KARNATAKA NEWS/ ONLINE / Malenadu today/ Oct 30, 2023 SHIVAMOGGA NEWS
THIRTHAHALLI | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಲ್ಲಿ ನಡೆದ ಘಟನೆಯೊಂದು ಕುತೂಹಲ ಮೂಡಿಸುತ್ತಿದೆಯಷ್ಟೆ ಅಲ್ಲದೆ ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ ನೀಡುತ್ತಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನ ನಲ್ಲಿ : IPC 1860 (U/s-379,354,504,506,511) ಅಡಿಯಲ್ಲಿ ಕೇಸ್ ದಾಖಲಾಗಿದ.ಎ
ಇಲ್ಲಿನ ನಿವಾಸಿ ಮಹಿಳೆಯೊಬ್ಬರು ಕಳೆದ 26 ನೇ ತಾರೀಖು ದೇವಸ್ಥಾನಕ್ಕೆಂದು ಹೋಗಿದ್ದಾರೆ. ಅಲ್ಲಿಂದ ವಾಪಸ್ ಬರುವಾಗ ಅವರ ತೋಟದ ಸಮೀಪ ಯಾರೋ ಅಡಿಕೆ ಕೀಳುತ್ತಿರುವುದು ಕಾಣಿಸಿದೆ. ತಡಮಾಡದೇ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಅಲ್ಲಿ ನೋಡುವಾಗ, ಅವರದ್ದೆ ತೋಟದ ಅಡಿಕೆಯನ್ನು ಅದೇ ಊರಿನ ನಿವಾಸಿಯೊಬ್ಬ ಯಾವ ಹೆದರಿಕೆಯಿಲ್ಲದೆ ಕೀಳುತ್ತಿದ್ದ.
READ : ಇಸ್ರೇಲ್ನಿಂದ ಮಧು ಬಂಗಾರಪ್ಪರಿಗೆ ವಿಡಿಯೋ ಕಾಲ್ | ಶಿವಮೊಗ್ಗದ ವ್ಯಕ್ತಿಗೆ ಸಚಿವರ ಸಹಾಯ!
ಇದನ್ನ ಗಮನಿಸಿದ ಮಹಿಳೆಯು ಜೋರಾಗಿ ಕಿರುಚಲು ಆರಂಭಿಸಿದ್ದಾರೆ. ತಕ್ಷಣವೇ ಅಡಿಕೆ ಕೀಳುತ್ತಿದ್ದ ವ್ಯಕ್ತಿ ಮಹಿಳೆಯ ಮೇಲೆ ಹಲ್ಲೆ ಮಾಡಿ, ಯಾರಿಗಾದರೂ ತಿಳಿಸಿದರೇ ಹುಷಾರ್ ಎಂದು ಹೆದರಿಸಿದ್ದಾನೆ. ಅಷ್ಟರಲ್ಲಿ ಶಬ್ದ ಕೇಳಿ ಸ್ಥಳಕ್ಕೆ ಮಹಿಳೆಯ ಪತಿ ಹಾಗೂ ಸ್ಥಳೀಯರು ಬಂದಿದ್ದಾರೆ. ಇತ್ತ ಕಳ್ಳ ಕದ್ದಿದ್ದ 25 ಕೆಜಿ ಅಡಿಕೆಯನ್ನ ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಈ ಸಂಬಂಧ ಎಫ್ಐಆರ್ ಆಗಿದ್ದು ರಾಜಾರೋಷವಾಗಿ ಕಳ್ಳತನಕ್ಕೆ ಕೈ ಹಾಕಿದ ಘಟನೆ ಬಗ್ಗೆ ಚರ್ಚೆಯಾಗುತ್ತಿದೆ.
