ಮತ್ತೆ ಎಲೆಕ್ಷನ್​ ತಯಾರಿಯಲ್ಲಿ ಆಯನೂರು ಮಂಜುನಾಥ್! ಈ ಸಲ ಸ್ಪರ್ಧೆ ಎಲ್ಲಿ ಗೊತ್ತಾ?

Malenadu Today

KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’

ಈ ಹಿಂದೆ ಜೆಡಿಎಸ್​ನಿಂದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಯನೂರು ಮಂಜುನಾಥ್  (Ayanur Manjunath) ಇದೀಗ ಮತ್ತೆ ಚುನಾವಣೆಗೆ ಸಿದ್ದರಾಗುತ್ತಿದ್ದಾರೆ. ಈ ಸಂಬಂಧ ಪಧವೀಧರ ಕ್ಷೇತ್ರ ಮತದಾರರಿಗಾಗಿ ಕಚೇರಿ ಆರಂಭಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಮೇಲ್ಮನೆ ಟಿಕೆಟ್‌ ನಾನೂ ಆಕಾಂಕ್ಷಿ ಎಂದಿದ್ದಾರೆ. 

 

ವಿಧಾನ ಪರಿಷತ್‌ಗೆ ಪುನಃ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ. ಪಕ್ಷದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇನೆ. ಹಿರಿತನದ ಆಧಾರದ ಮೇಲೆ ನನಗೆ ಟಿಕೆಟ್ ನೀಡುವ ಆತ್ಮವಿಶ್ವಾಸ ಇದೆ ಎಂದಿದ್ದಾರೆ.  

ನೈಋತ್ಯ ಪದವೀಧರ ಕ್ಷೇತ್ರದ ಚಟುವಟಿಕೆ ದೃಷ್ಟಿಯಿಂದ ನೋಂದಣಿ ಕಾರ್ಯಾಲಯ ಪ್ರಾರಂಭಿಸಿದ್ದೇನೆ. ನನ್ನಂತೆ ನಾಲೈದು ಜನ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷ ತೀರ್ಮಾನಿಸುತ್ತದೆ. 

ಈ ತಿಂಗಳ 30ರ ನಂತರ ನೋಟಿಫಿಕೇಷನ್‌ ಪ್ರಾರಂಭವಾಗಲಿದೆ. ಮತ್ತೆ ಮೇಲ್ಮನೆಗೆ ಪಕ್ಷ ಅವಕಾಶ ನೀಡುತ್ತದೆ ಅಂದುಕೊಂಡಿದ್ದೇನೆ ಎಂದರು.

ಇದೇ ವೇಳೇ  ಜೆಡಿಎಸ್-ಬಿಜೆಪಿ ಪಕ್ಷಗಳಿಗೆ ಮೈತ್ರಿ ಅನಿವಾರ್ಯ ಎಂದ ಅವರು, ಈಗ ಇಬ್ಬರ ಶಕ್ತಿಯೂ ಕುಂದಿದೆ. ಒಬ್ಬರಿಗೊಬ್ಬರು ಕೈಹಿಡಿದು ಓಡಾಡುವ ಸ್ಥಿತಿ ಇದೆ. ಈ ಜೋಡಿ ಕುರುಡನ ಹೆಗಲ ಮೇಲೆ ಕುಂಟ ಕುಳಿತು ಸವಾರಿ ಮಾಡಿದಂತಿದೆ ಎಂದರು.

ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

Share This Article