ಶಿವಮೊಗ್ಗ ತಾಲ್ಲೂಕಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ, ಕೈದಿಯೊಬ್ಬನ ಮೇಲೆ ಇತರೇ ಆರು ಮಂದಿ ಕೈದಿಗಳು ಹಲ್ಲೆ ನಡೆಸಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹೊಡೆದಾಟ ನಡೆದಿರುವ ಘಟನೆ ತಡವಾಗಿ ಬೆಳಿಕಿಗೆ ಬಂದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಅದೀಕ್ಷಕಿ ಡಾ.ಆರ್.ಅನಿತಾ ದೂರು ನೀಡಿದ್ದಾರೆ.
ನಡೆದಿದ್ದೇನು?
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿನ ನಾಗರಾಜ್ ಎಂಬ ವಿಚಾರಣಾಧೀನ ಕೈದಿ ಮೇಲೆ, ಶಿವಮೊಗ್ಗ ನಗರದ ಬಡಾವಣೆಯೊಂದರಲ್ಲಿ ದುಷ್ಕೃತ್ಯವೆಸಗಿ ಜೈಲು ಸೇರಿದ್ದ ಸ್ಯಾಡೋ ಸಚಿನ್, ದರ್ಶನ್, ಪರಶು, ಅನಿಲ್ , ವಿಶ್ವ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದ್ದು, ಎಫ್ಐಆರ್ ಆಗಿದೆ. ![]()
ಜೈಲಿನಲ್ಲಿದ್ದ ವಿಡಿಯೋ ಕಾನ್ಫರೆನ್ಸ್ ಕೊಠಡಿ ಮೂಲಕ ಕೋರ್ಟ್ ಎದುರು ಹಾಜರಾಗಲು ತೆರಳುತ್ತಿದ್ದ ನಾಗರಾಜ್ ಮೇಲೆ ಆರು ಮಂದಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಅಧಿಕಾರಿ ಜಗಳ ಬಿಡಿಸಿದ್ದಾರೆ. ಅಲ್ಲದೆ ಗಾಯಾಳುಗೆ ಚಿಕಿತ್ಸೆ ನೀಡಿದ್ದಾರೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
