ಮನೆಮನೆಗೂ ಮಂತ್ರಾಕ್ಷತೆ ನೀಡಿದ ಕೆ.ಎಸ್​.ಈಶ್ವರಪ್ಪ | ಕಾಶಿಮಂದಿರ ನಿರ್ಮಾಣದ ಮಾತು!

Malenadu Today

SHIVAMOGGA  |  Jan 2, 2024  |  ಅಯೋಧ್ಯೆಯಲ್ಲಿ ರಾಮಮಂದಿರ  ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಮನೆಮನೆಗೆ ತೆರಳಿ ಮಂತ್ರಾಕ್ಷತೆ ನೀಡಿ ಜನರಿಗೆ ಆಹ್ವಾನ ನೀಡಿದರು. 

ಈ ವೇಳೆ ಮಾತನಾಡಿದ ಅವ ರಾಮಮಂದಿರ ನಿರ್ಮಿಸಲು ಗುಲಾಮಗಿರಿಯ ಪ್ರತೀಕವಾಗಿದ್ದ ಮಸೀದಿಯನ್ನು ಕೆಡವಲಾಯಿತು   ಅದೇ ರೀತಿ ನಾವು ಮಥುರಾದಲ್ಲಿಯೂ ಶ್ರೀಕೃಷ್ಣಮಂದಿರವನ್ನು ನಿರ್ಮಿಸುತ್ತೇವೆ ಎಂದರು 

ಪ್ರತಿ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸುತ್ತಿದ್ದೇವೆ. ನಿಮ್ಮ ದೇವಸ್ಥಾನಗಳಲ್ಲಿ ಮಂತ್ರಾಕ್ಷತೆಯನ್ನು ಇಟ್ಟುಕೊಂಡು ಜನವರಿ 22 ರಂದು ದೀಪಾವಳಿ ಹಬ್ಬದಂತೆ ಆಚರಿಸಿ’ ಎಂದು ಮನವಿ ಮಾಡಿದರು. ಇದು ಪವಿತ್ರ ಕ್ಷಣವಾಗಿದ್ದು, ನಾನು ರಾಜಕೀಯದ ಬಗ್ಗೆ 

ಮಾತನಾಡುವುದಿಲ್ಲ. ಶ್ರೀ ರಾಮನ ಭಕ್ತರನ್ನು ಆಹ್ವಾನಿಸಲಾಗುತ್ತಿದೆ ಎಂದರು

READ : job in shivamogga / ಯುವ ಪರಿವರ್ತಕತರು ಮತ್ತು ಸಮಾಲೋಚಕರ ಆಯ್ಕೆಗೆ ಅರ್ಜಿ ಆಹ್ವಾನ

ಅಯೋಧ್ಯೆಯಲ್ಲಿ ಬಿಜೆಪಿಯ ರಾಮನ ಪ್ರತಿಷ್ಠಾಪನೆ ಎಂದು ಹೇಳಿಕೆ ನೀಡುತ್ತಿರುವ ನಾಯಕರಿಗೆ ಪ್ರತಿಷ್ಠಾಪನೆಗೆ ಆಹ್ವಾನ ನೀಡಿಲ್ಲ. ರಾಮನನ್ನು ಪೂಜಿಸುವ ಮತ್ತು ಆ ಬಗ್ಗೆ ಹೆಮ್ಮೆ ಪಡುವವರು ಭಾಗವಹಿಸಲು ಸ್ವಾಗತ ಎಂದಿದ್ಧಾರೆ. 

ಅಲ್ಲದೆ  ರಾಮಮಂದಿರ ನಿರ್ಮಾಣದ ನಿರ್ಧಾರದ ಸಮಯದಲ್ಲಿ ಹಿಂದೂ ಯಾತ್ರಾ ಕೇಂದ್ರಗಳಾದ ಕಾಶಿ ಮತ್ತು ಮಥುರಾದಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿತ್ತು  ಇಲ್ಲಿಯೂ ದೇವಾಲಯಗಳನ್ನು ನಿರ್ಮಿಸಲು ನಾವು ನ್ಯಾಯಾಲಯದಲ್ಲಿ ಅನುಕೂಲಕರ ತೀರ್ಪು ಪಡೆಯುತ್ತೇವೆ. ಕಾಶಿಯಲ್ಲಿರುವ ಮಸೀದಿಯನ್ನು ಕೆಡವಿ ಕಾಶಿ ಮಂದಿರ ನಿರ್ಮಿಸುತ್ತೇವೆ ಎಂದಿದ್ದಾರೆ. 

Share This Article