thirthahalli election 2023 : ಇಡಿ ವಿಚಾರಕ್ಕೆ ವಿರೋಧವಾದರೇ ಮತದಾರ! ಸ್ಯಾಂಟ್ರೋ ರವಿ ಪ್ರಕರಣ ಮುಳುವಾಗುತ್ತಾ? ಏನಾಗುತ್ತಿದೆ ತೀರ್ಥಹಳ್ಳಿ ಕ್ಷೇತ್ರದಲ್ಲಿ! Today report

Malenadu Today

ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರವೆಂದು ದೇಶದಲ್ಲಿಯೇ ಬಿಂಬಿತವಾಗಿರೋ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಸುಲಭದ ಮಾತಲ್ಲ. ಈ ಕ್ಷೇತ್ರದಲ್ಲಿ ಧಿಡೀರ್ ನಾಯಕರಾಗಿ ಹೊರಹೊಮ್ಮಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದ ಜನತೆ ರಾಜಕೀಯ ನಾಯಕನನ್ನು ತೂಗಿಬಾಗಿ  ಅಳೆದು ಗೆಲ್ಲಿಸುತ್ತಾರೆ. ಹೀಗಾಗಿಯೇ ಇಲ್ಲಿ ರಾಜಕೀಯ ನಾಯಕರು ತಮ್ಮ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯ ಆರಗ ಜ್ಞಾನೇಂದ್ರರಾಗಲಿ ಅಥವಾ ಕಾಂಗ್ರೇಸ್ ನ ಕ್ಮಿಮನೆ ರತ್ನಾಕರ್ ( (kimmane rathnakar shivamogga)​ ) ಆಗಲಿ ಹೊರತಾಗಿಲ್ಲ.ಕ್ಷೇತ್ರದ ಜನತೆ ಈ ಇಬ್ಬರನ್ನು ಬೇಡವಾದ ಸಂದರ್ಭದಲ್ಲಿ ಸೋಲಿಸಿದ್ದಾರೆ. ಬೇಕಾದ ಸಂದರ್ಭದಲ್ಲಿ ಗೆಲ್ಲಿಸಿದ್ದಾರೆ. ಸರಣಿ ಸೋಲು ಇಲ್ಲಿ ಮುಂದಿನ ಚುನಾವಣೆಯಲ್ಲಿ ನಗೆಬೀರುತ್ತೆ. ರಾಜಕೀಯ ಎದುರಾಳಿಗಳಿಗೆ ಯಾವುದಾದ್ರೂ ಒಂದು ವಿಷಯ ಸಿಕ್ಕರೂ ಅದನ್ನು ಚುನಾವಣೆಯ ಅಸ್ತ್ರವಾಗಿ ಬಳಸುತ್ತಾರೆ. 

horihabba :ಶಿವಮೊಗ್ಗದಲ್ಲಿ ಹೋರಿ ಹಬ್ಬ ದುರಂತ: ಇಬ್ಬರು ದುರ್ಮರಣ

ನಂದಿತಾ ಸಾವಿನ ಪ್ರಕರಣ ಇದಕ್ಕೆ ಪ್ರಮುಖ ಸಾಕ್ಷಿ. ಈ ವಿಷಯ ಆಣೆ ಪ್ರಮಾಣದವರೆಗೆ ಕೊಂಡೊಯ್ದಿತ್ತು. ಜಾತ್ಯಾತೀತ ನಿಲುವನ್ನು ಹೊಂದಿರುವ ಕಿಮ್ಮನೆ ಪ್ರತ್ಯಸ್ತ್ರವಾಗಿ ಅದೇ ಅಣೆ ಪ್ರಮಾಣಕ್ಕೆ ಆರಗ ಜ್ಞಾನೇಂದ್ರರಿಗೆ ಠಕ್ಕರ್ ನೀಡಿದ್ದರು. ನಂದಿತಾ ಪ್ರಕರಣ ಹಿಂದುತ್ವದ ವೇವ್ ಕ್ರಿಯೇಟ್ ಮಾಡಿದ್ದರಿಂದಲೇ..ನಂತರದ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಸೋಲು ಅನುಭವಿಸಬೇಕಾಯಿತು. ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ವಾತಾವರಣ ಇನ್ನಷ್ಟು ಬದಲಾಗಿದ್ದು ಗುಟ್ಟಾಗಿ ಉಳಿಯಲಿಲ್ಲ. ಕಾಂಗ್ರೇಸ್ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆಂದು ಕಿಮ್ಮನೆ ರತ್ನಾಕರ್ ಬಹಿರಂಗವಾಗಿ ಆರೋಪಿಸಿದ್ರು. ಒಂದು ಬೇಲಿ ಗಲಾಟೆಗೂ ಹೋಮ್ ಮಿನಿಸ್ಟರ್ ಕಛೇರಿ ಎಂಟ್ರಿ ತೆಗೆದುಕೊಳ್ತಿರುವ ಬಗ್ಗೆ ವ್ಯಾಪಕವಾಗಿ ಟೀಕಿಸಿದ್ರು. ಕಿಮ್ಮನೆ ಆರೋಪಗಳನ್ನೆಲ್ಲಾ ಅರಗಿಸಿಕೊಂಡು ಬಂದ ಆರಗ ಜ್ಞಾನೇಂದ್ರಗೆ, ((araga jnanendra) ಎಲ್ಲಾ ದಿನಗಳು ಭಾನುವಾರ ಆಗಿರೋದಿಲ್ಲ ಎಂಬುದು ಅರಿವಿಗೆ ಬಂದಿದೆ.

ಇದನ್ನ ಸಹ ಓದಿ : Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’ | ಹೊಸಹಳ್ಳಿ ಸುಧಾಕರ್​ ಬಿಜೆಪಿಗೆ ಜಂಪ್​ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ

ಮೊನ್ನೆ ತೀರ್ಥಹಳ್ಳಿ ಕಾಂಗ್ರೇಸ್ ಕಛೇರಿಗೆ ಇಡಿ ಅಧಿಕಾರಿಗಳು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಕ್ಕೆ ಮಾದ್ಯಮಗಳು ಮನಸೋಇಚ್ಚೆ ವರದಿ ಪ್ರಕಟಿಸಿದ್ದವು. ಮಂಗಳೂರಿನ ಕುಕ್ಕರ್ ಬಾಂಬ್ ಸ್ಟೋಟದ ವಿಡಿಯೋ ತೋರಿಸುತ್ತಾ ಇತ್ತಾ ಕಿಮ್ಮನೆ ರತ್ನಾಕರ್ ಭಾವಚಿತ್ರವನ್ನು ಪ್ರಕಟಿಸಿ ಏನೋ ಒಂದು ರೀತಿಯಲ್ಲಿ ಟೆರರಿಸ್ಟ್ ಲಿಂಕ್ ಅನ್ನೋ ರೀತಿಯಲ್ಲಿ ವರದಿ ಬಿತ್ತರಗೊಂಡಿದ್ವು. ಇದು ಕಿಮ್ಮನೆ ರತ್ನಾಕರ್ ಗಿಂತಲೂ ಕ್ಷೇತ್ರದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಿಮ್ಮನೆ ರತ್ನಾಕರ್ ಏನು ಎಂಬುದನ್ನು ಮಾಧ್ಯಮಗಳಿಗಿಂತಲೂ, ಕ್ಷೇತ್ರದ ಜನತೆ ಹೆಚ್ಚು ಅರ್ಥ ಮಾಡಿಕೊಂಡಿದ್ದಾರೆ.

ಪ್ರತೀ ಗ್ರಾಮಗಳು ಇಂದು ರಸ್ತೆ ನೀರು ಚರಂಡಿಯನ್ನು ಕಂಡಿರುವುದಕ್ಕೆ ಕಿಮ್ಮನೆ ರತ್ನಾಕರ್ ಕೊಡುಗೆ ಅಪಾರವಾಗಿದೆ ಎಂಬುದನ್ನು ಮತದಾರರು ಅರಿತಿದ್ದಾರೆ. ಹೀಗಾಗಿ ಮೊನ್ನೆ ಇಡಿ ವರದಿಯು ಸುದ್ದಿ ಪ್ರಸಾರವಾದ ಬಗೆ, ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರರ ವಿರುದ್ಧವೇ ಚರ್ಚೆಯಾಗುವಂತೆ ಮಾಡಿದೆ. ಇದರಲ್ಲಿ ಆರಗ ಜ್ಞಾನೇಂದ್ರರ ಪಾತ್ರ ಏನು ಎಂಬುದಿಲ್ಲ ಎಂಬುದು ವಾಸ್ತವದ ಕಟುಸತ್ಯವಾದ್ರೂ, ಸುದ್ದಿ ಪ್ರಸಾರವಾದ ರೀತಿ ನೀತಿಯನ್ನು ಗಮನಿಸಿದ ಕ್ಷೇತ್ರದ ಜನರು ಸೇಡಿನ ರಾಜಕಾರಣಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ. 

ಕ್ಷೇತ್ರದಲ್ಲಿ ರಾಜಕೀಯ ಎದುರಾಳಿಗಳಿಗೆ ಠಕ್ಕರ್ ಕೊಡಲು ಈ ರೀತಿಯ ದ್ಷೇಷ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಇದನ್ನೇ ಕಿಮ್ಮನೆ ರತ್ನಾಕರ್ ವೆಪನ್ ಆಗಿ ಪರಿವರ್ತಿಸಿಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಥಳಕು ಹಾಕಿಕೊಂಡ ಸ್ಯಾಂಟ್ರೋ ರವಿ  ಕೇಸ್ ಆರಗ ಜ್ಞಾನೇಂದ್ರರಿಗೆ ಮಗ್ಗುಲ ಮುಳ್ಳಾಗಿದೆ.  ಬಹಿರಂಗವಾಗಿ ಕಿಮ್ಮನೆ ರತ್ನಾಕರ್ ವಿರುದ್ಧ ಹರಿಹಾಯ್ದರೂ, ಆಂತರಿಕವಾಗಿ ಆರಗ ಜ್ಞಾನೇಂದ್ರರಿಗೆ ಈ ಬಗ್ಗೆ ಅಳುಕು ಇದೆ. ಸ್ಯಾಂಟ್ರೋ ರವಿ ಬಂಧನಕ್ಕು ಮೊದಲು ಗುಜರಾತ್​ಗೆ ಹೋಮ್ ಮಿನಿಸ್ಟರ್ ಹೋಗಿದ್ದರು. ಈ ಸನ್ನಿವೇಶವನ್ನು ಕಾಕತಾಳೀಯ ಎಂಬಂತೆ ಸ್ಯಾಂಟ್ರೋ ರವಿಗೆ ಕಿಮ್ಮನೆ ಥಳುಕು ಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಅದೇ ರೀತಿ ಸ್ಯಾಂಟ್ರೋ ರವಿ ಜೈಲು ಸೇರಿದಾಗ್ಲೂ, ಜೈಲು ಅಧಿಕ್ಷಕ ಕುಮಾರ್ ಜಿಗಣಿಯನ್ನು ಓಓಡಿ ಮೇಲೆ ಆತ ಇರುವ ಜೈಲಿಗೆ ಕರೆಸಿಕೊಂಡಿದ್ದು, ಕೂಡ ವಿವಾದಕ್ಕೆ ಕಾರಣವಾಗಿತ್ತು. ಹೀಗೆ ಹತ್ತು ಹಲವು ವಿಚಾರಗಳು ಕಿಮ್ಮನೆ ರತ್ನಾಕರ್ ಗೆ ವರದಾನವಾಗುತ್ತಿದ್ದು, ತೀರ್ಥಹಳ್ಳಿ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜನರ ಭಾವನೆಗಳು ಬದಲಾಗುತ್ತಿವೆ. ಚುನಾವಣೆ ಸನಿಹವಾಗುತ್ತಿರುವ ಸಂದರ್ಭದಲ್ಲಿ ಜಾಗೃತಗೊಳ್ಳಬೇಕಾದ ಮನಸ್ಸುಗಳು ಈಗಿನಿಂದಲೇ ಅಲರ್ಟ್ ಆಗುತ್ತಿರುವುದು ಇದು ಯಾರಿಗೆ ವರ ಯಾರಿಗೆ ಶಾಪ ಎನ್ನುವುದು ಗುಟ್ಟಾಗಿಯೇ ಉಳಿದಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article