KARNATAKA NEWS/ ONLINE / Malenadu today/ May 22, 2023 SHIVAMOGGA NEWS
CEN Police station / ಆನ್ಲೈನ್ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಕೇಸ್ ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಗಿದೆ. ಅಚ್ಚರಿ ಅಂದರೆ, ಆಧಾರ್ ಕಾರ್ಡ್ಅಪ್ಡೇಟ್ ಮಾಡಿಕೊಡುವುದಾಗಿ ಹೇಳಿ , ಒಂದು ಲಕ್ಷದ 85 ಸಾವಿರ ರೂಪಾಯಿಗಳನ್ನು ಲಪಟಾಯಿಸಿದ ಬಗ್ಗೆ ವರದಿಯಾಗಿದೆ.
ನಡೆದಿದ್ದೇನು?
ಸೊರಬ ತಾಲ್ಲೂಕಿನ ಶಿಂಡ್ಲಿ ಹಳ್ಳಿಯ 71 ವರ್ಷದ ಹಿರಿಯೊಬ್ಬರ ಮೊಬೈಲ್ಗೆ ಕಳೇದ 18 ರಂದು ಕಸ್ಟಮರ್ ಕೇರ್ ಹೆಸರಿನ ನಂಬರ್ನಿಂದ ಮೆಸೆಜ್ ಬಂದಿದೆ. ಮೆಸೇಜ್ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್, ಆಧಾರ ಕಾರ್ಡ್ ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ 24 ಗಂಟೆಯೊಳಗೆ ನಿಮ್ಮ ಅಕೌಂಟ್ ಬ್ಲಾಕ್ ಆಗುತ್ತದೆ ಹಾಗೂ ಎಟಿಎಂ ಕಾರ್ಡ್ ಅವಧಿ ಮುಕ್ತಾಯವಾಗುತ್ತದೆ ಎಂದುಬರೆಯಲಾಗಿತ್ತು. ಅಲ್ಲದೆ ಇದಕ್ಕಾಗಿ ಇಂತಹದ್ದೊಂದು ನಂಬರ್ಗೆ ಕರೆಮಾಡಿ ಎಂದು ತಿಳಿಸಲಾಗಿತ್ತು.
ಅದರಂತೆ ಹಿರಿಯರು ಮೆಸೇಜ್ನಲ್ಲಿದ್ದ ನಂಬರ್ಗೆ ಕರೆಮಾಡಿದ್ದಾರೆ. ಆಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿ ಹಿರಿಯರ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ ಎಲ್ಲವನ್ನು ಪಡೆದುಕೊಂಡು ಒಟಿಪಿ ಕೇಳಿದ್ದಾನೆ. ಅದನ್ನ ಸಹ ಹಿರಿಯರು ನೀಡಿದ್ದಾರೆ. ಒಟಿಪಿ ಕೊಟ್ಟ ತಕ್ಷಣವೇ ಹಿರಿಯರ ಖಾತೆಯಿಂದ 1,85,000/-ರೂ ಹಣ ಡ್ರಾ ಆಗಿದೆ. ಇದರಿಂದ ಆತಂಕಗೊಂಡು ಸಿಇಎನ್ ಪೊಲೀಸ್ ಸ್ಠೇಷನ್ಗೆ ಬಂದು ದೂರು ನೀಡಿದ್ಧಾರೆ.
ಮಳೆಗಾಳಿಗೆ ರಸ್ತೆಗುರುಳಿದ ಮರ! ಕೊಂಬೆ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವು!
ಮೂಡಿಗೆರೆ/ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಿನ್ನೆ ಜೋರು ಮಳೆಯಾಗುತ್ತಿರುವ ಹೊತ್ತಿನಲ್ಲಿ ಮರವೊಂದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಮೂಡಿಗೆರೆ ಬಳಿ ಚಿಕ್ಕಳ್ಳ– ಹಳ್ಳದಗಂಡಿ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಗಾಳಿಗೆ ಮರ ರಸ್ತೆ ಮೇಲೆಯೇ ಉರುಳಿದೆ. ಅಲ್ಲದೆ, ಅಲ್ಲಿಯೇ ಸಾಗುತ್ತಿದ್ದ ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದು, ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ ಸಂಜೆ 5.30ರ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನ ವೇಣುಗೋಪಾಲ್ ಎಂದು ಗುರುತಿಸಲಾಗಿದೆ. ಇವರು ಮೂಡಿಗೆರೆಯಿಂದ ಹಳ್ಳದಗಂಡಿಗೆ ಹೋಗುತ್ತಿದ್ದರು. ಘಟನೆ ಸಂಬಂಧ ಮೂಡಿಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.
