ಶಿವರಾಜ್ ಕುಮಾರ್ ಗೆ ಎಂಪಿ ಟಿಕೆಟ್ ನೀಡುತ್ತೇನೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್! ಶಿವಮೊಗ್ಗ ಕುತೂಹಲ!

SHIVAMOGGA |  Dec 10, 2023 |  ಶಿವಮೊಗ್ಗ ಸಂಸತ್ ಚುನಾವಣೆ ಅಖಾಡಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನಿಂದ ಅಭ್ಯರ್ಥಿ ಯಾರು ಎಂಬುದು ಇನ್ನಷ್ಟು ಮತ್ತಷ್ಟು ಕುತೂಹಲಗೊಳ್ಳುತ್ತಿದೆ. ಈ ನಡುವೆ ಶಿವಮೊಗ್ಗದಿಂದ ಗೀತಾ ಶಿವರಾಜ್​ ಕುಮಾರ್​ಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಗಳು ಸಹ ಕೇಳಿಬರುತ್ತಿದ್ದವು. ಇದಕ್ಕೆ ವಿರೋಧವೂ ಎದುರಾಗಿತ್ತು. ಆದರೆ ಈ ನಿಟ್ಟಿನಲ್ಲಿ ಮಧು ಬಂಗಾರಪ್ಪರವರು ಪ್ರಯತ್ನ ಮುಂದುವರಿಸಿದ್ದಾರೆ ಎಂಬ ಮಾತುಗಳು ಸಹ ಇವೆ. 

 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 

ಇವೆಲ್ಲದರ ನಡುವೆ ಇವತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಹೊಸದೊಂದು ಮಾತನ್ನ ಹೊರಹಾಕಿದ್ದಾರೆ. ಶಿವರಾಜ್ ಕುಮಾರ್ ಒಪ್ಪಿದರೇ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್​ ರವರು ಘೋಷಿಸಿದ್ದಾರೆ. ಬೆಂಗಳೂರು ನಲ್ಲಿ ನಡೆಯುತ್ತಿರುವ ಈಡಿಗ ಸಮಾವೇಶದಲ್ಲಿ  ಮಾತನಾಡಿದ ಡಿಕೆಶಿ ಶಿವರಾಜ್ ಕುಮಾರ್​ರಿಗೆ  ಈಗಾಗಲೇ ಹೇಳಿದ್ದೇನೆ. ಸಂಸತ್ ಚುನಾವಣೆಗೆ ನಿಲ್ಲು ಎಂದು ,ಕೇಳಿದ ಕಡೆಯಲ್ಲಿ ಎಂಪಿ ಟಿಕೆಟ್ ಕೊಡುತ್ತೇವೆ ಎಂದಿದ್ದೇನೆ. 

READ : ಮೂರು ದಿನ ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಆದರೆ ನಾಲ್ಕೈದು ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.ಸಿನಿಮಾ ಮಾಡಬಹುದು. ಆದರೆ ಸಂಸದ ಆಗಿ ಪಾರ್ಲಿಮೆಂಟ್​ಗೆ ಆಯ್ಕೆಯಾಗುವ ಯೋಗ ಯಾವಾಗಲು ಬರಲ್ಲ ಮನೆ ಬಾಗಿಲಿಗೆ ಬಂದಿದೆ. ಅವಕಾಶ ತಪ್ಪಿಸಿಕೊಳ್ಳಲು ಹೋಗಬೇಡಿ ಎಂದಿದ್ದಾರೆ. ಅಲ್ಲದೆ ನಮ್ಮ ಸರ್ಕಾರ ನಿಮ್ಮ ಜೊತೆ ಇದೆ. ನೀವು ನಮ್ಮ ಜೊತೆಗೆ ಇರಿ ಎಂದು ತಿಳಿಸಿದ್ದಾರೆ. 

ಶಿವಮೊಗ್ಗದಿಂದ ಶಿವರಾಜ್ ಕುಮಾರ್ ?

ಈಗಾಗಲೇ ಗೀತಾ ಶಿವರಾಜ್ ಕುಮಾರ್ ರವರ ಹೆಸರು ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ. ಇದರ ನಡುವೆ ಇವತ್ತು ಡಿಕೆ ಶಿವಕುಮಾರ್ ಶಿವರಾಜ್ ಕುಮಾರ್​ ರವರ ಹೆಸರನ್ನ ತೇಲಿ ಬಿಟ್ಟಿದ್ದಾರೆ. ಈಡಿಗ ಸಮಾವೇಶದಲ್ಲಿಯೇ ಈ ಮಾತನ್ನ ಹೇಳಿರುವುದು ಇನ್ನಷ್ಟು ಕುತೂಹಲವನ್ನು ಮೂಡಿಸುತ್ತಿದೆ. ಆದರೆ ಈ ಬಗ್ಗೆ ಕಾರ್ಯಕ್ರಮದಲ್ಲಿಯೇ ಸ್ಪಷ್ಟನೆ ನೀಡಿದ ಶಿವರಾಜ್ ಕುಮಾರ್ ತಮ್ಮ ತಂದೆ ಹೇಳಿಕೊಟ್ಟಿದ್ದು ಇಷ್ಟೆ ಬಣ್ಣ ಹಚ್ಚುತ್ತಿರಬೇಕು, ಆ್ಯಕ್ಟ್ ಮಾಡುತ್ತಿರಬೇಕಷ್ಟೆ.. ನಿಮ್ಮನ್ನೆಲ್ಲಾ ರಂಜಿಸಬೇಕು.. ಅದಕ್ಕಷ್ಟೆ ಸೀಮಿತ ಎಂದಿದ್ದಾರೆ. ಅಲ್ಲದೆ ನಮ್ಮ ಮನೆಯಲ್ಲಿ ಹೆಣ್ಣನ್ನು ತೆಗೆದುಕೊಂಡಿದ್ದು  ಬಂಗಾರಪ್ಪನವರ ಕುಟುಂಬದಿಂದ ಅವರ ಕುಟುಂಬದವರು ಯಾರು ಸಹ ರಾಜಕಾರಣಕ್ಕೆ ಬನ್ನಿ ಎಂದು ಕೇಳಿಲ್ಲ ಎಂದರು . ಅಲ್ಲದೆ ಗೀತಾ ಶಿವರಾಜ್ ಕುಮಾರ್​ಗೆ ರಾಜಕಾರಣದಲ್ಲಿ ಇಂಟ್ರಸ್ಟ್ ಇದೆ. ಹಾಗಾಗಿ ಅದರಲ್ಲಿ ಸಾಗಲಿ ಎಂದು ಬಿಟ್ಟಿದ್ದೇನೆ ಎಂದಿದ್ದಾರೆ. 


 

Leave a Comment