ವಿ.ಐ.ಎಸ್.ಎಲ್ ಉಳಿವಿಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರ ನೇತ್ರತ್ವದಲ್ಲಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ರು
ಈ ಕೈಗಾರಿಕೆಯು ಏಷ್ಯಾ ಖಂಡದ ಪ್ರಪ್ರಥಮ ಐರನ್ & ಸ್ಟೀಲ್ ಕಂಪನಿಯಾಗಿದ್ದು, ಭಾರತದ ಸೈನ್ಯದ ಗುಂಡು ತಯಾರಿಕೆಗೆ ಉತ್ಕೃಷ್ಠ ಗುಣಮಟ್ಟದ ಕಬ್ಬಿಣವನ್ನು ಸರಬರಾಜು ಮಾಡುತ್ತಿದ್ದ ಹೆಗ್ಗಳಿಕೆಯ ಕೈಗಾರಿಕೆಯಾಗಿರುತ್ತದೆ. ಸಾವಿರಾರು ಜನ ಕಾರ್ಮಿಕರಿಗೆ ಅನ್ನವನ್ನು ನೀಡಿದ ಕೈಗಾರಿಕೆಯಾಗಿದೆ ಅಲ್ಲದೆ ಕರ್ನಾಟಕ ರಾಜ್ಯ ಹಾಗೂ ದೇಶದ ಹೆಮ್ಮೆಯ ಕೈಗಾರಿಕೆಯಾಗಿರುತ್ತದೆ.
ಇತ್ತೀಚೆಗೆ ಸೈಲ್ ( SAIL ) ಅಥಾರಿಟಿಯು ಮೇಲ್ಕಂಡ ಕೈಗಾರಿಕೆಯ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ತೀರ್ಮಾನಿಸಿರುವ ಕಾರಣ ಕರ್ನಾಟಕ ರಾಜ್ಯದ ಸಾರ್ವಜನಿಕ ವಲಯದ ಹೆಮ್ಮೆಯ ಈ ಕೈಗಾರಿಕೆ ಇತಿಹಾಸದ ಪುಟದಲ್ಲಿ ಸೇರಿಕೊಂಡು ನೆನಪು ಮಾತ್ರವಾಗಲಿದೆ. ಆದ ಕಾರಣ ಮಲೆನಾಡಿನ ಹೆಮ್ಮೆಯ ಉಕ್ಕು ಹಾಗೂ ಕಬ್ಬಿಣದ ಈ ಕೈಗಾರಿಕೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೆ ಆತ್ಮನಿರ್ಭರ ಹಾಗೂ ಮೇಕಿನ್ ಇನ್ ಇಂಡಿಯಾ ಯೋಜನೆಯ ಪ್ರತಿಪಾದಕರಾದ ಕೇಂದ್ರ ಸರ್ಕಾರ, ಭಾರತ ದೇಶದ ಪುರಾತನವಾದ ಈ ಹೆಮ್ಮೆಯ ಯೋಜನೆಗೆ ಅಗತ್ಯ ಆರ್ಥಿಕ ನೆರವನ್ನು ಬಿಡುಗಡೆಗೊಳಿಸಿ ಮೇಲ್ಕಂಡ ಕೈಗಾರಿಕೆಯ ಪುನರ್ಶ್ಚೇತನಕ್ಕೆ ಅನುವು ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಬಿ.ಎ.ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೇಶ್, ಆರ್.ಸಿ.ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೆಹೆಕ್ ಷರೀಫ್, ಮುಖಂಡರಾದ ಕೆ.ರಂಗನಾಥ್, ಜಗದೀಶ್ ಇದ್ದರು
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
.
