೊಗ್ಗ/ ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ ಹೀಗೊಂದು ಫ್ಲೆಕ್ಸ್ ಬೋರ್ಡ್ನ್ನು ಜೋಗ ಜಲಪಾತದ (jogfalls)ಹೊರಗಡೆ ಹಾಕಲಾಗಿದೆ.
ಇದಕ್ಕೆ ಕಾರಣ ಚುನಾವಣೆ, ಮತದಾನದ ದಿನ ರಜೆ ನೀಡಲಾಗುತ್ತೆ ಎಂದು ಕೆಲವರು ವೋಟು ಹಾಕದೇ, ಪ್ರವಾಸಕ್ಕೆ ಹೊರಡುತ್ತಾರೆ. ಹಾಗಾಗಿ ಹಾಗಾಗಿ ಪ್ರವಾಸಿ ಸ್ಥಳ ಮೇ.10 ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.
ಈ ಮೂಲಕ ಎಲ್ಲಾ ಸಾರ್ವಜನಿಕರಿಗೆ ತಿಆಯ ಪಡಿಸುವುದೇನೆಂದರೆ, ದಿನಾಂಕ: 10-05-2023 ರಂದು ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುವ ಹಿನ್ನಲೆಯಲ್ಲಿ,ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲಾ.
ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಿದೆ ಎಂದು ಫ್ಲೆಕ್ಸ್ನಲ್ಲಿ ಬರೆಸಲಾಗಿದೆ.
ಜೋಗ ನಿರ್ವಾಹಣಾ ಪ್ರಾಧಿಕಾರ ಈ ಬೋರ್ಡ್ ಹಾಕಿದ್ದು, ಈ ಮೂಲಕ ಮತದಾರರಿಗೆ ವೋಟು ಮಾಡಿ ಎಂದು ಜಾಗೃತಿ ಮೂಡಿಸುತ್ತಿದೆ
Read/ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಟೂರಿಸ್ಟ್ ಬಸ್ ಪಲ್ಟಿ! ಓರ್ವರ ಸಾವು/ 20 ಕ್ಕೂ ಹೆಚ್ಚು ಮಂದಿಗೆ ಗಾಯ!
Malenadutoday.com Social media
