ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದಿದ್ಯಾ? ವಿಡಿಯೋ ಬಗ್ಗೆ ಚಿಕ್ಕಮಗಳೂರು ಪೊಲೀಸರು ಹೇಳಿದ್ದೇನು?

Malenadu Today

KARNATAKA NEWS/ ONLINE / Malenadu today/ Jul 9, 2023 SHIVAMOGGA NEWS 

ಚಿಕ್ಕಮಗಳೂರು/ ನಿನ್ನೆಯಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಚಾರ್ಮಾಡಿ ಘಾಟಿಯದ್ದು ಎನ್ನಲಾದ ಗುಡ್ಡ ಕುಸಿತದ ವಿಡಿಯೋ ವೈರಲ್ ಆಗುತ್ತಿದೆ. ವಾಹನಗಳು ಸಂಚರಿಸುತ್ತಿರುವಾಗಲೇ ಗುಡ್ಡ ಕುಸಿಯುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಅಲ್ಲಿಂದ ಓಡುತ್ತಿರುವುದನ್ನ ದೃಶ್ಯದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಘಟಿಸಿದ್ದು ಎಂದು ಸೋಶಿಯಲ್​ ಮೀಡಿಯಾದಲ್ಲಿ ಸಂದೇಶವನ್ನು ಹರಿಬಿಡಲಾಗಿತ್ತು. 

ಪೊಲೀಸ್ ಇಲಾಖೆ ಹೇಳಿದ್ದೇನು?

ಈ ಬಗ್ಗೆ ಚಿಕ್ಕಮಗಳೂರು ಪೊಲೀಸರು ತಮ್ಮ ಸೋಶಿಯಲ್ ಮೀಡಿಯಾ ಫೇಸ್​ ಬುಕ್ ಅಕೌಂಟ್​ನಲ್ಲಿಯೇ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪ್ರಕಟಣೆಯಲ್ಲಿ ಪೊಲೀಸ್ ಇಲಾಖೆ , ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವೀಡಿಯೋ ಅರುಣಾಚಲಪ್ರದೇಶ ರಾಜ್ಯದ ರೋಯಿಂಗ್-ಹುನ್ಲಿ ರಸ್ತೆಯಲ್ಲಿ 2 ವರ್ಷದ ಹಿಂದೆ ನಡೆದ ಘಟನೆಯಾಗಿದೆ. 

ಪ್ರಕಟಣೆಯಲ್ಲಿ ಏನಿದೆ

ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಚಾರ್ಮಾಡಿ ಘಾಟ್‌ ನಲ್ಲಿ ಸಂಭವಿಸಿರುವ ಭೂಕುಸಿತವೆಂದು ನಕಲಿ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇಂತಹ ಭೂಕುಸಿತ ಚಾರ್ಮಾಡಿ ಘಾಟ್ ನಲ್ಲಿ ಸಂಭವಿಸಿರುವುದಿಲ್ಲ. ಚಾರ್ಮಾಡಿ ಘಾಟ್ ನಲ್ಲಿ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಇಂತಹ ನಕಲಿ ವೀಡಿಯೋ ಅನ್ನು ಸಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡದಂತೆ ಕೋರಿದೆ. ನೈಜ ಘಟನೆಯ YouTube ಲಿಂಕ್ ಈ ಕೆಳಗಿನಂತಿದೆ ಎಂದು ತಿಳಿಸಿದೆ. 

ನೀವು ಎಚ್ಚರ ವಹಿಸಿ

ಸೋಶಿಯಲ್ ಮೀಡಿಯಾದಲ್ಲಿ ಕಂಡಿದೆಲ್ಲಾ ಸತ್ಯವಲ್ಲ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ. ಹಾಗಾಗಿ ನಿಮ್ಮ ಮೊಬೈಲ್​ಗೂ ಚಾರ್ಮಾಡಿ ಘಾಟಿ ಯದ್ದು ಎಂದು ಈ ವಿಡಿಯೋ ಯಾರಾದರೂ ಕಳಿಸಿದರೇ, ಅವರಿಗೆ ಇದು ಅಲ್ಲಿಯದ್ದಲ್ಲ ಎಂದು ತಿಳಿ ಹೇಳಿ.. 


ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬೀಸಲಿದೆ ಬಾರೀ ಗಾಳಿ! ಹವಾಮಾನ ಸೂಚನೆ ವಿವರ ಇಲ್ಲಿದೆ

ಶಿವಮೊಗ್ಗ  ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆ ಬಿಡುವು ಕೊಟ್ಟಿದೆ. ಅಬ್ಬರದ ವರ್ಷಧಾರೆಯ ಸೂಚನೆಯನ್ನ ಕೊಟ್ಟಿದ್ದ ವರುಣ, ಕೃಷಿಚಟುವಟಿಕೆಗೆ ಅನುವು ಮಾಡಿಕೊಟ್ಟಹಾಗಿದೆ. ಈ ನಡುವೆ ಮಳೆ ಬರದ ಆತಂಕವೂ ಮುಂದುವರಿದಿದೆ. ಏಕೆಂದರೆ ಮಲೆನಾಡಿನ ಡ್ಯಾಂಗಳಲ್ಲಿ ಕಳೆದವರ್ಷಕ್ಕಿಂತ ಬಹಳ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿದೆ. 

ಇನ್ನೂ ಐಎಂಡಿ (Imd bangalore) ವರದಿ ಪ್ರಕಾರ, ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ  30- 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಜಿಲ್ಲಾವಾರು ವರದಿಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ಶಿವಮೊಗ್ಗದ ಶೇಕಡಾ 75 ರಷ್ಟು ಪ್ರದೇಶಗಳಲ್ಲಿ ಗರಿಷ್ಟ  64 ಮಿಲಿಮೀಟರ್​ವರೆಗೂ ಮಳೆಯಾಗುವ ಸಾಧ್ಯತೆ ಇದೆಯಂತೆ. ಇನ್ನೊಂದೆಡೆ ಎಚ್ಚರಿಕೆಯ ವಿಭಾಗದ ರಾಜ್ಯದ ನಕ್ಷೆಯಲ್ಲಿ ಶಿವಮೊಗ್ಗಕ್ಕೆ ಹಳದಿ ಬಣ್ಣವನ್ನು ನೀಡಲಾಗಿದ್ದು, ಬಾರೀ ಮಳೆ ಹಾಗೂ ಗಾಳಿ ಸೂಚನೆ ನೀಡಲಾಗಿದೆ. 

ಇನ್ನೂ ವಾತಾವರಣ ಗಮನಿಸಿದರೆ ನಿನ್ನೆ ಮತ್ತು ಇವತ್ತು ಮಳೆ ತಗ್ಗಿದೆ,  ಹನಿಕುತ್ತಿದ್ದ ಮೋಡಗಳು ಕಳೆದು ಬಿಸಿಲು ಹಲವೆಡೆ ಬೆಳಗುತ್ತಿದೆ. ಕಳೆದ  24 ಗಂಟೆಯಲ್ಲಿ ಮಾಣಿ  59 ಮಿ.ಮೀ  , ಯಡೂರಿನಲ್ಲಿ 67 ಮಿ.ಮೀ , ಹುಲಿಕಲ್‌ನಲ್ಲಿ 73 ಮಿ.ಮೀ , ಮಾಸ್ತಿಕಟ್ಟೆ 50 ಮಿ.ಮೀ , ಚಕ್ರ 49 ಮಿ.ಮೀ  , ಸಾವೆಹಕ್ಲು 64 ಮಿ.ಮೀ ಮಳೆ ಸುರಿದಿದೆ.

 

Share This Article