BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

Malenadu Today

ಶಿವಮೊಗ್ಗ ನಗರದ ಕೆಎಸ್​ಆರ್​ಟಿಸಿ (KSRTC)  ಬಸ್​ಸ್ಡ್ಯಾಂಡ್ ಪಕ್ಕದಲ್ಲಿ ಇರುವ ಪಾರ್ಕಿಂಗ್​ ಲಾಟ್ ಬಗ್ಗೆ ನಿಮಗೆಲ್ಲರಿಗೂ ಗೊತ್ತೆ ಇರುತ್ತದೆ. ಈ ಪಾರ್ಕಿಂಗ್​ ಲಾಟ್​ನಲ್ಲಿ ಒಂದು ಬಾವಿಯಿದ್ದು, ಆ ಬಾವಿಯಲ್ಲಿ ಇವತ್ತು ಮೃತದೇಹವೊಂದು ಪತ್ತೆಯಾಗಿದೆ.

ಇದನ್ನು ಸಹ ಓದಿ : ಕೊಡಗಿನ ಹೋಮ್​ಸ್ಟೇ ನಲ್ಲಿ ವಾಸ್ತವ್ಯ ಹೂಡಿದ್ದ ಶಂಕಿತ ಶಾರೀಖ್​

ಇನ್ನೂ ಪತ್ತೆಯಾದ ಮೃತದೇಹದ ಗುರುತು ಸಹ ಪತ್ತೆಯಾಗಿದ್ದು, ಅವರನ್ನು ಮಾರನವಮಿ ಬೈಲು ನಿವಾಸಿ ದಿಬ್ಬಯ್ಯ  ಎಂದು ತಿಳಿದುಬಂದಿದೆ. ಇವರು ಪೌರಕಾರ್ಮಿಕರಾಗಿದ್ದು, ಕಳೆದ ಐದು ದಿನಗಳಿಂದ ಇವತ್ತು ಮನೆಗೆ ಹೋಗಿರಲಿಲ್ಲವಂತೆ. ಇವತ್ತು ಇವರ ಶವ ಪತ್ತೆಯಾಗಿದೆ. 

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಬಸ್​ಸ್ಟ್ಯಾಂಡ್​ ಪಕ್ಕದ ಪಾರ್ಕಿಂಗ್​ಗೆ ಬಂದ ಕಾರಿನವರೊಬ್ಬರು ತಮ್ಮ ಕಾರನ್ನು ಬಾವಿ ಬಳಿಯಲ್ಲಿ ನಿಲ್ಲಿಸಿದ್ದಾರೆ. ಅಲ್ಲಿಯೇ ಸಹಜ ಕುತೂಹಲದಿಂದ ಬಾವಿಯಲ್ಲಿ ಇಣುಕಿ ನೋಡಿದಾಗ ಶವ ತೇಲುತ್ತಿರುವುದು ಗೊತ್ತಾಗಿದೆ.

ತಕ್ಷಣ ವಿಷಯ ತಿಳಿಸಿದ್ಧಾರೆ. ಇನ್ನೂ ವಿಚಾರ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವು ಹೇಗಾಗಿರಬಹುದು ಎಂಬ ತನಿಖೆ ಆರಂಭಿಸಿದ್ಧಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article