SHIVAMOGGA | Jan 11, 2024 | ಯುವನಿಧಿ ಕಾರ್ಯಕ್ರಮದ ನಡುವೆ ಶಿವಮೊಗ್ಗದಲ್ಲೊಂದು ವಿಶೇಷ ಘಟನೆ ನಡೆದಿದೆ. ತುರ್ತು ಪರಿಸ್ಥಿತಿಯಲ್ಲಿ ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆ ಗೆ ಏರ್ ಆ್ಯಂಬುಲೆನ್ಸ್ ಮೂಲಕ ವ್ಯಕ್ತಿಯೊಬ್ಬರನ್ನು ಶಿಫ್ಟ್ ಮಾಡಲಾಗಿದೆ.
ಶಿವಮೊಗ್ಗ ನಗರದ ಗಾಂಧಿ ಬಜಾರ್ ನ ಕುಚಲಕ್ಕಿ ಕೇರಿ ನಿವಾಸಿಯೊಬ್ಬರು ಕಳೆದ ಸೋಮವಾರ ತಮ್ಮ ಸಹೋದರನ ಜೊತೆ ವಾಕ್ ಮಾಡುವ ಕುಸಿದುಬಿದ್ದಿದ್ದರು. ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಆನಂತರ ಅವರನ್ನ ಶಿವಮೊಗ್ಗ ಮೆಟ್ರೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ನಿನ್ನೆಯವರೆಗೂ ಮೆಟ್ರೋದಲ್ಲಿ ಒಳರೋಗಿಯಾಗಿ ಚೇತನ್ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಅವರ ಸಹೋದರ ಚೆನ್ನೈ ನಲ್ಲಿನ ಮೂಲಗಳನ್ನು ಸಂಪರ್ಕಿಸಿ ಏರ್ ಆ್ಯಂಬುಲೆನ್ಸ್ ಗೆ ವ್ಯವಸ್ಥೆ ಮಾಡಿದ್ದಾರೆ. ನಿನ್ನೆ ರಾತ್ರಿಯೇ ಏರ್ ಆ್ಯಂಬುಲೆನ್ಸ್ ಶಿವಮೊಗ್ಗ ವಿಮಾನ ನಿಲ್ದಾಣ ಕ್ಕೆ ಆಗಮಿಸಿತ್ತು.
ಆದರೆ ವಿಸಿಬಿಲಿಟಿ ಕಾರಣಕ್ಕಾಗಿ ಇವತ್ತು ಬೆಳಗ್ಗೆ 11 ಗಂಟೆಯವರೆಗೂ ಏರ್ ಆ್ಯಂಬುಲೆನ್ಸ್ ಶಿವಮೊಗ್ಗ ಏರ್ಪೋರ್ಟ್ ನಿಂದ ಹೊರಡಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಇವತ್ತು ಮಧ್ಯಾಹ್ನ 1.05 ನಿಮಿಷಕ್ಕೆ ಏರ್ ಆ್ಯಂಬುಲೆನ್ಸ್ನ ಮೂಲಕ ಚೇತನ್ರವರನ್ನ ಶಿವಮೊಗ್ಗದಿಂದ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಕರೆದೊಯ್ಯಲಾಯ್ತು.
ಅಲ್ಲಿಂದ ವಿಶೇಷ ಆ್ಯಂಬುಲೆನ್ಸ್ ಮೂಲಕ ಮಣಿಪಾಲ್ನಲ್ಲಿರುವ ಆಸ್ಪತ್ರೆಗೆ ಚೇತನ್ರವರನ್ನ ರವಾನೆ ಮಾಡಲಾಯ್ತು. ಅಲ್ಲಿ ಅವರಿಗೆ ತಕ್ಷಣವೆ ಚಿಕಿತ್ಸೆ ಆರಂಭಿಸಲಾಗಿದ್ದು, ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.