ದಾವಣಗೆರೆ ಬಸ್​ನಲ್ಲಿ ಸೀಟು ಹಿಡಿದು ಪತ್ನಿಯನ್ನ ಹತ್ತಿಸಿ ಬಂದ ಪತಿಗೆ ಶಾಕ್! ರಶ್​ನಲ್ಲಿಯೇ ನಡೆದಿತ್ತು ಕಮಾಲ್​!

Malenadu Today

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಕಳ್ಳತನ ವಿಪರೀತವಾಗುತ್ತಿದೆ. ಕಣ್ಮುಂದೆಯೇ ಕಳ್ಳತನ ನಡೆದರೂ ಆರೋಪಿಗಳು ಪತ್ತೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲಿಯು ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್ ಸ್ಟ್ಯಾಂಡ್ ಕಳ್ಳರ ಅಡ್ಡೆಯಾದಂತಿದ್ದು, ಕಳೆದ ಮೂರು ತಿಂಗಳಲ್ಲಿನಲ್ಲಿ ಇಲ್ಲಿ ದಾಖಲೆಯ ಕಳ್ಳತನ ಪ್ರಕರಣಗಳು ನಡೆದಿದೆ. 

ಇದಕ್ಕೆ ಪೂರಕವಾಗಿ ಇದೀಗ ಮತ್ತೊಂದು ಕಳ್ಳತನ ಪ್ರಕರಣ ನಡೆದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ. ಶಿವಮೊಗ್ಗದ ಭದ್ರಾವತಿಯ ನಿವಾಸಿಯೊಬ್ಬರು ತಮ್ಮ  ಹೆಂಡತಿ ಮಕ್ಕಳನ್ನು ದಾವಣಗೆರೆ ಮಾವನ ಮನೆಗೆ ಕಳುಹಿಸಿಕೊಡಲು ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಗೆ ಬಂದಿದ್ದರು. 

ಬಳಿಕ ದಾವಣಗೆರೆ ಬಸ್ ಹತ್ತಿ ಪತ್ನಿಗಾಗಿ ಸೀಟು ಹಿಡಿದು ಅಲ್ಲಿಂದ ವಾಪಸ್ ಆಗಿದ್ದಾರೆ. ಈ ಮಧ್ಯೆ ಅವರ ಪತ್ನಿ ಫೋನ್ ಮಾಡಿ  ವ್ಯಾನಿಟಿ ಬ್ಯಾಗ್ ನಲ್ಲಿದ್ದ  ಆಭರಣಗಳು ಕಾಣಿಸ್ತಿಲ್ಲ ಎಂದು ತಿಳಿಸಿದ್ದಾರರೆ. ರಶ್ ಇದ್ದ ಬಸ್​ನಲ್ಲಿ ಯಾರೋ ಕಳ್ಳರು, ಸುಮಾರು  22 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೆಸ್​, ಮತ್ತು 11 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮಕಿ ಕದ್ದಿರುವುದು ಗೊತ್ತಾಗಿದ್ದು, ಈ ಸಂಬಂಧ ದೂರು ದಾಖಲಾಗಿದ್ದು, ಎಫ್ಐಆರ್ ದರ್ಜ್​ ಆಗಿದೆ. 


ಇನ್ನಷ್ಟು ಸುದ್ದಿಗಳು 

ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ


 

Share This Article