KARNATAKA NEWS/ ONLINE / Malenadu today/ Oct 16, 2023 SHIVAMOGGA NEWS
ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣದ ಬಳಿಕ ಶಿವಮೊಗ್ಗ ಪೊಲೀಸ್ ಇಲಾಖೆ ಸೋಶಿಯಲ್ ಮೀಡಿಯಾದ ಚಟುವಟಿಕೆ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಪ್ರಚೋಧನಕಾರಿ ಪೋಸ್ಟ್ಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿರುವ ಪೊಲೀಸ್ ಇಲಾಖೆ ಸುಮುಟೋ ಕೇಸ್ ದಾಖಲಿಸ್ತಿದೆ.
ಅದರಲ್ಲಿಯು ಕಳೆದ ಹದಿನೈದಿಪ್ಪತ್ತು ದಿನಗಳಲ್ಲಿ ಉದ್ದೇಶಪೂರ್ವಕವಾಗಿ ಪೋಸ್ಟ್ಗಳನ್ನು ಹಾಕಿ ಕೆಣಕುವ ಕೆಲಸವನ್ನು ಕೆಲ ದುಷ್ಕರ್ಮಿಗಳು ಮಾಡುತ್ತಿರುವುದು ಪೊಲೀಸ್ ಮೂಲಗಳಿಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಸಾಮಾಜಿಕ ಜಾಲತಾಣದ ಚಟುವಟಿಕೆಗಳನ್ನು ಪೊಲೀಸ್ ಇಲಾಖೆ ಹತ್ತಿರದಿಂದ ಗಮನಿಸ್ತಿದೆ. ಅದರಲ್ಲಿಯು ವಾಟ್ಸ್ಯಾಪ್ ಚಟುವಟಿಕೆಗಳನ್ನು ವಾಟ್ಸ್ಯಾಪ್ ಗ್ರೂಪ್ ಚಟುವಟಿಕೆಗಳ ಮೇಲೆ ಇಲಾಖೆ ಕಣ್ಣು ನೆಟ್ಟಿದೆ.
ಇತ್ತೀಚೆಗೆ ಶಿವಮೊಗ್ಗದ ಶಿವಪ್ಪನಾಯಕನ ವೃತ್ತದ ಬಳಿಯಲ್ಲಿ ನಿಲ್ಲಿಸಲಾಗಿದ್ದ ಉಗ್ರ ನರಸಿಂಹನ ಪ್ರತಿಕೃತಿಯ ವಿಡಿಯೋವನ್ನು ಬೇರೆಯದ್ದೆ ರೀತಿಯಲ್ಲಿ ಎಡಿಟ್ ಮಾಡಲಾಗಿತ್ತು. ಇದರ ಬೆನ್ನಲ್ಲೆ ಇದೀಗ ಹಿಂದೂ ಹರ್ಷನ ಫೋಟೋ ಹಾಗೂ ಆತ ಹತ್ಯೆಯಾದ ಫೋಟೋ ಬಳಸಿ ಪ್ರಚೋದನಕಾರಿ ಪೋಸ್ಟ್ ಬರೆದು ವಾಟ್ಸ್ಯಾಪ್ ನಲ್ಲಿ ಷೇರ್ ಮಾಡಲಾದ ವಿಚಾರ ಕೇಳಿಬಂದಿದೆ. ಅಲ್ಲದೆ ಈ ಸಂಬಂಧ ಸುಮುಟೋ ಕೇಸ್ ದಾಖಲಾಗಿದೆ.
ದೊಡ್ಡಪೇಟೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿರುವ ಮಾಹಿತಿಯಂತೆ ವಾಟ್ಸ್ಯಾಪ್ನಲ್ಲಿ ನಿಹಾಲ್ ಎಂಬಾತ ತನ್ನ ಸ್ಟೇಟಸ್ನಲ್ಲಿ ಎಡಿಟೆಡ್ ವಿಡಿಯೋವನ್ನು ಷೇರ್ ಮಾಡಿದ್ದ. ಅದರಲ್ಲಿ ಹಿಂದೂ ಹರ್ಷನ ಫೋಟೋಗಳು ಬಳಕೆಯಾಗಿದ್ದಲ್ಲವೇ ಆಕ್ಷೇಪಾರ್ಹ ಹೇಳಿಕೆ ಅದರಲ್ಲಿತ್ತು ಎನ್ನಲಾಗಿದೆ. 24 ಸೆಕೆಂಡ್ ವಿಡಿಯೋವನ್ ಆಧರಿಸಿ ಇದೀಗ ಎಫ್ಐಆರ್ ದಾಖಲಾಗಿದೆ.
ಯಾವುದೇ ಆಕ್ಷೇಪಾರ್ಹ ವಿಡಿಯೋಗಳು ಕಂಡು ಬಂದಲ್ಲಿ, ಅದರ ಸ್ಕ್ರೀನ್ ಶಾಟ್ ಹಾಗೂ ಅಂಶಗಳನ್ನು ಸಂಬಂಧ ಪಟ್ಟ ಪೊಲೀಸ್ ಸ್ಟೇಷನ್ಗೆ ತಿಳಿಸಬಹುದು, ಈ ಬಗ್ಗೆ ಮಾಹಿತಿ ನೀಡಿದಲ್ಲಿ ಪ್ರಚೋಧನಕಾರಿ ಅಂಶಗಳನ್ನು ಹರಡುವ ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ.
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ
