ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ನಾಯಿಗಳ ಅಟ್ಯಾಕ್​! ಜಸ್ಟ್​ ಬಚಾವ್

Malenadu Today

KARNATAKA |  Dec 9, 2023 |  ಬೀದಿ ನಾಯಿಗಳ ಹಾವಳಿಗೆ ಹೆಚ್ಚಾಗಿ ಗುರಿಯಾಗುವುದು ವಾಹನ ಸವಾರರು ಹಾಗೂ ಪುಟಾಣಿಗಳು. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣವೊಂದು ಸೊರಬ ತಾಲ್ಲೂಕಿನಲ್ಲಿ ನಡೆದಿದೆ. ಪುಟ್ಟ ಬಾಲಕಿಯೊಬ್ಬಳು ಬೀದಿ ನಾಯಿಗಳ ದಾಳಿಯಿಂದ ಜಸ್ಟ್ ಬಚಾವ್ ಆಗಿದ್ದಾಳೆ. ಈ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

READ : Public Notice | ವಿದ್ಯಾರ್ಥಿ ಹೆಸರು ಶಾಲೆ ದಾಖಲಾತಿ ಹಾಗೂ ಆಧಾರ್​ ನಲ್ಲಿ ತಪ್ಪಾಗಿದ್ದರೇ ಏನು ಮಾಡಬೇಕು! ಇಲ್ಲಿದೆ ಶಿಕ್ಷಣ ಇಲಾಖೆಯ ಮಾಹಿತಿ

ವಿಡಿಯೋ ಲಿಂಕ್ : https://www.facebook.com/reel/372804378538269

ಕೆಲವು ಸೆಕೆಂಡ್​ಗಳ ವಿಡಿಯೋದಲ್ಲಿ ಬಾಲಕಿಯೊಬ್ಬಳು ಮನೆಯ ಬಾಗಿಲು ತೆರೆದುಕೊಂಡು ಹೊರಕ್ಕೆ ಬರುತ್ತಾಳೆ. ರಸ್ತೆಯ ಇನ್ನೊಂದು ಬದಿಗೆ ಹೋಗಬೇಕಿದ್ದ ಬಾಲಕಿ ಗುಡುಗುಡು ಅಂತಾ ಓಡಿ ಬರುತ್ತಾಳೆ. ಇತ್ತ ಇನ್ನೊಂದು ಬದಿಯಲ್ಲಿ ನಾಲ್ಕು ಬೀದಿ ನಾಯಿಗಳು ನಿಂತಿರುತ್ತವೆ. ಇವುಗಳ ಪೈಕಿ ಒಂದು ನಾಯಿ ಬಾಲಕಿ ಓಡಿಬರುವುದನ್ನ ಗಮನಿಸಿ ನೇರವಾಗಿ ದಾಳಿ ಇಡುತ್ತದೆ. ಬಾಲಕಿ ಬೆಚ್ಚಿಬೀಳುತ್ತಾ ಮೆಟ್ಟಿಲು ಹತ್ತಿ ಓಡುತ್ತಾಳೆ. ಅದೃಷ್ಟಕ್ಕೆ ನಾಯಿ ಬಾಲಕಿಗೆ ಕಚ್ಚಿಲ್ಲ. ಬೆಚ್ಚಿದ ಬಾಲಕಿಗೆ ಹೆದರಿದ ನಾಯಿ ಅಲ್ಲಿಂದ ಕಾಲ್ಕೀಳುತ್ತದೆ. 

ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಹಿನ್ನೆಲೆಯ ಧ್ವನಿಯಲ್ಲಿ ಘಟನೆ ಸೊರಬ ತಾಲ್ಲೂಕಿನಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ. 


 

Share This Article