ಶಿಕಾರಿಪುರದಲ್ಲಿಯೇ ಬಿ.ವೈ.ವಿಜಯೇಂದ್ರರಿಗೆ ಟಾಂಗ್​ ಕೊಟ್ಟ ಕಾಂಗ್ರೆಸ್! 30 ವರ್ಷದ ನಂತರ ಈ ಸಾಧನೆ

Malenadu Today

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga |  Malnenadutoday.com |  30 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ತರಲಘಟ್ಟ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ತೆರಳಿದೆ. 

ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮ  ಪಂಚಾಯಿತಿಯಲ್ಲಿ  ಒಟ್ಟು16 ಸದಸ್ಯರು  ಹೊಂದಿದ್ದು, ಇದರಲ್ಲಿ ಎಂಟು ಬಿಜೆಪಿ, ಎಂಟು ಕಾಂಗ್ರೆಸ್ ಸದಸ್ಯರ ಸಮಬಲ ಹೊಂದಿದ್ದು,  ಇಂದು ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ತೆಕ್ಕೆಯಲ್ಲಿದ್ದ ಗ್ರಾಮ ಪಂಚಾಯತಿಯನ್ನು  ಕಾಂಗ್ರೆಸ್ ಪಕ್ಷದ ಬೆಂಬಲಿತ 14 ಸದಸ್ಯರು   ಮತ ಚಲಾಯಿಸುವುದರ ಮೂಲಕ ಕಾಂಗ್ರೆಸ್   ಪಕ್ಷವು   ಗ್ರಾಮ ಪಂಚಾಯಿತಿಯನ್ನು ತನ್ನ ತಕ್ಕೆಗೆ   ಪಡೆಯಿತು. 

READ: ಮುಂದಿನ 3 ವರ್ಷಗಳಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳ ಸ್ಥಾಪನೆ

ಚುನಾವಣಾ ಅಧಿಕಾರಿ ಜವಾಬ್ದಾರಿಯನ್ನು ತಾಲೂಕಿನ ಶಿಕ್ಷಣಾಧಿಕಾರಿ ಶಶಿಧರ್ ನಿರ್ವಹಿಸಿದರು.  ಅಧ್ಯಕ್ಷರಾಗಿ ಮಂಜಮ್ಮ ಜ್ಞಾನೇಶ್ ಉಪಾಧ್ಯಕ್ಷರಾಗಿ ಕುಮಾರ್ ನಾಯಕ್ ತಿಮ್ಲಾಪುರ  ಆಯ್ಕೆಯಾದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ನಾಗರಾಜ್ ಗೌಡ,   ಮಾರವಳ್ಳಿ ಉಮೇಶ್ ರಾಘವೇಂದ್ರ ನಾಯಕ್, ಶಿವು ನಾಯಕ್, ಸೇರಿದಂತೆ  ಪಕ್ಷದ ಮುಖಂಡರು ಉಪಸ್ಥಿತರಿದ್ದರು.  

READ :ಪ್ಪಲಿ ಜಾಗ್ರತೆ! ಬೆಳಗಿನ ಜಾವ ಬರುತ್ತಾನೆ ಮೆಟ್ಟು ಕಳ್ಳ! ಏನಿದು ಶಿವಮೊಗ್ಗದಲ್ಲಿ!

ಈ ಸಂದರ್ಭ ಪಕ್ಷದ  ಮುಖಂಡರಾದ ನಾಗರಾಜ್ ಗೌಡ್ರು ಮಾತನಾಡಿ, ಶಿಕಾರಿಪುರ ತಾಲೂಕಿನ  ಶಾಸಕರು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರ  ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗವಾಗಿದೆ,  ವಿಜಯೇಂದ್ರ  ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಮೇಲೆ ಶಿಕಾರಿಪುರದಲ್ಲಿ  ಮೊದಲ ಸೋಲಾಗಿದ್ದು   ಇನ್ನು ಮುಂದೆ ಎಲ್ಲಾ ಕ್ಷೇತ್ರದಲ್ಲೂ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ,  ಮೊದಲಿಗೆ ತನ್ನ ಸ್ವಕ್ಷೇತ್ರದಿಂದಲೇ ಸೋಲು  ಪ್ರಾರಂಭವಾಗಿದೆ.  ಕಾಂಗ್ರೆಸ್ ಪಕ್ಷ ಮುಂದಿನ  ದಿನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದರು.


Share This Article