KARNATAKA NEWS/ ONLINE / Malenadu today/ Nov 13, 2023 SHIVAMOGGA NEWS
Shivamogga | ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದ ಆನೆ ಭಾನುಮತಿ ಆನೆಯ ಬಾಲಕ್ಕೆ ಕತ್ತಿ ಹಾಕಿದ್ದ ಪ್ರಕರಣ ಇದೀಗ ತಾರ್ಕಿಕ ಅಂತ್ಯ ಕಂಡಿದೆ. ಪ್ರಕರಣದ ಸಂಬಂಧ ಆನೆ ಬಿಡಾರದ ಇಬ್ಬರು ಕಾವಾಡಿಗಳನ್ನು ಅಮಾನತುಗೊಳಿಸಲಾಗಿದೆ.
ಆನೆಯ ಮುತುವರ್ಜಿ ವಹಿಸಿದ್ದ ಕಾವಾಡಿಗಳಾದ ಸುದೀಪ್ ಹಾಗೂ ಮಹಮ್ಮದ್ ಅಮಾನತುಗೊಂಡವರು. ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆ ತುಂಬು ಗರ್ಭಿಣಿ ಆಗಿದ್ದಾಗ ಅ.17ರಂದು ಅದರ ಬಾಲಕ್ಕೆ ಮಚ್ಚಿನಿಂದ ಹೊಡೆದಂತೆ ಗಾಯವಾಗಿತ್ತು.
READ : ಯಾರಿಗೂ ಸಿಗದ ಅಜ್ಜಿ ಕಾಡಿಂದ ಕೂಗಿ ಕರೆದಳು! 3 ದಿನ ಅರಣ್ಯದಲ್ಲಿ ಹೇಗಿದ್ದಳು 85 ವರ್ಷದವಳು! ಹೊಸನಗರದಲ್ಲಿ ಅಚ್ಚರಿ
ಅರ್ಧ ಬಾಲ ಜೋತಾಡುತ್ತಿತ್ತು. ಶಸ್ತ್ರಚಿಕಿತ್ಸೆ ನೀಡಿದ ಬಳಿಕ ಆನೆ ಚೇತರಿಕೆ ಕಂಡಿತ್ತು. ಆ ಬಳಿಕ ಮಲೆನಾಡು ಟುಡೆ ಈ ಬಗ್ಗೆ ವರದಿ ಮಾಡಿತ್ತು. ಇದರ ಬೆನ್ನಲ್ಲೆ ರಾಷ್ಟ್ರೀಯ ಮಾಧ್ಯಮ ಹಾಗೂ ರಾಜ್ಯ ಪತ್ರಿಕೆಗಳು ಪ್ರಕರಣದ ಬೆನ್ನು ಬಿದ್ದಿದ್ದವು.
ಇದರ ಪರಿಣಾಮವಾಗಿ ಪ್ರಕರಣದ ತನಿಖೆಯನ್ನ ಅರಣ್ಯ ಇಲಾಖೆ ಕೈಗೊಂಡಿತ್ತು. ತನಿಖಾ ವರದಿಯಲ್ಲಿ ಕೆಲವೊಂದು ವಿಚಾರಗಳು ಹೊರಗಡೆ ಬಂದಿತ್ತು. ಅಲ್ಲದೆ ಅಚಾತುರ್ತಯದಿಂದಲೇ ಈ ಕೃತ್ಯ ನಡೆದಿತ್ತು ಎಂಬುದು ಗೊತ್ತಾಗಿತ್ತು. ಈ ಸಂಬಂಧ ಇದೀಗ ಸಿಬ್ಬಂದಿಯನ್ನ ಅಮಾನತ್ತು ಮಾಡಲಾಗಿದೆ
