Shivamogga Feb 12, 2024 | ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸಹ ಇದೀಗ ಬೆಂಗಳೂರು ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ಹಾಗೆ ಸಂಚಾರಿ ನಿಯಮದ ಬಗ್ಗೆ ಟ್ರೋಲ್ ಮಾದರಿಯ ವಿಡಿಯೋಗಳನ್ನು ಹರಿಬಿಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ನಗರದ ರಸ್ತೆಯೊಂದರಲ್ಲಿ ವೀಲ್ಹೀಂಗ್ ಮಾಡಿದ ವಿಡಿಯೋದಕ್ಕೆ ಫೈನ್ ವಿಧಿಸಿದ ದೃಶ್ಯವನ್ನು ಶಿವಮೊಗ್ಗ ಸಂಚಾರಿ ಪೊಲೀಸರು ಹಂಚಿಕೊಂಡಿದ್ದಾರೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸರ ವಿಡಿಯೋ ವೈರಲ್ ಆಗುತ್ತಿದ್ದು, ಮಾಧ್ಯಮಗಳಿಗೆ ರವಾನೆಯಾಗಿರುವ ವಿಡಿಯೋದಲ್ಲಿ ಮೊದಲು ಯುವಕನೊಬ್ಬ ಬೈಲ್ ವಿಲ್ಹೀಂಗ್ ಮಾಡುತ್ತಿರುವ ದೃಶ್ಯ ರೆಕಾರ್ಡ್ ಆಗಿದೆ. ಸಿನಿಮಾ ಮ್ಯೂಸಿಕ್ನೊಂದಿಗೆ ರೆಕಾರ್ಡ್ ಆಗಿರುವ ವಿಡಿಯೋ ಮೊದಲು ಮತ್ತು ನಂತರ ಎಂಬ ಎರಡು ಭಾಗ ಹೊಂದಿದೆ. ಎರಡನೇ ಭಾಗದಲ್ಲಿ ಪೊಲೀಸರು ಬೈಕ್ ಹಾಗೂ ಯುವಕನನ್ನ ಸ್ಟೇಷನ್ಗೆ ಕರೆಸಿ ದಂಡ ಹಾಕಿರುವ ಮಾಹಿತಿ ನೀಡುವ ದೃಶ್ಯಗಳಿವೆ.
#shivamoggatrafficpolice #shivamogga #shivamoggaviralvideo #viralvideofb https://t.co/sUy9IFgv3S #videosorce to Shivamogga trafficpolice ಪೊಲೀಸ್ರು ಮಾಡಿದ್ರು ಬಿಫೋರು ಅಫ್ಟರ್ ವಿಡಿಯೋ! ಹೇಗಿದೆ ನೋಡಿ pic.twitter.com/7059UE6duq
— malenadutoday.com (@malnadtoday) February 13, 2024
ಏನಿದು ಪ್ರಕರಣ
ಶಿವಮೊಗ್ಗ ನಗರದಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ವೀಡಿಯೋವನ್ನು ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ. ಇದನ್ನ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸರು ಗಮನಿಸಿದ್ದಾರೆ., ಈ ವೀಡಿಯೋ ಆಧರಿಸಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ರವರು ನೋಟಿಸ್ ನೀಡಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ.12.02.24 ರಂದು ವೀಲಿಂಗ್ ಮಾಡುತ್ತಿದ್ದಂತಹ ಬೈಕ್ ಸವಾರನಿಗೆ 10,000 ದಂಡವನ್ನು ವಿಧಿಸಿದೆ.