SHIVAMOGGA | Dec 7, 2023 | ಕಟ್ಟಡದ ಮೇಲಿಂದ ಬಿದ್ದ ವಿದ್ಯಾರ್ಥಿನಿ ಸಾವಿನ ಪ್ರಕರಣದ ಸಂಬಂಧ ಎಫ್ಐಆರ್ ದಾಖಲಾಗಿದೆ. ಪ್ರತಿಷ್ಟಿತ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ 8 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಕಾಲೇಜಿನಲ್ಲಿ ಹೆಚ್ಚಿನ ಆರೋಪವನ್ನ ಮಾಡಲಾಗಿದೆ.
ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿಯು ತಮ್ಮ ಮಗಳನ್ನು ಪಿಯು ಕಾಲೇಜಿಗೆ ದಾಖಲು ಮಾಡಿ ಹಾಸ್ಟೆಲ್ನಲ್ಲಿ ಇದ್ದುಕೊಂಡು ಓದಲು ಬೇಕಾದ ವ್ಯವಸ್ಥೆ ಮಾಡಿದ್ದರು. ಪ್ರತಿ ಭಾನುವಾರ ತಮ್ಮ ತಂದೆ ತಾಯಿಗೆ ಫೋನ್ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನ ಸಿಬ್ಬಂದಿ ಹಾಸ್ಟೆಲ್ ಸಿಬ್ಬಂದಿ ತುಂಬಾ ಒತ್ತಡ ಹೇರುತ್ತಿದ್ದು, ನೀನು ಉತ್ತಮ ಅಂಕ ಗಳಿಸದಿದ್ದರೆ ನಮ್ಮ ಕಾಲೇಜಿನ ಹೆಸರು ಹಾಳಾಗುತ್ತದೆ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ
READ : ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು! ನಡೆದಿದ್ದರ ಬಗ್ಗೆ ಎಸ್ಪಿ ಹೇಳಿದ್ದೇನು?
ಘಟನೆ ನಡೆದ ದಿನದ ಎರಡನೇ ಮಹಡಿಯಿಂದ ವಿದ್ಯಾರ್ಥಿನಿ ಬಿದ್ದಿರುವುದಾಗಿ ಕಾಲೇಜಿನಿಂದ ಫೋಷಕರಿಗೆ ಕರೆಬಂದಿದ್ದು, ಅಲ್ಲಿ ಐದನೇ ಮಹಡಿಯಿಂದ ಬಿದ್ದಿರುವುದು ಗೊತ್ತಾಗಿದೆ ಎಂದು ಎಫ್ಐಆರ್ ನಲ್ಲಿ ದೂರುದಾರರು ಉಲ್ಲೇಖಿಸಿದ್ದಾರೆ. ಸದ್ಯ ಈ ಸಂಬಂಧ : IPC 1860 (U/s-306,34) ಅಡಿಯಲ್ಲಿ ಕೇಸ್ ದಾಖಲಾಗಿದೆ
