ಅಜ್ಜಿ ಕಾಲದ ಚಿನ್ನಕ್ಕೆ ₹10 ಲಕ್ಷ ಕೊಟ್ಟ ವ್ಯಕ್ತಿ ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಬೇಕಾಯ್ತು ! ಏತಕ್ಕೆ ಅನ್ನೋದೇ ಸ್ಟೋರಿ

SHIVAMOGGA  |  Dec 24, 2023  |  ಅಜ್ಜಿ ಕಾಲದ ಚಿನ್ನ ಸಿಕ್ಕಿದೆ ಕೊಡ್ತೀನಿ ಅಂತಾ ಹೇಳಿ 10 ಲಕ್ಷ ರೂಪಾಯಿ ವಂಚಿಸಿದ ಕೇಸ್​ವೊಂದು ಭದ್ರಾವತಿ ನ್ಯೂ ಟೌನ್​ ಪೊಲೀಸ್ ಸ್ಟೇಷನ್ ಲಿಮಿಟ್ಸ್​ ನಲ್ಲಿ ನಡೆದಿದೆ 

ಭದ್ರಾವತಿ ನ್ಯೂ ಟೌನ್​ ಪೊಲೀಸ್ ಸ್ಟೇಷನ್

ಇಲ್ಲಿನ ನಿವಾಸಿಯೊಬ್ಬರಿಗೆ ಪುಣ್ಯಾತ್ಮನೊಬ್ಬ ಪರಿಚಯ ಹೇಳಿಕೊಂಡು ಕಾಲ್​ ಮಾಡಿದ್ದ. ಅಲ್ಲದೆ ತನಗೆ ಅಜ್ಜಿ ಕಾಲದ ಚಿನ್ನ ಕಾಯಿನ್​ಗಳು ತೋಟದಲ್ಲಿ ಸಿಕ್ಕಿದೆ. ಅದರು ತನ್ನ ಅಜ್ಜಿಯ ಬಳಿಯಿದೆ ಬೇಕಿದ್ರೆ ನಿಮಗೆ ಕೊಡುತ್ತೀನಿ ಅಂತೆಲ್ಲಾ ಕಾಗೆ ಕಥೆ ಹೇಳಿದ್ದ.. 

ಕಲಿಯುಗ ಪೀಕ್​ನಲ್ಲಿರುವ ಈ ಟೈಮ್​ನಲ್ಲಿ ಇಂತಹದ್ದನ್ನೆಲ್ಲಾ ಸಹಜವಾಗಿಯೇ ಯಾರು ಸಹ ನಂಬಲ್ಲ. ಆದರೆ ನಂಬಿಕೆ ಹುಟ್ಟುವರೆಗೂ ಆರೋಪಿಗಳು ಬೆನ್ನಿಗೆ ಬೀಳುತ್ತಾರೆ. ಎಲ್ಲೋ ಮನಸ್ಸಿನಲ್ಲಿ ಒಂದು ಪಾಯಿಂಟ್​ ಸಿಂಕ್​ ಆಗುವರೆಗೂ ಕಾಯುವ ಆರೋಪಿಗಳು ಅಲ್ಲಿಯುವರೆಗೂ ಬಿತ್ತಿದ ಮೋಸದ ಬೀಜಕ್ಕೆ, ಮಾತಿನ ಗೊಬ್ಬರ ಸುರಿಯುತ್ತಿರುತ್ತಾರೆ. 

READ : ಪ್ರೀತಿ, ಪ್ರೇಮ ಮತ್ತು ಮದುವೆಗೆ ಸಾಥ್ ಗೆಳಯನ ಮೇಲೆ ರಿವೆಂಜ್​! ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಈ ಕೇಸ್​ನಲ್ಲಿಯು ಅದೇ ಆಗಿದೆ. ಸಂತ್ರಸ್ತರು ನಂಬುವವರೆಗೂ ಬಿಡದ ಆರೋಪಿ ನಾನಾ ಪ್ರಯತ್ನಗಳನ್ನ ನಡೆಸಿದ್ದಾನೆ. ಅಲ್ಲದೆ ಎರಡು ಚಿನ್ನದ ಕಾಯಿನ್​ ತಂದು ತೋರಿಸಿ ಪರೀಕ್ಷೆಗೂ ಕೊಟ್ಟಿದ್ದಾನೆ. ಹೀಗೆ ಅಸಲಿ ಚಿನ್ನ ತೋರಿಸಿ 10 ಲಕ್ಷಕ್ಕೆ ಡೀಲ್ ಕುದುರಿಸಿದ ಆರೋಪಿ, ಸಂತ್ರಸ್ತರ ಕೈಗೇ ಪಾಲ್ತು ಮಾಲ್ ಇಟ್ಟು ನಾಟ್ ರೀಚಬಲ್ ಆಗಿದ್ದಾನೆ.

ಇನ್ನೇನು ಮಾಡೋದು ಅಂತಾ ಸಂತ್ರಸ್ತರು ದೂರು ಕೊಡಲು ಮುಂದಾದಾಗ, ಮತ್ತೆ ನೆಟ್​ವರ್ಕ್​ಗೆ ಬಂದ ಆರೋಪಿ ಕಂಪ್ಲೆಂಟ್ ಕೊಡಬೇಡಿ ಐದು ಲಕ್ಷ ಉಳ್ಕೊಂಡಿದೆ ಉಳಿದಿದ್ದು ಖರ್ಚಾಗಿದೆ ಎಂದು ದುಂಬಾಲು ಬಿದ್ದಿದ್ದಾನೆ. ಸರಿ ಬಂದಿದ್ದು ಬರಲಿ ಅಂತಾ ಸಂತ್ರಸ್ತರು ಕಾದಿದ್ದಾರೆ. ಅದಕ್ಕೂ ಕಾಗೆ ಹಾರಿಸಿದ್ದರಿಂದ ಕೊನೆಗೆ ದಾರಿ ಕಾಣದೇ ಸಂತ್ರಸ್ತರು ಪೊಲೀಸರ ಮೊರೆಹೋಗಿದ್ದಾರೆ. ಸದ್ಯ ಪೊಲೀಸರು ಆರೋಪಿಯ ಟವರ್​ ಲೊಕೇಶನ್ ಅರಸುತ್ತಿದ್ದಾರೆ. 

Leave a Comment