SHIVAMOGGA | Jan 15, 2024 | Shivamogga Central Jail ಶಿವಮೊಗ್ಗ ಕೇಂದ್ರ ಕಾರಾಗೃಹ ಏಳು ಸುತ್ತಿನ ಕೋಟೆಯಂತಿದೆ. ಹಾಗಿದ್ರೂ ಆರೋಪಿಗಳ ಪರವಾದ ಆರೋಪಿಗಳು ಮಾದಕವಸ್ತುಗಳನ್ನ ಶಿವಮೊಗ್ಗ ಜೈಲ್ನೊಳಗೆ ಪಾಸ್ ಮಾಡಲು ನಾನಾ ಪ್ರಯತ್ನ ಮಾಡುತ್ತಿರುತ್ತಾರೆ. ಜೊತೆಯಲ್ಲಿ ಅಲ್ಲಿರುವ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬೀಳುತ್ತಿರುತ್ತಾರೆ. ಸದ್ಯ ಇದೇ ವಿಚಾರಕ್ಕೆ ಸಂಬಂಧ ಕೇಂದ್ರ ಕಾರಾಗೃಹ ಶಿವಮೊಗ್ಗ ಮುಖ್ಯ ಅದೀಕ್ಷಕರು ದೂರೊಂದನ್ನು ನೀಡಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹ
ಕಳೆದ ಹನ್ನೊಂದರಂದು ನಡೆದ ಘಟನೆ. ಭದ್ರಾವತಿಯ ನಿವಾಸಿ ಔರಂಗಜೇಬ ಎಂಬವರ ಪುತ್ರ ತಯೀಬ್ ಎಂಬಾತ ಜೈಲಿನಲ್ಲಿದ್ದ ಗಣೇಶ ಎಂಬವರನ್ನ ನೋಡಲು ಬಂದಿದ್ದನಂತೆ. ಈ ವೇಳೆ ಆತನ ಬಳಿಯಲ್ಲಿದ್ದ ಪ್ಲಾಸ್ಟಿಕ್ ಕವರ್ ಹಾಗೂ ಅದರಲ್ಲಿದ್ದ ವಸ್ತುಗಳನ್ನ ಕೆಎಸ್ಐಎಸ್ಎಫ್ ಸಿಬ್ಬಂದಿ ಅಕ್ಸೆಸ್ ಕಂಟ್ರೋಲ್ನಲ್ಲಿ ಪರಿಶೀಲಿಸಿದ್ಧಾರೆ.
ಈ ವೇಳೆ ಆರೋಪಿ ತಂದಿದ್ದ ಟೂತ್ಪೇಸ್ಟ್ ನಲ್ಲಿ ಅನುಮಾನಸ್ಪದ ವಸ್ತು ಇರುವುದು X-Ray ಬ್ಯಾಗೇಜ್ ಸ್ಕ್ಯಾನರ್ ನಲ್ಲಿ ಗೊತ್ತಾಗಿದೆ. ಹಾಗಾಗಿ ಟೂತ್ ಪೇಸ್ಟ್ ತೆಗೆದು ಪರಿಶೀಲಿಸಿದ್ದಾರೆ. ಈ ವೇಳೆ ಅದರಲ್ಲಿ ಸ್ಟ್ರಾಗಳು ಕಂಡು ಬಂದಿವೆ. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ.
ತಕ್ಷಣ ಆರೋಪಿಯನ್ನು ಹಿಡಿದ ಭದ್ರತಾ ಸಿಬ್ಬಂದಿಯು ಆರೋಪಿಯನ್ನು ತುಂಗಾನಗರ ಪೊಲೀಸ್ ಸ್ಟೇಷನ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆತನ ವಿರುದ್ಧ ಕೇಸ್ ಆಗಿದ್ದು, ಜೈಲಿಗೆ ಮಾದಕವಸ್ತು ಸಾಗಿಸಲು ಬಂದು ಅದೇ ಜೈಲಿಗೆ ಅತಿಥಿಯಾಗಿದ್ದಾನೆ.
