ಹೊಸನಗರ ತಾಲ್ಲೂಕಿನಲ್ಲಿ ಖಾಸಗಿ ಬಸ್​ ಮತ್ತು ಒಮಿನಿ ನಡುವೆ ಡಿಕ್ಕಿ

Malenadu Today

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS

RIPPONPETE | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ಅರಸಾಳು ಬಳಿಯಲ್ಲಿ ನಿನ್ನೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಒಮಿನಿ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ  ಓರ್ವನಿಗೆ ಗಾಯಗವಾಗಿದೆ. 

ರಿಪ್ಪನ್​ಪೇಟೆಯ ಸಮೀಪದ ಅರಸಾಳು ಬಳಿ ಘಟನೆ ನಡೆದಿದ್ದು ರಿಪ್ಪನ್​ಪೇಟೆಯಿಂದ ಶಿವಮೊಗ್ಗದ ಕಡೆಗೆ ಖಾಸಗಿ ಬಸ್ ಹೋಗುತ್ತಿತ್ತು. ಅದೇ ಸಂದರ್ಭದಲ್ಲಿ  ಶಿವಮೊಗ್ಗದಿಂದ ರಿಪ್ಪನ್​ಪೇಟೆಗೆ ಮಾರುತಿ ಒಮಿನಿ ಬರುತ್ತಿತ್ತು. ಅರಸಾಳು ಕೆರೆಯ ಬಳಿ ಸಿಗುವ ಟರ್ನಿಂಗ್​ನಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿಯಾಗಿದೆ. 

READ : ಪತ್ನಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ಕಾರು ಪಡೆದವ ಮಾಡಿದ್ದು ಹೀಗೆ! ವಿವರ ಇಲ್ಲಿದೆ

ಘಟನೆಯಲ್ಲಿ  ಒಮಿನಿ ಚಾಲಕ ಗಾಗೊಂಡಿದ್ದು, ಆತನನ್ನು ಗರ್ತಿಕೆರೆ ಮೂಲದವನು ಎಂದು ತಿಳಿದುಬಂದಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಇನ್ನೂ ಘಟನೆಯಲ್ಲಿ ಕಾರು ಬಹುತೇಕ ಜಖಂಗೊಂಡಿದೆ 


Share This Article