KARNATAKA NEWS/ ONLINE / Malenadu today/ Nov 3, 2023 SHIVAMOGGA NEWS
SHIVAMOGGA | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತುಂಗಾನದಿಯ ನಡುವೆ ಇರುವ ಶ್ರೀರಾಮಕೊಂಡಕ್ಕೆ ಇವತ್ತು ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಭೇಟಿಕೊಟ್ಟಿದ್ದಾರೆ.
1981 ರಲ್ಲಿ ಆರಂಭವಾದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ 180 ದೇಶಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ವಿವಿಧ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಫೌಂಡೇಶನ್ನ ಸಂಸ್ಥಾಪಕ ರವಿಶಂಕರ್ ಗುರೂಜಿ ಸ್ವತಃ ಆಧ್ಯಾತ್ಮಿಕ ನಾಯಕ ಎನಿಸಿದ್ದಾರೆ.
READ : ಹಾಲಿ ಸಿಎಂ ಮತ್ತು ಮಾಜಿ ಸಿಎಂ! ದಿಗ್ಗಜರ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ ಭದ್ರಾವತಿ ವಿಐಎಸ್ಎಲ್!
ಇವತ್ತು ಅವರು ತಮ್ಮ ಆಪ್ತರೊಂದಿಗೆ ಶ್ರೀರಾಮಕೊಂಡ ತೀರ್ಥಕ್ಕೆ ಭೇಟಿಕೊಟ್ಟರು. ಅಲ್ಲಿಯೇ ಕೆಲಕಾಲ ಕಳೆದ ಅವರು ರಾಮಕೊಂಡದ ತೀರ್ಥವನ್ನು ಪ್ರೋಕ್ಷಣೆ ಮಾಡಿಕೊಂಡರು. ಆನಂತರ ಅಲ್ಲಿಂದ ತೆರಳಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹೋಗಿದ್ದ ಅವರು ವಾಪಸ್ ಆಗುವ ಮಾರ್ಗಮಧ್ಯೆ ತೀರ್ಥಹಳ್ಳಿಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
