KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸುತ್ತಮುತ್ತ ಕಳೆದ ಎರಡು ದಶಕಗಳಿಂದ ಸಲಗವೊಂದು ಓಡಾಡುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ಈ ಆನೆಯ ಜೊತೆ ಇನ್ನೆರೆಡು ಆನೆಗಳು ಈ ಭಾಗದಲ್ಲಿ ಸಂಚರಿಸತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳೀಯ ವರದಿಯ ಪ್ರಕಾರ, ಸೋಮೇಶ್ವರ ವನ್ಯಜೀವಿ ವಿಭಾಗದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಹೆಬ್ರಿ ಭಾಗದ ಕೋಡ್ಲು ತೀರ್ಥದ ಆಸುಪಾಸಿನಲ್ಲಿ ಆನೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಈ ಆನೆಗಳು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ಕಡೆಯಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಆಗುಂಬೆ ಭಾಗದಲ್ಲಿರುವ ಕಾಡಾನೆಯು ಇಲ್ಲಿಯೆ ಮಲ್ಲಂದೂರು ಭಾಗದಲ್ಲಿ ಸುತ್ತಾಡುತ್ತಿದೆ.
ಅದರ ಬೆನ್ನಲ್ಲೆ ಇನ್ನೆರಡು ಕಾಡಾನೆಗಳು ಕಾಣಿಸಿಕೊಂಡಿರುವುದು ಕತೂಹಲ ಹಾಗೂ ಆತಂಕ ಎರಡನ್ನು ಸಹ ಮೂಡಿಸಿದೆ.
ಇನ್ನಷ್ಟು ಸುದ್ದಿಗಳು
