Shoes and Slippers theft ಶಿವಮೊಗ್ಗ: ನಗರದ ಅಲ್ ಹರೀಮ್ ಲೇಔಟ್‌ನಲ್ಲಿರುವ ಮನೆಯೊಂದರಲ್ಲಿ ಭಾರಿ ಮೊತ್ತದ ಶೂ ಮತ್ತು ಚಪ್ಪಲಿಗಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸ್ಲಿಪ್ಪರ್ ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ಒಟ್ಟು 1.29 ಲಕ್ಷ ಮೌಲ್ಯದ ಶೂ ಮತ್ತು ಚಪ್ಪಲಿಗಳನ್ನು ಕಳ್ಳರು ದೋಚಿದ್ದು, ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ಪ್ರಕಾರ, ಮನೆಯ ನಿವಾಸಿಗಳು ಸ್ಲಿಪ್ಪರ್ ಸ್ಟ್ಯಾಂಡ್‌ನಲ್ಲಿ ವಿವಿಧ ಬ್ರಾಂಡ್‌ಗಳಿಗೆ ಸೇರಿದ ಸುಮಾರು 25 ಜೊತೆ ಶೂ ಮತ್ತು ಚಪ್ಪಲಿಗಳನ್ನು ಇರಿಸಿದ್ದರು. ಕಳ್ಳರು ಇವುಗಳನ್ನೆಲ್ಲ ಕಳ್ಳತನ ಮಾಡಿದ್ದಾರೆ. ಈ ಕಳುವಾದ ಶೂ ಮತ್ತು ಚಪ್ಪಲಿಗಳ ಅಂದಾಜು ಮೌಲ್ಯ ₹1.29 ಲಕ್ಷ ಎಂದು ಅಂದಾಜಿಸಲಾಗಿದೆ.ಅಷ್ಟೇ ಅಲ್ಲದೆ, ಕಳ್ಳರು ಮನೆಯ ಸ್ಲ್ಯಾಬ್ ಮೇಲೆ ಒಣಗಲು ಹಾಕಿದ್ದ ಎರಡು ಜೊತೆ ಬಟ್ಟೆಗಳನ್ನೂ ಕದ್ದೊಯ್ದಿದ್ದಾರೆ.
ಇದೇ ಮನೆಯ ನೆಲಮಹಡಿಯಲ್ಲಿ ಇದ್ದ ಮನೆಯಲ್ಲಿಯೂ ಸಹ ಕಳ್ಳರು ಕಳ್ಳತನ ಮಾಡಿದ್ದು. ಒಟ್ಟು ₹5,000 ಬೆಲೆಬಾಳುವ 10 ಜೊತೆ ಚಪ್ಪಲಿ ಮತ್ತು ಶೂಗಳು ಸಹ ಕಳ್ಳತನವಾಗಿವೆ. ಹೀಗೆ ಎರಡೂ ಕಳವುಗಳನ್ನು ಸೇರಿ ಒಟ್ಟು 1.34 ಲಕ್ಷ ಮೌಲ್ಯದ ಚಪ್ಪಲಿ ಹಾಗೂ ಶೂಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
Shoes and Slippers theft


