ಸಾಗರ ಟೌನ್ ಪೊಲೀಸರ ಕಾರ್ಯಾಚರಣೆ! ದಾವಣಗೆರೆ ಮಹಿಳೆ ಚಿನ್ನ ಕದ್ದಿದ್ದ ಪ್ರಕರಣ ಸೇರಿ 2 ಕೇಸ್​ ಕ್ಲೀಯರ್

ajjimane ganesh

Sagar Police Arrest Two Thieves  ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್ ಪೊಲೀಸ್​ ಠಾಣೆಯ ಪೊಲೀಸರು ಕಳ್ಳತನ ಪ್ರಕರಣಗಳನ್ನ ಭೇದಿಸಿದ್ದಾರೆ. ಎರಡು ಪ್ರಕರಣಗಳಲ್ಲಿ 44 ಗ್ರಾಂ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಆರೋಪಿಗಳನ್ನು ಸಹ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. Sagar Police Arrest Two Thieves 

ನಗರದ ಅಶೋಕ ರಸ್ತೆಯ ನಿವಾಸಿ ದರ್ಶನ್ ಹಾಗೂ ಕಳವು ಮಾಡಿದ ಮಾಲನ್ನು ಪಡೆದ ಜೆ.ಪಿ. ನಗರದ ನಿವಾಸಿ ಬಂದಿತ ಆರೋಪಿಗಳು 

- Advertisement -

ಭೂಮಿ ಕೊಡಿಸುವುದಾಗಿ ರೈತರಿಗೆ ವಂಚನೆ! ಬೇಳೂರು ಗೋಪಾಲ ಕೃಷ್ಣ ಎಚ್ಚರಿಕೆ ಮತ್ತು ಸಾಗರ ಟೌನ್ ಸ್ಟೇಷನ್​ ವಿಚಾರ

ಈ ಬಗ್ಗೆ  ಮಾಹಿತಿ ನೀಡಿದ ಎಎಸ್‌ಪಿ ಬೆನಕ ಪ್ರಸಾದ್, ಜೆಪಿ ನಗರದ ವಸಂತ ಲಕ್ಷ್ಮಿ ಎಂಬುವವರ ಮನೆಯ ದೇವರ ಕೋಣೆಯಿಂದ 24 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿತ್ತು . ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

Sagar Police Recover 44 Grams Gold Ornaments, Two Thieves Arrested in Separate Theft Cases"Sagar Police Arrest Two Thieves
Sagar Police Recover 44 Grams Gold Ornaments, Two Thieves Arrested in Separate Theft Cases”Sagar Police Arrest Two Thieves

ಇನ್ನೊಂದು ಪ್ರಕರಣದಲ್ಲಿ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದಾವಣಗೆರೆಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ನಯನಾ ಎಂಬುವವರ ಬ್ಯಾಗ್‌ನಿಂದ ಚಿನ್ನಾಭರಣ ಕಳವು ಮಾಡಲಾಗಿತ್ತು. 20 ಗ್ರಾಂ ಬಂಗಾರದ ಆಭರಣಗಳನ್ನು ಕಳುವು ಮಾಡಿದ್ದ ಪ್ರಕರಣದಲ್ಲಿ ಭದ್ರಾವತಿಯ ಮಹಿಳೆಯೊಬ್ಬರನ್ನ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. Sagar Police Arrest Two Thieves 

ಈ ಕಾರ್ಯಾಚರಣೆಯಲ್ಲಿ  ನಗರ ಠಾಣೆಯ ಇನ್‌ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್, ಎಎಸ್ಐ ಮೀರಾಬಾಯಿ, ಅಪರಾಧ ವಿಭಾಗದ ಸಿಬ್ಬಂದಿ ವಿಶ್ವನಾಥ, ಸನಾವುಲ್ಲಾ, ಲೋಕೇಶ್ ಮತ್ತು ಕೃಷ್ಣಮೂರ್ತಿ ಸೇರಿದಂತೆ ಪೊಲೀಸ್ ಸಿಬ್ಬಂದಿಯ ತಂಡ ಪಾಲ್ಗೊಂಡಿತ್ತು./ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Sagar Police Recover 44 Grams Gold Ornaments, Two Thieves Arrested in Separate Theft Cases” Sagar Police Arrest Two Thieves

Share This Article