ಉರುಳಿಗೆ ಬಿದ್ದ ಆರು ವರ್ಷದ ಗಂಡು ಕರಡಿ ರಕ್ಷಣೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

prathapa thirthahalli
Prathapa thirthahalli - content producer

Bear rescued from snare : ಶಿವಮೊಗ್ಗ: ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ ವಲಯದಲ್ಲಿ ಉರುಳಿಗೆ ಸಿಲುಕಿದ್ದ ಆರು ವರ್ಷದ ಗಂಡು ಕರಡಿಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶಿವಮೊಗ್ಗ ಮೃಗಾಲಯದ ವೈದ್ಯರ ತಂಡ ಯಶಸ್ವಿಯಾಗಿ ರಕ್ಷಿಸಿ, ಅದನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ.

ಭದ್ರಾವತಿ ವಿಭಾಗದ ಶಾಂತಿಸಾಗರ ರೇಂಜ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕರಡಿ ಉರುಳಿಗೆ ಸಿಲುಕಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು, ಮೃಗಾಲಯದ ವೈದ್ಯಕೀಯ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡರು. ಶಿವಮೊಗ್ಗ ಮೃಗಾಲಯದ ವೈದ್ಯರಾದ ಡಾ. ಮುರುಳಿ ಮನೋಹರ್ ಅವರ ನೇತೃತ್ವದ ತಂಡವು ಸ್ಥಳಕ್ಕೆ ಧಾವಿಸಿ, ಕರಡಿಗೆ ಅರಿವಳಿಕೆ ನೀಡಿ ಉರುಳಿನಿಂದ ಬಿಡಿಸಿದರು. ನಂತರ ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಮರಳಿ ಬಿಡಲಾಯಿತು.

- Advertisement -

Bear rescued from snare

Bhadravathi Forest Division

 

Share This Article