ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್! ಬೇಳೂರು ಗೋಪಾಲಕೃಷ್ಣರ ದೊಡ್ಡ ಮಾತು!

Malenadu Today

Shivamogga | Feb 3, 2024 |     ಸಂಸತ್ ಚುನಾವಣೆಗೆ ಶಿವಮೊಗ್ಗದಿಂದ ಕಾಂಗ್ರೆಸ್​ನಿಂದ ನಾನು ಸಹ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ ಅಂತಾ ಈ ಹಿಂದೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿದ್ದರು. ಅವರ ಈ ಮಾತು ರಾಜಕಾರಣದಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಅವರು ಎಂ.ಪಿ. ಕ್ಯಾಂಡಿಡೇಟ್ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಟ್ಟದ್ದು ಎಂದಿದ್ದಾರೆ. 

ಈ ವಿಚಾರದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವರು ಸೂಚಿಸಿದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ. ಸದ್ಯ ಬೇಳೂರು ಗೋಪಾಲಕೃಷ್ಣರವರ ಮಾತು ಬೇರೆಯದ್ದೆ ರೀತಿಯಲ್ಲಿ ಕುತೂಹಲ ಮೂಡಿಸಿದ್ದು, ಚರ್ಚೆಗೂ ಆಸ್ಪದ ಮಾಡಿಕೊಟ್ಟಿದೆ. 

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಮೊದಲ ಭಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ  ಶಾಸಕ ಬೇಳೂರು ಗೋಪಾಲಕೃಷ್ಣ ಅದ್ದೂರಿ ಸ್ವಾಗತವನ್ನೆ ಪಡೆದಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರ ಸ್ವಾಗತ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಉಪ ಪ್ರಧಾನಿ ಎಲ್.ಕೆ.ಆಡ್ವಾಣಿ ಅವರಿಗೆ ಭಾರತ ರತ್ನ ಲಭಿಸಿದ ವಿಚಾರದಲ್ಲಿ ಸಂತಸ ವ್ಯಕ್ತಪಡಿಸಿದರು. ಹಿರಿಯ ನಾಯಕನಿಗೆ ಭಾರತ ರತ್ನ ದೊರೆತಿದೆ. ರಾಮ ಮಂದಿರ ಮೋದಿ ಉದ್ಘಾಟನೆ ಮಾಡಿ ಭಾರತ ರತ್ನ ಅವರಿಗೆ ಕೊಟ್ಟಿದ್ದಾರೆ.ಹೋರಾಟ ಅಡ್ವಾಣಿ ಅವರದ್ದು ಕಿರೀಟ ಬೇರೆಯವರದ್ದಾಗಿದೆ ಎಂದರು. 

ಇನ್ನೂ ಲೋಕಸಭೆ ಸ್ಪರ್ಧೆ ವಿಚಾರದಲ್ಲಿ ಲೋಕಸಭೆಗೆ ನನಗೆ ನಿಲ್ಲಬೇಡ ಅಂದಿದ್ದಾರೆ. ಶಾಸಕನಾಗಿ ಇದ್ದೀಯಾ, ಶಾಸಕನಾಗಿ ಇರು ಅಂದಿದ್ದಾರೆ. ನಾನು ನಿಲ್ಲಲ್ಲ, ಶಾಸಕನಾಗಿ ಇರುತ್ತೇನೆ.  ಉಸ್ತುವಾರಿ ಸಚಿವರು ಯಾರಿಗೆ ಹೇಳ್ತಾರೆ ಅವರಿಗೆ ಟಿಕೇಟ್ ಕೊಡ್ತಾರೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸುತ್ತೇವೆ. ಎಂದಿದ್ದಾರೆ. 

ಡಿ.ಕೆ.ಸುರೇಶ್ ಹೇಳಿಕೆ ತಪ್ಪಾಗಿದೆ.  ಅದು ಅವರ ವೈಯಕ್ತಿಕ ಹೇಳಿಕೆ. ಸಂವಿಧಾನ ಬದಲಾವಣೆ ಮಾಡಬೇಕು ಅಂತಾ ಅನಂತ ಕುಮಾರ್ ಹೆಗಡೆ ಹೇಳಿದ್ದರು.  ಅವರ ವಿರುದ್ದ ಏನು ಕ್ರಮ ಕೈಗೊಡರು. ಯಡಿಯೂರಪ್ಪ ಅವರ ಮೇಲೆ ಅವರ ಮಗನ ಮೇಲೆ 40 ಸಾವಿರ ಕೋಟಿ ಆರೋಪ ಮಾಡಿದ್ರು.  ಅವರ ವಿರುದ್ದ ಕ್ರಮ ಕೈಗೊಳ್ಳುತ್ತೀರಾ ಎಂದು ಇದೇ ವೇಳೆ ಪ್ರಶ್ನಿಸಿದ್ರು. 


Share This Article