SHIVAMOGGA | Jan 2, 2024 | ಟ್ರಾಫಿಕ್ ಫೈನ್ ಬಿದ್ದಿದ್ಯಾ ಅಂತಾ ಆಗಾಗ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು ಏಕೆಂದರೆ, ಬಿಲ್ ಮೇಲೆ ಬಿಲ್ ಅಂತಾ ಹೇಳಿ ರಸೀದಿಯ ಉದ್ದ ಹಾಗೂ ಮೊತ್ತ ಎರಡು ದೊಡ್ಡದಾಗುವ ಸಾಧ್ಯತೆ ಇರುತ್ತದೆ. ಮಾರುದ್ದ ದಂಡದ ರಸೀದಿಗಳು ಹಾಕುವಂತಹ ಪ್ರಕರಣ ಇದೀಗ ಶಿವಮೊಗ್ಗದಲ್ಲಿಯು ದಾಖಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಶಿವಮೊಗ್ಗ ಸಂಚಾರಿ ಪೊಲೀಸರು ವಾಹನವೊಂದಕ್ಕೆ 17 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.
ಟ್ರಾಫಿಕ್ ಫೈನ್ /
ಶಿವಮೊಗ್ಗದ ಶಿವಪ್ಪನಾಯಕರ ಪ್ರತಿಮೆಯ ಸಮೀಪ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸ್ತಿದ್ದರು. ಈ ವೇಳೆಯಲ್ಲಿ ಮುಖ್ಯ ಪೇದೆ ಸುರೇಶ್ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ವಾಹನವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಗಾಡಿ ನಂಬರ್ ಪರಿಶೀಲಿಸಿದಾಗ ಅದಕ್ಕೆ ಸಂಬಂಧಿಸಿದಂತೆ 17 ಸಾವಿರ ರೂಪಾಯಿ ದಂಡ ಕಟ್ಟಬೇಕಿರುವ ವಿಚಾರ ಗೊತ್ತಾಗಿದೆ.
READ : ಮನೆಮನೆಗೂ ಮಂತ್ರಾಕ್ಷತೆ ನೀಡಿದ ಕೆ.ಎಸ್.ಈಶ್ವರಪ್ಪ | ಕಾಶಿಮಂದಿರ ನಿರ್ಮಾಣದ ಮಾತು!
ಈ ಹಿನ್ನೆಲೆಯಲ್ಲಿ ವಾಹನ ಹಾಗೂ ಅದರ ಮಾಲೀಕರನ್ನ ಸಂಚಾರಿ ಪೊಲೀಸ್ ಠಾಣೆಗೆ ಕರಿಸಿ 17 ಸಾವಿರ ರೂಪಾಯಿ ದಂಡವನ್ನ ಕಟ್ಟಿಸಿಕೊಳ್ಳಲಾಗಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ದಾಖಲಾಗುತ್ತಿರುವ ದಂಡದ ಮೊತ್ತಗಳಲ್ಲಿ ಇದು ತುಸುದೊಡ್ಡದಾಗಿದೆ. ಇನ್ನು ಇಷ್ಟೊಂದು ಫೈನ್ ಬೀಳುತ್ತಾ ಅಂತಾ ವಿಷಯ ಕೇಳಿದವರು ಅಚ್ಚರಿ ಪಡ್ತಿದ್ದಾರೆ.
