Police assault ಗಲಾಟೆ ಬಿಡಿಸಲು ಹೋದ ಪಿಎಸ್ಐ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಸುರಗಿತೋಪು ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುರಗಿತೋಪುನಲ್ಲಿ ಗಣಪತಿ ವಿಸರ್ಜನೆ ಮಾಡಿ ಬರುವ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಭದ್ರಾವತಿ ಪೇಪರ್ ಟೌನ್ ಎಎಸ್ಐ ಕೃಷ್ಣಮೂರ್ತಿ ಗಲಾಟೆಯನ್ನು ನಿಲ್ಲಿಸಲು ತೆರಳಿದ್ದಾರೆ. ಆಗ ಪೊಲೀಸ್ ಸಿಬ್ಬಂದಿ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ ಎನ್ನಲಾಗಿದೆ. ಈ ಹಿನ್ನೆಲೆ ಕರ್ತವ್ಯಕ್ಕೆ ಅಡ್ಡಿ ಕಾಯ್ದೆಯಡಿ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ.
- Advertisement -

ಎಎಸ್ಐ ಕೃಷ್ಣಮೂರ್ತಿ

