SHIVAMOGGA | Dec 22, 2023 | ಶಿವಮೊಗ್ಗ ಸಿಟಿಯಲ್ಲಿ ನಡೆದ ಸರಗಳ್ಳತನದ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿಯೇ ಎರಡು ಕಂಪ್ಲೆಂಟ್ ಆಗಿದ್ದು ಎಫ್ಐಆರ್ ಸಹ ದಾಖಲಾಗಿದೆ. 20 ತಾರೀಖು ನಡೆದ ಎರಡು ಘಟನೆಗಳ ಸಂಬಂಧ ಈ ಎಫ್ಐಆರ್ ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಹಾಲಿನ ಬೂತ್ಗೆ ಬಂದು ಸರ ಕಿತ್ತುಕೊಂಡು ಹೋದ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ, ಓಟಿ ರಸ್ತೆಯಲ್ಲಿರುವ ವೆಂಕಟೇಶ್ವರ ಸಭಾಭವನದ ಎದುರುಗಡೆ ಈ ಘಟನೆ ನಡೆದಿದೆ. ಇಲ್ಲಿರುವ ನಂದಿನಿ ಬೂತ್ನಲ್ಲಿ ಮಹಿಳೆಯೊಬ್ಬರು ಎಂದಿನಂತೆ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿದ್ದರು. 20-12-2023 ರಂದು ಬೆಳಿಗ್ಗೆ 04-30 ಕ್ಕೆ ಹಾಲಿನ ಬೂತ್ಗೆ ಬಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದು ಹಾಲಿನ ಪ್ಯಾಕೆಟ್ ಕೇಳಿದ್ದಾರೆ.
READ : ಶಿವಮೊಗ್ಗದ ಮಹಾವೀರ ಸರ್ಕಲ್ನಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಜೋರು ಪ್ರತಿಭಟನೆ
100/-ರೂ ಹಣಕೊಟ್ಟು ಹಾಲು ಕೇಳಿದ ವ್ಯಕ್ತಿ ಚಿಲ್ಲರೆ ಕೊಡುವ ವೇಳೆಯಲ್ಲಿ ಪೇಡಾ ನೀಡುವಂತೆ ಕೇಳಿದ್ದಾನೆ. ಆನಂತರ ಪೇಡಾ ಬೇಡ, ಚಾಕಲೇಟ್ ಕೊಡಿ ಎಂದಿದ್ದಾನೆ. ಇಷ್ಟೆಲ್ಲದ ಬಳಿಕ ಮಹಿಳೆ ಚಿಲ್ಲರೆ ಜೊತೆಗೆ ಚಾಕಲೇಟ್ ನೀಡಲು ಮುಂದಾದಾಗ, ಆಕೆಯ ಕುತ್ತಿಗೆಗೆ ಕೈ ಹಾಕಿ ಸರಕದಿಯಲು ಆರೋಪಿ ಯತ್ನಿಸಿದ್ದಾನೆ. ಈ ವೇಳೆ ಸರ ಅರ್ಧ ಕಟ್ ಆಗಿ, ಒಂದರ್ಧ ಕಳ್ಳನ ಪಾಲಾಗಿದೆ.
ಘಟನೆ ಬೆನ್ನಲ್ಲೆ ಇಬ್ಬರು ಅಪರಿಚಿತರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕನ್ನಡದಲ್ಲೇ ಅಪರಿಚಿತರು ಮಾತನಾಡುತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸ್ತಿದ್ದಾರೆ. ಒಟ್ಟಾರೆ ಮಹಿಳೆಯ ಅಂದಾಜು ಬೆಲೆ 110000 ರೂಪಾಯಿ ಮೌಲ್ಯ ಚಿನ್ನ ಕಳ್ಳತನವಾಗಿದೆ
ಬಂಗಾರದ ಮಾಂಗಲ್ಯಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಯು ಸುಮಾರು 25 ರಿಂದ 30 ವರ್ಷ ವಯಸ್ಸಿನವನಾಗಿದ್ದು, ಜರ್ಕಿನ್ ಹಾಕಿಕೊಂಡಿದ್ದು, ತಲೆಗೆ ಮಂಕಿಕ್ಯಾಪ್ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಎಂದು ತಿಳಿದು ಬಂದಿದೆ.
