ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ವರ್ಗಾವಣೆ! ಎಲ್ಲಿಗೆ ಗೊತ್ತಾ? ಕಾರಣ?

Malenadu Today

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS

hosanagara |  ದಿಢೀರ್​ ಬೆಳವಣಿಗೆ ಎಂಬಂತೆ  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಅವರನ್ನು ಶಿವಮೊಗ್ಗದಿಂದ ಕೋಲಾರಕ್ಕೆ ಎತ್ತಂಗಡಿ ಮಾಡಲಾಗಿದೆ.ಈ ಸಂಬಂಧ ರಾಜ್ಯಸರ್ಕಾರದ ಆದೇಶ ಹೊರಬಿದ್ದಿದೆ. 

 

ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಾಕ್ಷರಿ ಅವರನ್ನು ಕೋಲಾರ ಜಿಲ್ಲೆಯಲ್ಲಿ ಖಾಲಿಯಿರುವ ಇರುವ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ. 

READ :ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್​.ಷಡಾಕ್ಷರಿ ವಿರುದ್ಧ ಎಫ್​ಐಆರ್ ! ಕಾರಣವೇನು?

ಈ ಸಂಬಂಧ  ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ (ಆಡಳಿತ ಮತ್ತು ಮುಂಗಡಗಳು ವಿಭಾಗ) ಮಂಗಳವಾರ ಆದೇಶ ಹೊರಡಿಸಿದೆ. 

ಸದ್ಯ ಇವರ ವರ್ಗಾವಣೆ ಹಿನ್ನೆಲೆಯಲ್ಲಿ ರಾಜಕಾರಣ ಇರುವುದು ಸ್ಪಷ್ಟವಾಗಿದೆ ಆದರೆ ಆ ರಾಜಕಾರಣ ಯಾವುದು ಎಂಬುದು ತೀವ್ರ ಚರ್ಚೆಗೆ ಕಾರಣವಾಗಿದೆ. 


Share This Article