Upendra’s UI troll song | ಇದು ಖಂಡಿತ ಟ್ರೋಲ್​ ಆಗುತ್ತೆ ! ಈ ಸಲ ರಿಯಲ್ ಅಲ್ಲ! ರೀಲ್ಸ್​ ಉಪೇಂದ್ರ ! ತಗಡು ,ಬೆಳ್ಳುಳ್ಳಿ ಕಬಾಬ್, ಹೆಂಗ್​ ಪುಂಗ್ಲಿ ಸಾಂಗ್ ಕೇಳಿ

Shivamogga Mar 4, 2024 Upendra’s UI troll song  ಈ ಸಲ ಉಪ್ಪಿ ಮತ್ತೆ ಬಂದಿದ್ದಾರೆ ಯು ಐ ಸಿನಿಮಾ ಸಖತ್ ಸದ್ದು ಮಾಡ್ತಿದೆ. ರಿಯಲ್ ರಿಯಾಲಿಟಿಯನ್ನ ಹಾಗಾಗೇ ತೋರಿಸುವ ಉಪೇಂದ್ರ ಈ ಹಿಂದಿನ ನಿರ್ದೇಶನದಲ್ಲಿ ಸೋತಿದ್ದ ಉಪ್ಪಿ ಇದೀಗ ಲೇಟೆಸ್ಟ್​ ರೀಲ್ಸ್ ಸಾಂಗ್​ನೊಂದಿಗೆ ಬಂದಿದ್ದಾರೆ. 

ಹೌದು ಸರ್, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿರುವ ಟ್ರೋಲ್​ ಟೈಟಲ್​ಗಳು ಹಾಗೂ ಪದಗಳು ಹಾಗೂ ಮತ್ತು ರೀಲ್ಸ್​ ಸಾಂಗ್​ಗಳ ನೇಮ್​ಗಳಲ್ಲಿಯೇ ಉಪೇಂದ್ರ ಸಿನಿಮಾದ ಯುಐ ಹಾಡು ರಿಲೀಸ್ ಆಗಿದೆ. ರಿಲೀಸ್ ಆದ ಕೆಲ ಹೊತ್ತಿನಲ್ಲಿಯೇ ಸಾಂಗ್ ಟ್ರೋಲ್​ ಅಷ್ಟೆ ಅಲ್ಲದೆ ವೈರಲ್ ಆಗಿದೆ. 

ಸದ್ಯ ರಿಲೀಸ್ ಆಗಿರುವ ಸಾಂಗ್​ನ್ನ ನರೇಶ್ ಕುಮಾರ್ ಎಂಬವರು ಬರೆದಿದ್ಧಾರೆ. ಇದರಲ್ಲಿ ಇತ್ತೀಚಿನ ಟ್ರೆಂಡಿಂಗ್ ಪದಗಳನ್ನ ಬಳಸಲಾಗಿದೆ. ಅದನ್ನ ಹೇಳೋದಕ್ಕಿಂತ ಕೇಳೋದಕ್ಕೆ ಸಖತ್ ಆಗಿ ಕೇಳ್ತಿದೆ. ಎಲ್ಲಿದ್ದಿಯಪ್ಪದಿಂದ ಹಿಡಿದು ಹೆಂಗ್ ಪುಂಗ್ಲಿ, ಕರಿಮಣಿ ಮಾಲೀಕ, ಅರ್ಜುನ ಸನ್ಯಾಸಿ, ಬೆಳ್ಳುಳ್ಳಿ ಕಬಾಬ್, ಆಲ್​ ರೈಟ್, ರಾಂಗ್ ಆಗ್ತಾರೆ ರಂಗಣ್ಣ, ರಾಜಕೀಯವೇ ಖುಷಿಕೊಡೋ ಸುದ್ದಿ, ಡೋಲೋ 650 , ರಾಗಿಹಿಟ್ಟು ಹೀಗೆ ಒಂದರೆಡಲ್ಲ.. ಹಲವು ಪದಗಳು ಸಿನಿಮಾದಲ್ಲಿ ತೀರಾ ಇತ್ತೀಚಿನ ತಗಡು ಪದ ಬಳಕೆಯಾಗಿದೆ. ವಿಶೇಷ ಅಂದರೆ ಇತರೇ ಬಾಷೆಗಳಲ್ಲಿ ರಿಲೀಸ್ ಆಗಿರುವ ಸಾಂಗ್​​ನಲ್ಲಿ ಅಲ್ಲಿನ ನೆಟಿವಿಟಿ ಟ್ರೋಲ್ ಸಾಂಗ್ ಪದಗಳನ್ನ ಬಳಸಲಾಗಿದೆ. 

ಇನ್ನೂ ವಿಶೇಷ ಅಂದರೆ ಸಾಂಗ್​ನ ಟೈಟಲ್ಲೇ ಟ್ರೋಲ್ ಆಗುತ್ತೆ, ಟ್ರೋಲ್​ ಆಗುತ್ತೆ ಎಂಬುದರಿಂದ ಶುರುವಾಗುತ್ತದೆ. ಒಟ್ಟಾರೆ ಸಾಂಗ್​​ ಸಖತ್​ ಹೈಪ್ ಕ್ರಿಯೆಟ್ ಮಾಡುತ್ತಿದೆ.  ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದು,. ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ ಹಾಗೂ ಅಜನೀಶ್​ ಹಾಡಿದ್ದಾರೆ.

Leave a Comment