ಮನೆ ಮಗಳನ್ನ ಬರಿಗೈಲಿ ಕಳುಹಿಸಬೇಡಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ದೊಡ್ಡ ಮಾತು! ಶಿವಣ್ಣ, ಬೇಳೂರು, ಮಧು ಹೇಳಿದ್ದೇನು?

Malenadu Today

Shivamogga Mar 20, 2024   Shivanna, Belur , Madhu,Geetha Shivarajkumar  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇಂದು ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಗಡಿಭಾಗ ಕಾರೆಹಳ್ಳಿಗೆ ಬಂದ ಗೀತಾ ಶಿವರಾಜ್ ಕುಮಾರ್ ಹಾಗು ನಟ ಶಿವಣ್ಣಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ರಾಲಿಯಲ್ಲಿ ಪಾಲ್ಗೊಂಡಿದ್ದರು. ನೆಚ್ಚಿನ ನಟ ಶಿವಣ್ಣನನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ನಂತರ ಶಿವಮೊಗ್ಗ ನಗರದ ಲಗಾನ್ ಕಲ್ಯಾಣ ಮಂದಿರಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಯಾರ್ಯಾರು ಏನೇನು ಮಾತನಾಡಿದರು ಎಂಬುದನ್ನ ನೋಡುವುದಾದರೆ,  

ಗೀತಾ ಶಿವರಾಜ್‌ ಕುಮಾರ್‌ 

ಲಗಾನ್ ಕಲ್ಯಾಣ್ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ನಾನು ಎರಡು ವರ್ಷದ ಮಗು ಇದ್ದಾಗ ತಂದೆ ಎಂಎಲ್ಎ ಆಗಿದ್ದರು. ನನ್ನನ್ನು ನಿಮ್ಮ ಮನೆಯ ಮಗಳಾಗಿ ನೋಡಬೇಕು ಎಂದು ಮನವಿ ಮಾಡಿದರು. ಪಕ್ಷದ ಮುಖಂಡರು ಅನೇಕ ಸಹಕಾರ ಮಾಡಿದ್ದಾರೆ. ನಮ್ಮ ತಂದೆ ಮಾಡಿದ ಕೆಲಸಗಳು,ಅವರ ಯೋಜನೆಗಳು ಇವತ್ತು ಸಹ ಪ್ರಸ್ತುತ  ಸರ್ಕಾರದ ಗ್ಯಾರಂಟಿಗಳನ್ನು ಜನರ ಮನೆ ಮನೆಗೆ ತಿಳಿಸಬೇಕು. ಹಿಂದಿನ ಸರ್ಕಾರ ಹೇಳಿದಂತೆ ನಡೆದಿಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನನ್ನನ್ನು ಸಂಸದೆಯಾಗಿ ಮಾಡಿದರೇ ನಾನು ಮೊದಲ ಸಂಸದೆ ಆಗುತ್ತೇನೆ ಶಿವಮೊಗ್ಗದಿಂದ ಪ್ರಚಾರಕ್ಕಾಗಿ ನಾವು ಕೆಲಸ ಮಾಡಲ್ಲ ತಮ್ಮ ಗೆದ್ದು ಜಿಲ್ಲಾ ಉಸ್ತುವಾರಿ ಆಗಿದ್ದಾನೆ. ಅವನು ನನ್ನ ತಮ್ಮನಾದ್ರೂ ನನ್ನ ತಂದೆಯ ಸ್ಥಾನದಲ್ಲಿದ್ದಾನೆ. 

ಬರಿಗೈಲಿ ಕಳುಹಿಸಬೇಡಿ

ನಾನು ಈ ಜಿಲ್ಲೆಯ ಮಗಳು,ನಿಮ್ಮ ವೋಟ್ ನನಗೆ ಕೊಡಲೇ ಬೇಕು.ಜಿಲ್ಲೆಯ ಮಗಳನ್ನು ಬರಿ ಕೈಯಲ್ಲಿ ಕಳಿಸಬಾರದು ಎಂದು ಮನವಿ ಮಾಡಿದರು ಶಿವಮೊಗ್ಗ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಮಹಿಳೆಯರ,ಮಕ್ಕಳ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನಿಮ್ಮ ಜೊತೆಯಲ್ಲೇ ಇರ್ತೆನೆ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೋಡಿ. ಅವಕಾಶ ಕೊಟ್ಟು ನೀಡಿ ತಂದೆಗೆ ಕೆಟ್ಟು ಹೆಸರು ಬರುವಹಾಗೇ ನಡೆದುಕೊಳ್ಳಲ್ಲ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.

ಶಿವರಾಜಕುಮಾರ್‌ 

ಸಭೆಯಲ್ಲಿ ಮಾತನಾಡಿದ ಶಿವಣ್ಣ ಗೀತಾ ರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. 2013 ರ ಲೋಕಸಭೆ ಚುನಾವಣೆಯಲ್ಲಿ ಗೀತಾ ಸ್ಪರ್ಧೆ ಮಾಡಿ ಸೋತರು. ಪರವಾಗಿಲ್ಲ. ಸೋತಾಗಲೇ ಮನುಷ್ಯ ಗೆಲ್ಲಲು ಸಾಧ್ಯ ಎಂದು ಹೇಳಿದರು. ಸ್ಪರ್ದಾತ್ಮಕ ಯುಗದಲ್ಲಿ ಪೈಪೋಟಿ ಇದ್ದೇ ಇರುತ್ತೆ. ಒಬ್ಬ ಗೆದ್ದಾಗ ಮತ್ತೊಬ್ಬ ಸೋಲಲೇ ಬೇಕು.ಚುನಾವಣೆ ಎಂಬುದು ಸುಲಭವಲ್ಲ ಎಂಬುದು ಕಳೆದ ಚುನಾವಣೆಯಲ್ಲಿ ಗೊತ್ತಾಯಿತು. 

ಮತದಾರ ಏನು ಬೇಕು ಅಂತಾ ಕೇಳ್ತಾನೆ ಆ ಕೆಲಸವನ್ನು ತಕ್ಷಣ ಮಾಡಿಕೊಡುವವನೇ ನಿಜವಾದ ಪೊಲಿಟೀಷಿಯನ್ ಎಂದು ಶಿವಣ್ಣ ಹೇಳಿದ್ದಾರೆ. ಆಗದು ಎಂದು ಕೈಕಟ್ಟಿ ಕುಳಿತರೆ ಎಂದು ವೇದಿಕೆಯಲ್ಲಿ ಅಣ್ಣಾವ್ರ ಸಾಲನ್ನ ಹಾಡಿದರು. ನೆರೆದವರು ಚಪ್ಪಾಳೆ ತಟ್ಟಿ ಖುಷಿಪಟ್ಟರು. ತಮ್ಮ ಮಾತು ಮುಂದುವರಿಸಿ ಗೀತಾ ಚುನಾವಣೆ ಸ್ಪರ್ಧಿಸಿದ್ದಾರೆ ಅವರಿಗೆ ನಿಮ್ಮ ಬೆಂಬಲವಿರಲಿ ನಾನು ಕೂಡ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು. 

ಮಧು ಬಂಗಾರಪ್ಪ

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ. ಬಂಗಾರಪ್ಪಜೀ ಸೇವೆ ಮಾಡಿಕೊಂಡು ಬಂದಿದ್ದಾರೆ. ಅವರಂತೆ ಸೇವೆ ಮಾಡು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ  ತಂದೆ ಸ್ಥಾನದಲ್ಲಿ ಲಕ್ಷಾಂತರ ಜನ ಬಂಗಾರಪ್ಪಜೀ ಗಳು ಇದ್ದಾರೆ. ನೀವೆ ಇವರ ಗೆಲುವಿನ ಉಸ್ತುವಾರಿ ತಗೋಬೇಕು ಎಂದು ಕರೆ ನೀಡಿದರು.

ಮಧು ಬಂಗಾರಪ್ಪ ಗೀತಾ ಶಿವರಾಜ್ ಕುಮಾರ್ ಅವರ ಮೀಡಿಯೇಟರ್ ನಾನು ಅಲ್ಲ. ಬಂಗಾರಪ್ಪಜೀ ಅವರಂತೆ ಸೇವೆ ಮಾಡಲು ಗೀತಕ್ಕ ಬಂದಿದ್ದಾರೆ. ನಿಮ್ಮ ಧ್ವನಿಯಾಗಿ ಗೀತಕ್ಕ ಇರ್ತಾರೆ. ಇಲ್ಲಿನ ಸಂಸದರು ಹೇಳುತ್ತಿದ್ದಾರೆ ಗೀತಕ್ಕನ ಸಾಧನೆ ಏನು ಎಂದು ಕೇಳುತ್ತಾರೆ  ಸಂಸದರಾಗುವುದಕ್ಕಿಂತ ಮುಂಚೇ ನೀವು ಏನು ಕಡಿದು ಬಂದಿದ್ದೀರಾ.ನಿಮ್ಮ ತಂದೇ ಮಾಡಿದ ಭ್ರಷ್ಟಾಚಾರದ ದುಡ್ಡಿನಿಂದ ನೀವು ಗೆದ್ದೀದ್ದಿರಾ ನೀವು 2008 ರಲ್ಲಿ ಸಿಎಂ ಮಕ್ಕಳು ನಾವು 1998 ರಲ್ಲಿಯೇ ಸಿಎಂ ಮಕ್ಕಳಾಗಿದ್ದವರು. ಆದರೆ ಚೋಟಾ ಸಹಿ ಹಾಕಿ ತಂದೆಯನ್ನ ಜೈಲಿಗೆ ಕಳಿಸಿಲ್ಲ ಎಂದು ವ್ಯಂಗ್ಯವಾಡಿದರು. 

ಬಂಗಾರಪ್ಪ ನವರ ಸೋಲನ್ನು ನಾವು ಮರೆಯಲು ಆಗುವುದಿಲ್ಲ. ಬಂಗಾರಪ್ಪ ಎಲ್ಲೂ ಹೋಗಿಲ್ಲ ಆಶ್ರಯ ಯೋಜನೆಯಲ್ಲಿದ್ದಾರೆ. ಪಾರ್ಲಿಮೆಂಟ್ ನಲ್ಲಿ ಶಿವಮೊಗ್ಗದ ಧ್ವನಿಯಾಗಿ ಗೀತಾ ಶಿವರಾಜ್ ಕುಮಾರ್ ಇರ್ತಾರೆ. ಸಂಸದ ರಾಘವೇಂದ್ರ ಶರಾವತಿ ಸಂತ್ರಸ್ತರ ಪರವಾಗಿ ಏನು ಮಾಡಿದ್ದಾರೆ. ಪ್ರಧಾನಿ ಕಾರ್ಯಕ್ರಮಕ್ಕೆ ಬಂದ ವಿದ್ಯುತ್ ಎಲ್ಲಿಂದ ಬಂತು ಅಂತ ಹೇಳಬೇಕಿತ್ತು. ಶರಾವತಿ ಸಂತ್ರಸ್ತರ ಬಗ್ಗೆ ಮಾತಾಡಬೇಕಿತ್ತು. 

ನುಡಿದಂತೆ ನಡೆಯುವ ಸರ್ಕಾರ ಅದು ಕಾಂಗ್ರೆಸ್ ಸರ್ಕಾರ. ಗ್ಯಾರಂಟಿ ನಂಬಿಕೆಯಲ್ಲಿ ಜನ ಮತ ನೀಡಿದ್ದಾರೆ. ಚುನಾವಣೆ ಕಷ್ಟ ಅಲ್ಲ ನೀವು ಮನಸ್ಸು ಮಾಡಬೇಕು ಅಷ್ಟೇ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚಾರ ಆರಂಭ ಮಾಡುತ್ತೇವೆ. ಸಂಸದರಾಗಿ ಮತ್ತೆ ಐದು ವರ್ಷ ಗೀತಕ್ಕ ಇಲ್ಲೇ ಇರ್ತಾರೆ. ಗೀತಕ್ಕನನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಬಂಗಾರಪ್ಪ ನವರ ಮಗನಾಗಿ ಬೇಡುತ್ತೇನೆ. ಒಳ್ಳೆಯ ಸಂಸದರಾಗಿ ಕೆಲಸ ಮಾಡುತ್ತಾರೆ ಅವರನ್ನು ಆಶೀರ್ವದಿಸಿ. ಬಂಗಾರಪ್ಪ ನವರ ಧ್ವನಿಯಾಗಿ ಗೀತಕ್ಕ ಕೆಲಸ ಮಾಡುತ್ತಾರೆ ಎಂದು ಮಧು ಬಂಗಾರಪ್ಪ ಮನವಿ ಮಾಡಿದರು.

ಬೇಳೂರು ಗೋಪಾಲಕೃಷ್ಣ

ಸಭೆಯಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲ ಕೃಷ್ಣ, ನಮ್ಮ ರಾಜ್ಯ ಮತ್ತು ಕೇಂದ್ರದ ನಾಯರು ಸಮರ್ಥ ಅಭ್ಯರ್ಥಿ ಕೊಟ್ಟಿದ್ದಾರೆ. ಅವರನ್ನು ಅತ್ಯಂತ ಹೆಚ್ಚು ಬಹುಮತದಿಂದ ಗೆಲ್ಲಿಸಬೇಕು. ವಯಕ್ತಿಕ ಗಲಾಟೆಯನ್ನು ಪಕ್ಷದಲ್ಲಿ ತರದೆ ಪಕ್ಷಕ್ಕಾಗಿ ದುಡಿಯಬೇಕು.  ಇನ್ನೊಂದು ಪಕ್ಷದ ಅಭ್ಯರ್ಥಿ ಏನು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಬರುವುದಕ್ಕಿಂತ ಮುಂಚೇ ರಾಘವೇಂದ್ರ ಏನು ಮಾಡಿದ್ದರು. ಬಡವರ ಬಂಧು ಅನ್ನೋ ಹೆಸರು ಇರೋದು ಬಂಗಾರಪ್ಪ ನವರಿಗೆ ಮಾತ್ರ. ಬಂಗಾರಪ್ಪ ಕೊಟ್ಟ ಕೊಡುಗೆ ಯಾರು ಕೋಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಐದು ಗ್ಯಾರಂಟಿ ಕೊಟ್ಟಿದ್ದೆ ಅಷ್ಟು ಸಾಕು. ಪ್ರತಿಯೊಬ್ಬರಿಗೂ ನಮ್ಮ ಗ್ಯಾರಂಟಿ ತಲುಪಿದೆ.

ಬಸ್ ಸ್ಟ್ಯಾಂಡ್ ರಾಘವೇಂದ್ರ ನಿಂದ ಏನು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಸುಳ್ಳು ಭರವಸೆಯನ್ನು ರಾಘವೇಂದ್ರ ಕೊಡುತ್ತಿದ್ದಾರೆ ಎಂದು ಬೇಳೂರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತೆ. ಗೀತಕ್ಕನನ್ನು ರೈತರ ಧ್ವನಿಯಾಗಿ ಕಳಿಸಲು ಗೆಲ್ಲಿಸಬೇಕು. ಬಿಜೆಪಿ ಅಭ್ಯರ್ಥಿ ಏನು ಅಭಿವೃದ್ಧಿ ಕೊಟ್ಟಿದ್ದಾರೆ. ಹಡಬೆ ದುಡ್ಡು ಮಾಡಿ ಇಟ್ಟಿದ್ದಾರೆ ಖರ್ಚು ಮಾಡೋಕೆ ರೆಡಿ ಇದ್ದಾರೆ. 

ಯಡಿಯೂರಪ್ಪ ನವರ ಕುಟುಂಬ ದುಡ್ಡು ಖರ್ಚು ಮಾಡೋಕೆ ರೆಡಿ ಇದ್ದಾರೆ. ಈಶ್ವರಪ್ಪ ನವರನ್ನು ಈಗ ತಗೆದುಹಾಕಿ ಬಿಟ್ಟರು. ಈಶ್ವರಪ್ಪ ನವರಿಗೆ ಯಾಕೇ ಹಿಂದೂತ್ವ ಬೇಕಿತ್ತು. ಯಡಿಯೂರಪ್ಪ ನನ್ನ ಹತ್ತು ವರ್ಷ ರಾಜಕೀಯ ಜೀವನ ಹಾಳು ಮಾಡಿದರು.ಈಗ ಗೀತಾ ಶಿವರಾಜ್ ಕುಮಾರ್ ಸ್ಪರ್ದಿಸುವಂತ ಸಂದರ್ಭದಲ್ಲಿ ಎಲ್ಲರೂ ವೈಷಮ್ಯ ಮರೆತು ಒಗ್ಗೂಡಿ ಅವರ ಗೆಲುವಿಗಾಗಿ ಕೆಲಸ ಮಾಡಬೇಕು ಎಂದು ಬೇಳೂರು ಕರೆ ನೀಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು

Share This Article