ಶೋರೂಂ ಕಾಂಪೌಂಡ್​ನಲ್ಲಿ ಸ್ನೇಕ್​​ ಕಿರಣ್​ಗೆ ಬುಸುಗುಟ್ಟಿದ ಗೋದಿನಾಗರ ! ಆಮೇಲೆ!?

shivamogga Mar 14, 2024 Snake Kiran ಬೇಸಿಗೆ ನೆತ್ತಿ ಸುಡುತ್ತಿರುವ ಬೆನ್ನಲ್ಲೆ ಪ್ರಾಣಿಗಳು ಸಹ ತಂಪಿನ ಸ್ಥಳಗಳನ್ನು ಹುಡಕಲು ಆರಂಭಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾವುಗಳು ಮನೆಗಳ ಬಳಿಯಲ್ಲಿಯೇ ಕಾಣ ಸಿಗುತ್ತಿವೆ. ಅವುಗಳಿಗೆ ಅವು ಸಣ್ಣಸಣ್ಣ ಬಿಲದಂತಹ ಜಾಗಗಳನ್ನು ಆಯ್ದುಕೊಂಡರೆ, ಜನರಿಗೆ ಅವುಗಳಿಂದ ಭಯ ಹುಟ್ಟುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಶಿವಮೊಗ್ಗದ ಎಂಜಿ ಶೋರೂಂ ಹಾಗೂ ಸುಪ್ರೀಂ ಬಜಾಜ್ ಶೋರೂಂ ನಡುವಿನ ಕಾಪೌಂಡ್​ನಲ್ಲಿ ಗೋದಿ ನಾಗರ ಹಾವೊಂದು ಆಶ್ರಯ ಪಡೆದು ಕುಳಿತಿತ್ತು. ಇದನ್ನ ಕಂಡು ಶೋರೂಂನ ಸಿಬ್ಬಂದಿ ಭಯಗೊಂಡಿದ್ದರು. ಆ ಬಳಿಕ ಸ್ಥಳೀಯರು ಸ್ನೇಕ್ ಕಿರಣ್ , ಗೆ ಕರೆ ಮಾಡಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್​ ಕಿರಣ್​ ಗೋದಿ ನಾಗರ ಹಾವನ್ನ ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದ್ದಾರೆ. ಇನ್ನೂ ಬೇಸಿಗೆ ಸಂದರ್ಭದಲ್ಲಿ ಹಾವುಗಳು ಕಟ್ಟಡಗಳ ಬಳಿಯಲ್ಲಿ, ಮನೆಗಳ ಬಳಿಯಲ್ಲಿ ಸುಳಿದಾಡುವುದು ಸಹಜ ಅವುಗಳಿಗೆ ತೊಂದರೆ ಕೊಡದೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಹಾಗೂ ರಕ್ಷಣೆ ಮಾಡುವಂತೆ ಸ್ನೇಕ್ ಕಿರಣ್ ಅಲ್ಲಿದ್ದವರಿಗೆ ತಿಳಿಸಿದ್ದಾರೆ. 

Leave a Comment