KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’
ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮತ್ತೊಂದು ಘಟನೆ ನಡೆದಿದೆ. ಸಮರ್ಪಕ ಸುರಕ್ಷತಾ ವ್ಯವಸ್ಥೆಗಳಿಲ್ಲದ ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುವುದು ಸಲೀಸಾದ ಕೆಲಸವಾದಂತಿದೆ. ಇದಕ್ಕೆ ಪೂರಕವೆಂಬಂತೆ ಮತ್ತೊಬ್ಬರು ಪ್ರಯಾಣಿಕರು ತಮ್ಮ ಹಣ ಮೊಬೈಲ್ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ನಡೆದಿದ್ದೇನು?
ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾಗರದ ತ್ಯಾಗರ್ತಿಯಲಿರುವ ತನ್ನ ತಾಯಿಯ ಮನೆಗೆ ಹೋಗಲು ಮಹಿಳೆಯೊಬ್ಬರು ಬೆಂಗಳೂರಿನಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಲ್ಲಿಂದ ಸಂಜೆ: 04-15 ಗಂಟೆ ಸಮಯದಲ್ಲಿ, ಸಾಗರದ ಕಡೆಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಬಸ್ ಹತ್ತಿ ಟಿಕೆಟ್ ಮಾಡಿಸಲು ಮುಂದಾಗಿದ್ದಾರೆ.
ಈ ವೇಳೆ ಬ್ಯಾಗ್ ಜಿಪ್ ತೆರೆದು ನೋಡಿದರೆ, ಅದರಲ್ಲಿದ್ದ ಪ್ಲರ್ಸ್ ಕಾಣಿಸಿಲ್ಲ. ಗಾಬರಿಗೊಂಡು ದೊಡ್ಡಪೇಟೆ ಪೊಲೀಸ್ ಸ್ಟೇಷನ್ (Doddapete Police Station) ಗೆ ದೂರು ನೀಡಿದ್ದಾರೆ. ಕಳ್ಳರು ಮಹಿಳೆಯ ಬ್ಯಾಗ್ನಲ್ಲಿದ್ದ 61000/- ರೂ ಬೆಲೆ ಬಾಳುವ ಬಂಗಾರದ ಒಡವೆ ಹಾಗು 14000/-ರೂ ನಗದು ಹಣ ಮತ್ತು ಒಂದು ನೋಕಿಯಾ ಕಿ ಪ್ಯಾಡ್ ಮೊಬೈಲನ್ನು ಪರ್ಸ್ ಕದ್ದೊಯ್ದಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
