ಸಾರ್ವಜನಿಕರಿಗೆ ಸೂಚನೆ ! ಮೇ 24 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ

Malenadu Today

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಶಿವಮೊಗ್ಗ/  ನಗರ ಉಪವಿಭಾಗ-2ರ ವ್ಯಾಪ್ತಿಯಲ್ಲಿನ ಘಟಕ-6ರ ಶಾಖೆಯಲ್ಲಿ  ಎಲ್.ಟಿ.ರೀ-ಕಂಡಕ್ಟರಿಂಗ್  ಕಾಮಗಾರಿಯನ್ನು ಮೇಸ್ಕಾಂ ಹಮ್ಮಿಕೊಂಡಿದ್ದು, ಇದೇ ಮೇ-24 ರ ಬೆಳಿಗ್ಗೆ 10-00 ರಿಂದ ಸಂಜೆ 6-00 ಗಂಟೆಯವರೆಗೆ  ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ  ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ?

ಹಳೇಮಂಡ್ಲಿ, ಗಜಾನನ ಗ್ಯಾರೇಜ್, ಎಫ್-18 ಹೊಸಳ್ಳಿ, ಎಫ್-05 ಗಾಜನೂರು ಗ್ರಾಮಾಂತರ ಪ್ರದೇಶ, ಹೊಸಳ್ಳಿ, ಇಂದಿರಾನಗರ, ಲಕ್ಷ್ಮೀಪುರ, ಹೊಸಕೊಪ್ಪ, ವೀರಾಪುರ, ಎಫ್-08 ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಬೈರಾಪುರ, ಬಸವಪುರಾ, ಐಹೊಳೆ, ಭಾರತಿನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಮಲಗಿದ್ದ ವೇಳೆ ಕಚ್ಚಿದ ಹಾವು! ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಯುವತಿ ಸಾವು!

ಸೊರಬ/ ಮಲಗಿದ್ದಾಗ ಹಾವು ಕಚ್ಚಿದ್ದರಿಂದ ಬಳಿಕ ಅನಾರೋಗ್ಯಕ್ಕೀಡಾಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಸೊರಬ ತಾಲ್ಲೂಕಿನ ಆನವಟ್ಟಿ ಹೋಬಳಿಯಲ್ಲಿ ಸಂಭವಿಸಿದೆ

ನಡೆದಿದ್ದೇನು?

ಇಲ್ಲಿನ ನಿವಾಸಿ ಯುವತಿ, ಕಳೆದ ನಾಲ್ಕು ದಿನದ ಹಿಂದೆ, ಮಲಗಿದ್ಧಾಗ ಹಾವು ಕಚ್ಚಿದೆ ಎಂದು ಪೋಷಕರಿಗೆ ತಿಳಿಸಿದ್ಧಾರೆ. ಆದರೆ ಪೋಷಕರಿಗೆ ಹಾವು ಕಾಣಿಸಿದ ಹಿನ್ನೆಲೆಯಲ್ಲಿ ತಪ್ಪಾಗಿ ಭ್ರಮಿಸಿರಬೇಕು ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ ಯುವತಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ದಿನ ಕಳೆದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ಧಾರೆ. ಮೊದಲು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ ಪೋಷಕರು ನಂತರ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ಧಾರೆ., ಅಲ್ಲಿಂದ  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಯುವತಿಯನ್ನ ಅಡ್ಮಿಟ್ ಮಾಡಿದ್ದಾರೆ. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾರೆ.  

 

 

 

Share This Article