SHIVAMOGGA| Dec 19, 2023 | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಪೊಲೀಸ್ ಇಲಾಖೆ ಬರೋಬ್ಬರಿ 14 ಬೈಕ್ಗಳನ್ನ ಜಪ್ತು ಮಾಡಿ ಪ್ರಕರಣವೊಂದನ್ನ ಭೇದಿಸಿದೆ. ತೀವ್ರ ಕುತೂಹಲವಾಗಿದೆ ಈ ಕೇಸ್..
ಭದ್ರಾವತಿ ತಾಲ್ಲೂಕು
ಇಲ್ಲಿ ಆಗಾಗ ಬೈಕ್ ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇದ್ದವು. ಈ ಸಂಬಂಧ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಅನೀಲ್ ಕುಮಾರ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ನಾಗರಾಜ ಪೊಲೀಸ್ ಉಪಾಧೀಕ್ಷರು ಭಧ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ್ ಕುಮಾರ್ ಸಿಪಿಐ ನಗರ ವೃತ್ತ, ಜಗದೀಶ ಹಂಚಿನಾಳ್, ಪಿಐ ಗ್ರಾಮಾಂತರ ಪೊಲೀಸ್ ಠಾಣೆ, ಶ್ರೀಮತಿ ನಾಗಮ್ಮ ಪಿಐ ಪೇಪರ್ ಟೌನ್ ಠಾಣೆ, ಲಕ್ಷ್ಮಿಪತಿ ಪಿ. ಐ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸುರೇಶ ಪಿ.ಎಸ್.ಐ ಹೊಳೆಹೊನ್ನೂರು, ಪಿ.ಎಸ್.ಐ ನ್ಯೂ ಟೌನ್ ಪೊಲೀಸ್ ಠಾಣೆ, ಚಂದ್ರಶೇಖರ್ ಎ.ಎಸ್.ಐ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ನವೀನ್, ನ್ಯೂಟೌನ್ ಪೊಲೀಸ್ ಠಾಣೆ, ಚನ್ನಕೇಶವ, ಭದ್ರಾವತಿ ಹಳೇನಗರ ಪೊಲೀಸ್ ಠಾಣೆ, ನಾಗರಾಜ್, ಪೇಪರ್ ಟೌನ್ ಪೊಲೀಸ್ ಠಾಣೆ, ಪಿಸಿ ಆದರ್ಶ, ಹೊಸಮನೆ ಪೊಲೀಸ್ ಠಾಣೆ ರವರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಇದೀಗ ಈ ತಂಡ ಪ್ರಕರಣವನ್ನು ಭೇದಿಸಿದೆ.
READ : ಶಿವಮೊಗ್ಗ ನಗರದಲ್ಲಿ ಆರಂಭವಾಗುತ್ತಿದೆ ಎದೆಹಾಲಿನ ಬ್ಯಾಂಕ್!
ಈ ನಡುವೆ ದಿನಾಂಕಃ 16-12-2023 ರಂದು ನ್ಯೂ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0209/2023 ಕಲಂ 379 ಐ.ಪಿ.ಸಿ ಅಡಿ ದ್ವಿಚಕ್ರ ವಾಹನ ಕಳ್ಳತನ ಕೇಸ್ ದಾಖಲಾಗಿತ್ತು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಟ್ವಿಸ್ಟ್ ನೀಡಿದೆ. ಪ್ರಕರಣ ಸಂಬಂಧ ಸಂಬಂಧಿಸಿದಂತೆ ಆರೋಪಿಗಳಾದ 1) ಅಬ್ದುಲ್ ಕರೀಂ @ ಕರೀಂ @ ಮನ್ನಾ, 27 ವರ್ಷ, ಸಿದ್ದಾಫುರ ಹೊಸೂರು, ಭಧ್ರಾವತಿ ಮತ್ತು 2) ಅರ್ಷೀಲ್ ಪಾಷಾ @ ಹರ್ಷೀಲ್, 34 ವರ್ಷ, ಸಿದ್ದಾಫುರ ಹೊಸೂರು ಭದ್ರಾವತಿ ರವರನ್ನು ದಸ್ತಗಿರಿ ಮಾಡಿದ ಪೊಲೀಸರಿಗೆ ಉಳಿದ ಪ್ರಕರಣಗಳ ಸುಳಿವು ಸಿಕ್ಕಿದೆ..
ವಿಚಾರಣೆ ಮುಂದುವರಿಸಿದ ಪೊಲೀಸರು ಆರೋಪಿತರಿಂದ ನ್ಯೂಟೌನ್ ಪೊಲೀಸ್ ಠಾಣೆಯ 7, ಹೊಸಮನೆ ಪೊಲೀಸ್ ಠಾಣೆಯ 2, ಪೇಪರ್ ಟೌನ್ ಪೊಲೀಸ್ ಠಾಣೆಯ 1, ದೊಡ್ಡಪೇಟೆ ಪೊಲೀಸ್ ಠಾಣೆಯ 1, ತರೀಕೆರೆ ಪೊಲೀಸ್ ಠಾಣೆಗೆ ಸೇರಿದ 1 ಪ್ರಕರಣ ಸೇರಿ ಒಟ್ಟು 12 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ 12 ಬೈಕ್ ಗಳು ಹಾಗೂ ಕೃತ್ಯಕ್ಕೆ ಬಳಸಲಾದ 2 ಬೈಕ್ ಗಳು ಸೇರಿ ಅಂದಾಜು ಮೌಲ್ಯ 5,20,000/- ರೂಗಳ, 14 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
